MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Festivals
  • ಮಹಿಳಾ ದೌರ್ಜನ್ಯದ ವಿರುದ್ಧ ಬೀದಿಗಿಳಿದ ನವದುರ್ಗೆಯರು...!

ಮಹಿಳಾ ದೌರ್ಜನ್ಯದ ವಿರುದ್ಧ ಬೀದಿಗಿಳಿದ ನವದುರ್ಗೆಯರು...!

ವರದಿ: ಭರತ್ ರಾಜ್ ಏಷ್ಯಾನೆಟ್ಫೋಟೋ: ದಯಾನಂದ ಕುಕ್ಕಾಜೆಅವರೆಲ್ಲಾ ಮಾಡೆಲಿಂಗ್ ಜೊತೆಗೆ ನೃತ್ಯದಲ್ಲಿ ಆಸಕ್ತಿ ಹೊಂದಿದ ಮಹಿಳೆಯರ ತಂಡ ಕಟ್ಟಿಕೊಂಡಿದ್ದವರು. ಹತ್ತಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿಯೇ ಭಾಗವಹಿಸ್ತಿದ್ದ ಆ ಮಹಿಳೆಯರು ಈ ಬಾರಿಯ ನವರಾತ್ರಿಗೆ ಹೊಸ ಕಾನ್ಸೆಪ್ಟ್ ಒಂದನ್ನು ರೂಪಿಸೋ ಯೋಜನೆ ಹಾಕಿದ್ರು. ಅದರಂತೆ ಆ ಒಂಬತ್ತು ಮಹಿಳೆಯರು ನವದುರ್ಗೆಯರ ಅವತಾರ ತಾಳಿ ಅಸುರ ಸಂಹಾರದ ಕಲ್ಪನೆ ಮೂಲಕ ಅತ್ಯಾಚಾರ, ಮಹಿಳಾ ದೌರ್ಜನ್ಯದ ವಿರುದ್ದ ಹೊಸ ಸಂದೇಶ ಸಾರಿದ್ದಾರೆ.

2 Min read
Author : Sushma Hegde
| Updated : Oct 16 2023, 03:15 PM IST
Share this Photo Gallery
  • FB
  • TW
  • Linkdin
  • Whatsapp
15

 ನವರಾತ್ರಿ ಒಂಭತ್ತು ದಿನಗಳ ಕಾಲ ದೇವಿಯನ್ನ ಅತೀವ ಭಕ್ತಿಯಿಂದ ಪೂಜಿಸೋ ಹಬ್ಬ. ಒಂಭತ್ತು ದಿನಗಳ ಕಾಲ ನಡೆದ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದ ಕಥೆಯನ್ನ ನವರಾತ್ರಿ ಪ್ರತಿನಿಧಿಸುತ್ತದೆ. ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25

ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಇಟ್ಟು ಪೂಜಿಸಲಾಗುತ್ತದೆ. ರಾಜ್ಯದಲ್ಲಿ ದಸರಾ ಎಂದು ಕರೆಯಲ್ಪಡೋ ಈ ನವರಾತ್ರಿ ಸಂಭ್ರಮದಲ್ಲಿ ಮಂಗಳೂರು ದಸರಾ ಮತ್ತಷ್ಟು ಖ್ಯಾತಿ ಪಡೆದಿದೆ. ಈ ಹೊತ್ತಲ್ಲಿ ಮಂಗಳೂರಿನ ಮಹಿಳೆಯರ ತಂಡವೊಂದು ವಿಭಿನ್ನ ಪ್ರಯತ್ನ ಮಾಡಿದ್ದು, ಅಸುರ ಸಂಹಾರದ ಕಲ್ಪನೆ ಇಟ್ಟುಕೊಂಡು ದೇಶದಲ್ಲಿ ನಡೀತಿರೋ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದ ವಿರುದ್ದ ಸಂದೇಶ ಸಾರಿದ್ದಾರೆ.  

35

ಮಂಗಳೂರು ದಸರಾ ಸಂಭ್ರಮಕ್ಕೆ ಮಹಿಳೆಯರ ನವದುರ್ಗೆ ಕಾನ್ಸೆಪ್ಟ್ ಮತ್ತಷ್ಟು ಮೆರಗು ನೀಡಿದೆ. ಬಣ್ಣ ಹಚ್ಚಿ ಥೇಟ್ ನವದುರ್ಗೆಯರ ಅವತಾರ ತಾಳಿದ ಮಂಗಳೂರಿನ ಮಹಿಳೆಯರು, ಅಸುರ ಸಂಹಾರದ ಕಲ್ಪನೆಯಡಿ ನವರಾತ್ರಿಗೆ ನವದುರ್ಗೆಯರ ಅವತಾರ ತಾಳಿ ವಿಭಿನ್ನ ಸಂದೇಶ ಸಾರಿದ್ದಾರೆ. ಮಿಸೆಸ್ ಇಂಡಿಯಾ ಮಂಗಳೂರು ವಿಜೇತೆ ಸವಿತಾ ಚೇತನ್ ನೇತೃತ್ವದ ಟೀಂ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ವಿಭಿನ್ನ ಸಂದೇಶದ ಕಲ್ಪನೆಯನ್ನ ಜನರಿಗೆ ತಲುಪಿಸಿದೆ.

