ಇವರನ್ನ ಲವ್ ಮಾಡೋದು ಅಂದ್ರೆ ರಿಸ್ಕ್ ತೆಗೆದುಕೊಂಡಂತೆ! ಪ್ರೀತ್ಸೋ ಮೊದ್ಲು ಯೋಚನೆ ಮಾಡಿ
Numerology and Love: ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಪ್ರೀತಿಯಲ್ಲಿ ಎಷ್ಟೊಂದು ಮುಳುಗಿರುತ್ತಾರೆ ಅಂದ್ರೆ, ಪ್ರೀತಿಸುವ ಸಂಗಾತಿಗೆ ಅವರನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಯಾವ ದಿನಾಂಕದಲ್ಲಿ ಜನಿಸಿದವರನ್ನು ಪ್ರೀತಿಸೋದು ಅಂದ್ರೆ ರಿಸ್ಕ್ ತೆಗೆದುಕೊಂಡಂತೆ?

ಸಂಖ್ಯಾಶಾಸ್ತ್ರ ಮತ್ತು ಪ್ರೀತಿ
ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಜನಿಸಿದವರು ಪ್ರೀತಿಯನ್ನು ಅತ್ಯಂತ ಶ್ರದ್ಧೆಯಿಂದ, ಹೃದಯಪೂರ್ವಕವಾಗಿ, ಗಾಢವಾಗಿ ನಿಭಾಯಿಸುತ್ತಾರೆ. ಆದರೆ ಅವರ ಕೆಲವು ಗುಣಗಳು ಕೆಲವೊಮ್ಮೆ ಸಂಗಾತಿಗೆ ಅವರನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು.
ಮೂಲಾಂಕ 1
ಯಾವುದೇ ತಿಂಗಳ 1, 10, 19 ಅಥವಾ 28ರಂದು ಜನಿಸಿದವರ ಮೂಲಾಂಕ 1 ಆಗಿರುತ್ತದೆ. ಈ ಮೂಲಾಂಕದ ಅಧಿಪತಿ ಸೂರ್ಯ, ಅಂದರೆ ಗ್ರಹಗಳ ರಾಜ. ಅದರಿಂದಲೇ ಮೂಲಾಂಕ 1 ಹೊಂದಿರುವವರಲ್ಲಿ ನಾಯಕತ್ವ, ಆತ್ಮವಿಶ್ವಾಸ ಮತ್ತು ಪ್ರಭಾವಿ ವ್ಯಕ್ತಿತ್ವ ಸ್ಪಷ್ಟವಾಗಿ ಕಾಣುತ್ತದೆ.
ಡಾಮಿನೇಟಿಂಗ್ ಆಗಿರುತ್ತಾರೆ
ಮೂಲಾಂಕ 1 ಹೊಂದಿರುವವರು ಪ್ರೀತಿಯಲ್ಲಿ ತಮ್ಮ ಮಾತಿಗೆ ಹೆಚ್ಚಿನ ಮಹತ್ವ ಸಿಗಬೇಕೆಂದು ಬಯಸುತ್ತಾರೆ. ಅನೇಕ ಬಾರಿ ಸಂಗಾತಿಯ ನಿರ್ಧಾರಗಳ ಮೇಲೂ ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ. ಇದರಿಂದ ಕೆಲವೊಮ್ಮೆ ಅವರು ಡಾಮಿನೇಟಿಂಗ್ ಆಗಿ ಕಾಣಬಹುದು.
ಅಹಂಕಾರದಿಂದ ಸಂಬಂಧಕ್ಕೆ ಹಾನಿ
ಇವರಿಗೆ ಸ್ವಾಭಿಮಾನ ತುಂಬಾ ಹೆಚ್ಚು. ಜಗಳವಾದಾಗ ಮೊದಲಾಗಿ ಕ್ಷಮೆ ಕೇಳುವುದು ಅಥವಾ ತಗ್ಗುವುದು ಇವರಿಗೆ ಸುಲಭವಲ್ಲ. ತಮ್ಮ ಸಂಗಾತಿಯೇ ಮುಂದೆ ಬಂದು ಸಾರಿ ಕೇಳಬೇಕು. ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು ಎಂದು ಇವರು ಬಯಸುತ್ತಾರೆ.
ನಿಷ್ಠಾವಂತರು, ಆದರೆ ನಿರೀಕ್ಷೆಗಳು ದೊಡ್ಡವು
ಮೂಲಾಂಕ 1 ಹೊಂದಿರುವವರು ಪ್ರೀತಿಯಲ್ಲಿ ತುಂಬಾ ನಿಷ್ಠಾವಂತರಾಗಿರುತ್ತಾರೆ. ಆದರೆ ತಮ್ಮ ಸಂಗಾತಿಯೂ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. ನಿರೀಕ್ಷೆಗಳು ಈಡೇರದಿದ್ದರೆ ಸಂಬಂಧದಲ್ಲಿ ಒತ್ತಡ ಉಂಟಾಗಬಹುದು.
ಇಷ್ಟಪಟ್ಟವರಿಗಾಗಿ ಏನು ಬೇಕಾದ್ರೂ ಮಾಡ್ತಾರೆ
ಈ ಮೂಲಾಂಕದವರು ಯಾರನ್ನು ಇಷ್ಟಪಡುತ್ತಾರೋ, ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಒಮ್ಮೆ ಮನಸ್ಸಿನಲ್ಲಿ ಸ್ಥಾನ ಪಡೆದರೆ ಅವರಿಗಾಗಿ ಯಾವುದೇ ಮಟ್ಟಕ್ಕೂ ಹೋಗುವ ಸ್ವಭಾವ ಇವರದ್ದಾಗಿರುತ್ತದೆ. ಮೋಸ ಮಾಡುವ ಬುದ್ದಿ ಇವರದ್ದಲ್ಲ.
ಇವರನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
ನೇರವಾಗಿ ಅವರ ಅಹಂಕಾರಕ್ಕೆ ನೋವುಂಟು ಮಾಡುವ ಮಾತುಗಳನ್ನು ತಪ್ಪಿಸುವುದು ಉತ್ತಮ. ಕೋಪಕ್ಕಿಂತ ಪ್ರೀತಿ, ಗೌರವ ಮತ್ತು ಅರ್ಥ ಆಗುವಂತೆ ಮಾತನಾಡಿದರೆ ಅವರು ಸುಲಭವಾಗಿ ನಿಮ್ಮ ಮಾತನ್ನು ಕೇಳುತ್ತಾರೆ. ಒಟ್ಟಿನಲ್ಲಿ, ಮೂಲಾಂಕ 1ನ್ನು ಹೊಂದಿರುವವರು ಪ್ರೀತಿಯಲ್ಲಿ ಬಲವಾದ ವ್ಯಕ್ತಿತ್ವ ಹೊಂದಿದವರು. ಸರಿಯಾಗಿ ಅರ್ಥಮಾಡಿಕೊಂಡರೆ ಇವರ ಪ್ರೀತಿ ಜೀವನಪೂರ್ತಿ ನಿಮಗಾಗಿ ಮೀಸಲಿರುತ್ತದೆ.

