ದಿನಾಂಕಗಳಲ್ಲಿ ಹುಟ್ಟಿದವರು ಯಾರ ಕೆಳಗೂ ಕೆಲಸ ಮಾಡೋಕೆ ಇಷ್ಟಪಡಲ್ಲ!
ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿರುತ್ತಾರೆ. ಆ ಗುಣಲಕ್ಷಣಗಳೇ ಅವರನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ಈ ದಿನಾಂಕಗಳಲ್ಲಿ ಹುಟ್ಟಿದವರು ಬೇಗನೆ ಯಾರ ಕೆಳಗೂ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಹಾಗಾದರೆ.. ಈ ದಿನಾಂಕಗಳಲ್ಲಿ ಹುಟ್ಟಿದವರಲ್ಲಿರುವ ವಿಶೇಷ ಗುಣಗಳೇನು ಎಂಬುದನ್ನು ಸಹ ತಿಳಿಯೋಣ..

ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ಒಂದೊಂದು ವಿಶೇಷತೆ ಹೊಂದಿರುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಅವರ ವ್ಯಕ್ತಿತ್ವ, ಅವರೊಳಗಿನ ವಿಶೇಷತೆಗಳು ಹೊರಬರುತ್ತವೆ. ಸಂಖ್ಯಾಶಾಸ್ತ್ರದ ಪ್ರಕಾರ ನಾವು ಹುಟ್ಟಿದ ದಿನಾಂಕದ ಆಧಾರದ ಮೇಲೆ ವ್ಯಕ್ತಿತ್ವವನ್ನು, ಮನಸ್ಥಿತಿಯನ್ನು ತಿಳಿಯಬಹುದು. ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಬೇರೆಯವರ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ತಾವೇ ನಂಬರ್ ಒನ್ ಅಂತಾ ಫೀಲ್ ಮಾಡ್ತಾರೆ. ತಾವೇ ನಾಲ್ಕು ಜನರಿಗೆ ಕೆಲಸ ಕೊಡುವವರು, ತಾವೇ ಇನ್ನೊಬ್ಬರ ಹತ್ತಿರ ಕೆಲಸ ಮಾಡೋಕೆ ಸಾಧ್ಯವಿಲ್ಲ ಅಂತಾ ಅಂದುಕೊಳ್ಳುತ್ತಾರೆ. ಹಾಗಾದರೆ ಆ ದಿನಾಂಕಗಳು ಯಾವುವು ನೋಡೋಣ..
ಯಾವುದೇ ತಿಂಗಳಿನಲ್ಲಿ 1, 10, 19, 28 ರಂದು ಜನಿಸಿದವರನ್ನು ಸೂರ್ಯನು ಆಳುತ್ತಾನೆ. ಹಾಗಾಗಿ, ಈ ವ್ಯಕ್ತಿಗಳು ಅಪರಿಮಿತ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಎಲ್ಲದರಲ್ಲೂ ಯಶಸ್ಸು ಸಾಧಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಬೇಗನೆ ಯಾರ ಕೆಳಗೂ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಹಾಗಾದರೆ.. ಈ ದಿನಾಂಕಗಳಲ್ಲಿ ಹುಟ್ಟಿದವರಲ್ಲಿರುವ ವಿಶೇಷ ಗುಣಗಳೇನು ಎಂಬುದನ್ನು ಸಹಾ ತಿಳಿದುಕೊಳ್ಳೋಣ..
ಯಾವುದೇ ತಿಂಗಳಿನಲ್ಲಿ 1, 10, 19, 28 ರಂದು ಹುಟ್ಟಿದವರೆಲ್ಲರೂ ಸಂಖ್ಯಾಶಾಸ್ತ್ರದ ಪ್ರಕಾರ ನಂಬರ್ 1 ಕೆಳಗೆ ಬರುತ್ತಾರೆ. ಇವರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ಯಾರ ಮೇಲೂ ಅವಲಂಬಿತರಾಗಲು ಇಷ್ಟಪಡುವುದಿಲ್ಲ. ಬೇರೆಯವರ ಕೆಳಗೆ ಕೆಲಸ ಮಾಡುವುದಕ್ಕಿಂತ ತಾವೇ ಸ್ವಂತವಾಗಿ ಅಭಿವೃದ್ಧಿ ಹೊಂದಬಲ್ಲೆವು ಎಂದು ಭಾವಿಸುತ್ತಾರೆ. ಈ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತವೆ. ಒಳ್ಳೆಯ ಲೀಡರ್ ಆಗ್ತಾರೆ. ಅವರು ತಮ್ಮ ಜೊತೆಗೆ ತಮ್ಮ ಸುತ್ತಲಿರುವವರನ್ನು ಕೂಡಾ ಮುಂದೆ ನಡೆಸುತ್ತಾರೆ. ಇವರಿಗೆ ಧೈರ್ಯ ಕೂಡಾ ತುಂಬಾ ಹೆಚ್ಚು. ಕಷ್ಟ ಸಮಯದಲ್ಲಿ ಕೂಡಾ ಸ್ವಲ್ಪವೂ ಕುಗ್ಗದೆ ಧೈರ್ಯವಾಗಿ ಮುಂದೆ ಹೋಗುತ್ತಾರೆ.
ಗುರುತಿಸುವಿಕೆ.. ಈ ನಂಬರ್ 1 ವ್ಯಕ್ತಿಗಳೆಲ್ಲಾ ತಮಗೊಂದು ವಿಶೇಷ ಗುರುತು ಸಿಗಬೇಕು ಅಂತಾ ಬಯಸ್ತಾರೆ. ನಿಜಾಯಿತಿಯಿಂದ ಇರ್ತಾರೆ. ಅಂಕಿತ ಭಾವದಿಂದ ಕೆಲಸ ಮಾಡ್ತಾರೆ. ಅವರಲ್ಲಿ ಸೃಜನಶೀಲತೆ ಕೂಡಾ ತುಂಬಾ ಹೆಚ್ಚು. ಇವರಿಗೆ ಪಟ್ಟು ಕೂಡಾ ತುಂಬಾ ಹೆಚ್ಚು. ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಬಿಟ್ಟುಕೊಡಲ್ಲ. ಯಾವುದೇ ಸಮಸ್ಯೆಗಳು ಬಂದರೂ ತಡೆದುಕೊಳ್ಳುತ್ತಾರೆ. ಆ ನಂತರ ಆ ಸಮಸ್ಯೆಗಳನ್ನೇ ತಮಗೆ ಅನುಕೂಲಕರವಾಗಿ ಬದಲಾಯಿಸಿಕೊಳ್ಳುತ್ತಾರೆ.
ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಕೆಂಪು, ಕಿತ್ತಳೆ, ಹಳದಿ, ಗೋಲ್ಡನ್ ಛಾಯೆಗಳು ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣಗಳು ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ವಿಶ್ವಾಸ, ಶಕ್ತಿಯನ್ನು ನೀಡುತ್ತವೆ. ಅವರ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ. ಇವರ ಅದೃಷ್ಟದ ರತ್ನ ರೂಬಿ ಇವರು ಧರಿಸಿದರೆ ಅವರ ಅದೃಷ್ಟ ಹೆಚ್ಚಾಗುತ್ತದೆ. ಗೆಲುವು ಸಾಧಿಸಲು ಸಹಾಯ ಮಾಡುತ್ತದೆ.