ಶನಿ ಜಯಂತಿ: ಈ ಕಾರ್ಯಕ್ಕೆ ಮುಂದಾದ್ರೆ ಶುಭ ಫಲಗಳು ಗ್ಯಾರಂಟಿ!
ಶನಿ ದೇವರನ್ನು ಮೆಚ್ಚಿಸಲು ಶನಿ ಜಯಂತಿಯ ದಿನವನ್ನು ವಿಶೇಷವೆಂದು ಪರಿಗಣಿಸಲಾಗುತ್ತೆ. ಈ ದಿನ ಕೆಲವು ಕ್ರಮಗಳನ್ನು ಮಾಡೋದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ.
ಶನಿ ದೇವರ (Shani Dev) ಹೆಸರನ್ನು ಕೇಳಿದಾಗ ಜನರು ಭಯಭೀತರಾಗುತ್ತಾರೆ. ಶನಿ ದೇವರು ಯಾವಾಗಲೂ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ ಎಂದು ಜನರು ಭಾವಿಸುತ್ತಾರೆ, ಆದರೆ ಇದು ಹಾಗಲ್ಲ. ಶನಿ ದೇವನಿಗೆ ನವಗ್ರಹಗಳಲ್ಲಿ ನ್ಯಾಯಾಧೀಶನ ಸ್ಥಾನಮಾನವಿದೆ. ಶನಿ ದೇವರು ಪ್ರತಿಯೊಬ್ಬ ವ್ಯಕ್ತಿಗೆ ಅವನ ಕರ್ಮಕ್ಕೆ ಅನುಗುಣವಾಗಿ ಫಲ ನೀಡುತ್ತಾನೆ. ಆದರೆ, ಶನಿಯ ಸಾಡೇ ಸಾಥ್ ಮತ್ತು ದೈಯಾ ಸಮಯದಲ್ಲಿ ಶನಿ ದೇವರು ಸ್ವಲ್ಪ ನೋವನ್ನು ಕೊಡುತ್ತಾನೆ ಎಂದು ಹೇಳುತ್ತಾರೆ.
ಜೀವಿತಾವಧಿಯಲ್ಲಿ ಒಮ್ಮೆ, ಪ್ರತಿಯೊಬ್ಬ ವ್ಯಕ್ತಿಯು ಶನಿ ಮತ್ತು ಸಾಡೇ ಸಾಥ್ (Sade saath) ನೆರಳನ್ನು ಎದುರಿಸಬೇಕಾಗುತ್ತೆ . ಶನಿಯ ಅಶುಭ ಪರಿಣಾಮಗಳನ್ನು ತೆಗೆದು ಹಾಕಲು ಮತ್ತು ಶನಿಯ ಅನುಗ್ರಹವನ್ನು ಪಡೆಯಲು ಶನಿ ಜಯಂತಿಯ ದಿನ ವಿಶೇಷ. ಈ ವರ್ಷ ಮೇ 19, 2023 ರಂದು ಶನಿ ಜಯಂತಿ ಇದೆ. ಶನಿ ಜಯಂತಿಯ ದಿನದಂದು ಯಾವ ರಾಶಿಯವರು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯಿರಿ-
ಈ ರಾಶಿಗಳ ಮೇಲೆ ಶನಿಯ ನೆರಳು ಇರುತ್ತೆ-
ಪ್ರಸ್ತುತ, ಕುಂಭ (Aquarius), ಮೀನ ಮತ್ತು ಮಕರ ರಾಶಿಯವರ ಮೇಲೆ ಶನಿಯ ಸಾಡೇ ಸಾಥ್ ನಡೆಯುತ್ತಿದೆ. ಶನಿಯ ಸಾಡೇ ಸಾಥ್‌ನ ಮೊದಲ ಹಂತವು ಮೀನ ರಾಶಿಯಲ್ಲಿ, ಎರಡನೇ ಹಂತವು ಕುಂಭ ರಾಶಿಯಲ್ಲಿ ಮತ್ತು ಮೂರನೇ ಹಾಗೂ ಅಂತಿಮ ಹಂತವು ಮಕರ ರಾಶಿಯಲ್ಲಿ ನಡೆಯುತ್ತಿದೆ. ಶನಿಯ ನೆರಳು ಕರ್ಕಾಟಕ ಮತ್ತು ವೃಶ್ಚಿಕ ರಾಶಿ ಮೇಲೆ ಪರಿಣಾಮ ಬೀರುತ್ತೆ.