45

 ಮಂಗಳೂರಿನ ‌ಮಠದಕಣಿಯಲ್ಲಿ ನವದುರ್ಗೆಯರ ವೇಷ ಧರಿಸಿ ಅಸುರ ಸಂಹಾರ ಕಥೆಯನ್ನ ಮರು ಸೃಷ್ಟಿ ಮಾಡಲಾಗಿದೆ. ಶೈಲಾಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಷ್ಮಾಂಡಾ, ಸ್ಕಂದಮಾತಾ, ಕಾಳರಾತ್ರಿ, ಕಾತ್ಯಾಯನಿ, ಮಹಾಗೌರಿ ಮತ್ತು ಸಿಧ್ಧಿಧಾತ್ರಿಯ ಅವತಾರ ದಲ್ಲಿ ಮಾಡೆಲಿಂಗ್ ಕ್ಷೇತ್ರದ ಮೂವರು ಹಾಗೂ ಡ್ಯಾನ್ಸ್ ಟೀಂನ ಆರು ಮಹಿಳೆಯರ ತಂಡ ಭಾಗಿಯಾಗಿದೆ.  ನವದುರ್ಗೆಯರಿಗೆ ಮಂಗಳೂರಿನ ಪ್ರಿಯಾ ಬಾಳಿಗಾ ಮೇಕಪ್ ಟೀಂ ಬಣ್ಣ ಹಚ್ಚಿದ್ದು, ಸವಿತಾ‌ ಚೇತನ್, ಸಪ್ನಾ, ಮಮತಾ, ಕೀರ್ತಿ,  ಶ್ರದ್ದ, ಸೌಮ್ಯಲತಾ, ಶಾರ್ಲೆಟ್, ರಕ್ಷಾ, ಸೌಮ್ಯ ನವದುರ್ಗೆಯರಾಗಿ ಬದಲಾಗಿದ್ದರು. 

55

ಇದಕ್ಕೆ ಪೂರಕ ಎನ್ನುವಂತೆ ಸರಸ್ವತಿ ಅರ್ಟ್ಸ್ ಮತ್ತು ಲಲಿತಾ ಕಲಾ ಆರ್ಟ್ಸ್ ವಸ್ತುಗಳನ್ನು ಬಳಸಿ ಅಸುರ ಸಂಹಾರ ಕಲ್ಪನೆ ಮರುಸೃಷ್ಟಿ ಮಾಡಲಾಗಿತ್ತು. ಮಂಗಳೂರು ದಸರಾ ಸಂಭ್ರಮದಲ್ಲಿ ವಿಭಿನ್ನ ‌ಪ್ರಯತ್ನ ಮಾಡಿದ ಗೆಳತಿಯರ ತಂಡ, ಬಣ್ಣ ಹಚ್ಚಿ ನವದುರ್ಗೆಯರ ಅವತಾರದ ಮೂಲಕ ನವರಾತ್ರಿ ಆಚರಣೆಗೆ ಸಾಕ್ಷಿಯಾಗಿದೆ.
 

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.

Latest Videos
Recommended Stories
Recommended image1
Ganesh Chaturthi 2026: ಗಣೇಶ ಚತುರ್ಥಿ ನಂತರ ಈ 4 ರಾಶಿಗಳ ಲೈಫೇ ಚೇಂಜ್, ಗಣಪತಿಯಿಂದ ಲಕ್ಷ್ಮಿ ಯೋಗ
Recommended image2
Lucky Zodiac Signs: ಶನಿ-ಶುಕ್ರರ ಪವರ್‌ಫುಲ್ ಕಾಂಬೋ, ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ
Recommended image3
ಕನ್ಯಾ ರಾಶಿಯಲ್ಲಿ ಅಮಾವಾಸ್ಯೆ: ಅಮಲ ರಾಜಯೋಗದಿಂದ ಈ 4 ರಾಶಿಗಳಿಗೆ ಜಾಕ್‌ಪಾಟ್, ಅದೃಷ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved