ದೇವರ ಅಭಿಷೇಕಕ್ಕೆ ಮಾತ್ರವಲ್ಲ ಪಂಚಾಮೃತದಿಂದ ಇದೆ ಇಷ್ಟೊಂದು ಲಾಭ
ಪೂಜೆಯಲ್ಲಿ ಪಂಚಾಮೃತಕ್ಕೆ ವಿಶೇಷ ಮಹತ್ವ ಇದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯಿಂದ ತಯಾರಿಸುವ ಈ ಪಂಚಾಮೃತ ರುಚಿ ಮಾತ್ರವಲ್ಲ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಪಂಚಾಮೃತದ ಲಾಭಗಳೇನು ಗೊತ್ತಾ?

ಪಂಚಾಮೃತ ಅಭಿಷೇಕ
ಹಿಂದೂ ಧರ್ಮದಲ್ಲಿ ದೇವರ ಅಭಿಷೇಕ ವಿಶೇಷವಾದದ್ದು. ಮೊದಲು ನೀರಿನಿಂದ ದೇವರಿಗೆ ಅಭಿಷೇಕ ಮಾಡಿ ನಂತ್ರ ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ. ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಐದು ಅಮೃತ ಸೇರಿಸೋದ್ರಿಂದ ಅದಕ್ಕೆ ಪಂಚಾಮೃತ ಎನ್ನುವ ಹೆಸರು ಬಂದಿದೆ. ಈ ಪಂಚಾಮೃತವನ್ನು ದೇವರಿಗೆ ಅರ್ಪಿಸಿದ್ರೆ ಮಾತ್ರವಲ್ಲ ಅದನ್ನು ನೀವು ಸೇವನೆ ಮಾಡೋದ್ರಿಂದ ಸಾಕಷ್ಟು ಲಾಭವಿದೆ.
ಪಂಚಾಮೃತದ ಪ್ರಯೋಜನಗಳು
ದೇವರನ್ನು ಪಂಚಾಮೃತದಿಂದ ಸ್ನಾನ ಮಾಡಿಸಿದಂತೆ ನೀವೂ ಸ್ನಾನಕ್ಕೆ ಈ ಐದೂ ಪದಾರ್ಥ ಬಳಸಿದ್ರೆ ಅದು ನಿಮ್ಮ ದೇಹದ ಕಾಂತಿಯನ್ನು ಹೆಚ್ಚಿಸುತ್ತದೆ. ಪಂಚಾಮೃತದ ಐದು ಅಂಶಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು ಮತ್ತು ಫೈಬರ್ನಂತಹ ಅಂಶಗಳನ್ನು ಒಳಗೊಂಡಿದೆ. ಇದು ಅನೇಕ ರೋಗಗಳಿಂದ ರಕ್ಷಿಸುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
ಪಂಚಾಮೃತಕ್ಕೆ ತುಳಸಿ ಎಲೆ
ಪಂಚಾಮೃತಕ್ಕೆ ಒಂದು ತುಳಸಿ ಕುಡಿಯನ್ನು ಹಾಕಿ, ಅದನ್ನು ಪ್ರತಿ ದಿನ ಸೇವನೆ ಮಾಡೋದ್ರಿಂದ ಜೀವನದುದ್ದಕ್ಕೂ ಯಾವುದೇ ರೀತಿಯ ಕಾಯಿಲೆ ಬರೋದಿಲ್ಲ. ದುಃಖಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಗುತ್ತದೆ.
ಪಂಚಾಮೃತದ ಹಾಲು
ಪಂಚಾಮೃತದಲ್ಲಿರುವ ಹಾಲು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಪಂಚಾಮೃತಕ್ಕೆ ಬಳಸುವ ಹಾಲು ಯೋಗ್ಯ ಮಕ್ಕಳು, ಸದ್ಗುಣಶೀಲ ಸಂಗಾತಿ, ರಾಜಮನೆತನದ ಆಶೀರ್ವಾದ, ಗೌರವ ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು ಸಹಾಯವಾಗುತ್ತದೆ.
ಜೇನುತುಪ್ಪದಿಂದ ಲಾಭ
ಪಂಚಾಮೃತದಲ್ಲಿ ಬೆರೆಸಿದ ಜೇನುತುಪ್ಪವು ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ. ಆಧ್ಯಾತ್ಮಿಕತೆ ಮತ್ತು ಧರ್ಮದ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ. ಪಂಚಾಮೃತ ತಯಾರಿಸಿ ಸೇವಿಸುವ ಜಾಗದಲ್ಲಿ ಜನರು ಸಾಮರಸ್ಯದಿಂದ ಬದುಕುತ್ತಾರೆ. ಪಂಚಾಮೃತಕ್ಕೆ ನೀವು ಜೇನುತುಪ್ಪ ಹಾಕಿ ದೇವರಿಗೆ ಅಭಿಷೇಕ ಮಾಡೋದ್ರಿಂದ ಸಾಲ ಮತ್ತು ಬಡತನದಿಂದ ಮುಕ್ತಿ ಸಿಗುತ್ತದೆ. ಕಾನೂನು ಸಮಸ್ಯೆ, ಶತ್ರು ಭಯ ಮತ್ತು ಅಕಾಲಿಕ ಮರಣದ ಭಯದಿಂದ ಮುಕ್ತಿ ಸಿಗುತ್ತದೆ.