ಶನಿಯ ಸಾಡೇ ಸಾಥ್ ಮತ್ತು ದೈಯಾದಿಂದ ಬಳಲುತ್ತಿರುವ ಜನರು ಶನಿ ಜಯಂತಿಯ(Shani Jayanti) ದಿನದಂದು ಈ ಪರಿಹಾರಗಳನ್ನು ಮಾಡಬೇಕು-
ಶನಿಯ ಅನುಗ್ರಹ ಪಡೆಯಲು, ಶನಿ ಜಯಂತಿ ದಿನದಂದು ಶನಿ ದೇವಾಲಯದಲ್ಲಿ ಶನಿ ದೇವರಿಗೆ ಉದ್ದು, ಕಪ್ಪು ಎಳ್ಳು (Black Sesame), ಬೆಲ್ಲವನ್ನು ಅರ್ಪಿಸಿ. ಇದರ ನಂತರ, ಗೋಧಿಹಿಟ್ಟಿನಿಂದ ಮಾಡಿದ ಚೌಮುಖ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಮತ್ತು ಅದನ್ನು ಬೆಳಗಿಸಿ ಶನಿ ದೇವರ ಆರತಿ ಮಾಡಿ.
ಶನಿ ಜಯಂತಿಯ ದಿನದಂದು, ಶನಿ ದೇವರನ್ನು ಮೆಚ್ಚಿಸಲು ಕಪ್ಪು ಇರುವೆಗಳಿಗೆ (Black ant) ತಿನ್ನಲು ಹಿಟ್ಟಿಗೆ ಸಕ್ಕರೆಯನ್ನು ಸೇರಿಸಿ ನೀಡಿ. ಜ್ಯೋತಿಷ್ಯದ ಪ್ರಕಾರ, ಇದನ್ನು ಮಾಡೋದರಿಂದ, ಪ್ರತಿಯೊಬ್ಬರು ಶನಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.
ಶನಿ ದೇವರ ಆಶೀರ್ವಾದವನ್ನು ಪಡೆಯಲು, ಅಗತ್ಯವಿರುವ ವ್ಯಕ್ತಿಯು ಶನಿ ಸಂಬಂಧಿತ ವಸ್ತುಗಳನ್ನು ದಾನ ಮಾಡಬೇಕು. ಉದಾಹರಣೆಗೆ, ಕಪ್ಪು ಬೂಟುಗಳು, ಕಪ್ಪು ಛತ್ರಿ(Black Umbrella), ಕಪ್ಪು ಎಳ್ಳು, ಕಪ್ಪು ಬಟ್ಟೆಗಳು, ಕಪ್ಪು ಕಂಬಳಿಗಳು ಮತ್ತು ಖಿಚಡಿಯನ್ನು ದಾನ ಮಾಡಬೇಕು.
ಶನಿ ಜಯಂತಿಯ ದಿನದಂದು, ಶನಿ ದೇವರ ಆಶೀರ್ವಾದ ಪಡೆಯಲು ಶನಿ ಚಾಲೀಸಾವನ್ನು(Shani Chalisa) ಪಠಿಸಬೇಕು. ಅಲ್ಲದೇ ಶನಿಯನ್ನು ಮೆಚ್ಚಿಸಲು, ಶನಿ ಜಯಂತಿಯ ದಿನದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು.