MalayalamNewsableKannadaKannadaPrabhaTeluguTamilBanglaHindiMarathimynation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಈ ನಾಲ್ಕು ಅಕ್ಷರದ ಹುಡುಗೀರು ಗಂಡನ ಪಾಲಿನ ಅದೃಷ್ಟ ದೇವತೆಯರು!

ಈ ನಾಲ್ಕು ಅಕ್ಷರದ ಹುಡುಗೀರು ಗಂಡನ ಪಾಲಿನ ಅದೃಷ್ಟ ದೇವತೆಯರು!

ಮದುವೆಯ ನಂತರ, ನಿಮ್ಮ ಹಣೆಬರಹದಲ್ಲಿ ಏನೆಲ್ಲಾ ಆಗುತ್ತೋ ಅದು ನಿಮ್ಮ ಪತ್ನಿಯ ಕಾಲ್ಗುಣದಿಂದಾಗಿಯೇ ಆಗುತ್ತೆ. ನಿಮಗೆ ಗೊತ್ತಾ ಈ ನಾಲ್ಕು ಅಕ್ಷರದಿಂದ ಹೆಸರು ಆರಂಭವಾಗೋ ಮಹಿಳೆಯರು ತಮ್ಮ ಪತಿಯ ಪಾಲಿನ ಅದೃಷ್ಟ ದೇವತೆಯರು.   

2 Min read
Pavna Das
Published : Jul 16 2024, 04:29 PM IST
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
Asianet Image

'ಸೊಸೆ ಮನೆಗೆ ಬಂದಾಗಿನಿಂದ ಅದೃಷ್ಟ ಖುಲಾಯಿಸುತ್ತಿದೆ’ ಅಥವಾ 'ಸೊಸೆ ಮನೆಗೆ ಕಾಲಿಟ್ಟಿದ್ದೆ ತಡ ಈ ಮನೆಯಲ್ಲಿ ಎಲ್ಲವೂ ಶುಭವಾಗುತ್ತಿದೆ ಎಂದು ಹೇಳಿರೋದ್ದನ್ನ ನೀವು ಕೇಳಿರಬಹುದು. ಹೌದು, ಮದುವೆಯಾಗಿ ಗಂಡನ ಮನೆಗೆ ತೆರಳುವ ಮಹಿಳೆಯರು, ಗಂಡನಿಗೆ ಅದೃಷ್ಟ ಲಕ್ಷ್ಮೀಯರೂ (Lucky charm) ಆಗಬಹುದು, ಅಥವಾ ದುರಾದೃಷ್ಟ ತರುವವರೂ ಆಗಬಹುದು. ಮದುವೆಯ ಬಳಿಕ ಗಂಡಸರ ಹಣೆಬರಹ ಬದಲಾಗುವುದೇ ಹೆಂಗಸರ ಕಾಲ್ಗುಣದಿಂದ ಎನ್ನಲಾಗುತ್ತೆ. 

27
Asianet Image

ಕೆಲವು ಹುಡುಗಿಯರು ಮದುವೆಯ ನಂತರ ತಮ್ಮ ಗಂಡಂದಿರಿಗೆ ತುಂಬಾ ಅದೃಷ್ಟ ದೇವತೆಗಳಾಗ್ತಾರೆ. ನಿಮ್ಮ ಜನ್ಮ ದಿನಾಂಕ (Birth Date), ಜಾತಕವು (Horoscope) ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ. ಆದರೆ ನಿಮ್ಮ ಹೆಸರಿನ ಮೊದಲ ಅಕ್ಷರವು ನೀವು ಅದೃಷ್ಟದಿಂದ ಶ್ರೀಮಂತರಾಗಲಿದ್ದೀರಿ ಎಂದು ಹೇಳುತ್ತದೆ. ತಮ್ಮ ಗಂಡಂದಿರ ಅದೃಷ್ಟ ಬೆಳಗಿಸುವ ಶಕ್ತಿಯನ್ನು ಹೊಂದಿರುವ ಅಂತಹ ಹೆಸರಿನ ಅಕ್ಷರಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ನಾಲ್ಕು ಅಕ್ಷರದ ಹುಡುಗಿಯರನ್ನ ಮದ್ವೆಯಾದರೆ, ನಿಮ್ಮ ಜೀವನದಲ್ಲಿ ಅದೃಷ್ಟ ಲಕ್ಷ್ಮೀ (Goddess Lakshmi) ಬಂದಿದ್ದಾಳೆ ಅನ್ನೋದು ನೆನಪಿರಲಿ. 
 

37
Asianet Image

ಜ್ಯೋತಿಷ್ಯದ ಪ್ರಕಾರ, K ಅಕ್ಷರ ಅಥವಾ ಕನ್ನಡದಲ್ಲಿ, ಕ, ಕಾ, ಖ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ತುಂಬಾ ಸ್ವಚ್ಛ ಮನಸ್ಸು ಮತ್ತು ದೃಢನಿಶ್ಚಯವುಳ್ಳವರು. ಅಂತಹ ಹುಡುಗಿಯರು ಸಮಾಜ ಕಲ್ಯಾಣ (Social Welfare) ಮಾಡುವವರಾಗಿರ್ತಾರೆ. ಇವರ ಈ ಸ್ವಭಾವ ಯಾವುದೇ ವ್ಯಕ್ತಿಯ ಅಥವಾ ಮೃದು ಸ್ವಭಾವದ ಜನರ ಹೃದಯವನ್ನು ಸುಲಭವಾಗಿ ಗೆಲ್ಲುತ್ತದೆ, ಅಂತಹ ಹುಡುಗಿಯರನ್ನು ಮದುವೆಯಾದರೆ ನಿಮ್ಮ ಅದೃಷ್ಟ ಮಿಂಚೋಕೆ ಶುರುವಾಗುತ್ತೆ. 
 

47
Asianet Image

D- ಅಕ್ಷರವನ್ನು ಹೊಂದಿರುವ ಹುಡುಗಿಯರು ಅಂದರೆ ದ, ದೀ, ಡ, ದಾ, ಡಿ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರನ್ನು ತುಂಬಾ ಅದೃಷ್ಟಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಪ್ರತಿಯೊಂದೂ ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಒಮ್ಮೆ ಅವರು ಕೆಲಸ ಮಾಡಲು ನಿರ್ಧರಿಸಿದರೆ, ಅವರು ಅದನ್ನು ಗೆದ್ದ ನಂತರವೇ ಸುಮ್ಮನಾಗುತ್ತಾರೆ. ಅವರು ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ. ಜೊತೆಗೆ ಸಾಕಷ್ಟು ಅದೃಷ್ಟವನ್ನು ಪಡೆಯುತ್ತಾರೆ. ಇವರು ತನಗೆ ಮತ್ತು ತನ್ನ ಗಂಡನಿಗೆ ಲಕ್ಕಿ ಚಾರ್ಮ್ ಆಗಿರ್ತಾರೆ. 
 

57
Asianet Image

P- ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಹುಡುಗಿಯರು ಅಂದರೆ ಪ, ಪಾ, ಫ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಹುಡುಗಿಯರು ಸ್ವಭಾವತಃ ತುಂಬಾ ಸಿಂಪಲ್ ಆಗಿರುತ್ತಾರೆ. ವಿಶೇಷ ಶೈಲಿಯ ಸಂಭಾಷಣೆಯೊಂದಿಗೆ, ಅವಳು ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತಾರೆ. ಅಂತಹ ಹುಡುಗಿಯರನ್ನು ಅದೃಷ್ಟ ಲಕ್ಷ್ಮೀಯರು ಎನ್ನುತ್ತಾರೆ. ಅವರು ತಮ್ಮ ಜೀವನ ಸಂಗಾತಿ ಅದೃಷ್ಟವನ್ನು ಬೆಳಗಿಸುತ್ತಾರೆ. ಆಕೆ ಸ್ವತಃ ಉತ್ತಮ ಹುದ್ದೆಯಲ್ಲಿರುತ್ತಾಳೆ. ಅವರನ್ನು ರಾಜಕೀಯದಿಂದ ಹಿಡಿದು ಕಾರ್ಪೊರೇಟ್ ಜಗತ್ತಿನವರೆಗೆ ಗುರುತಿಸಿಕೊಂಡಿರುತ್ತಾರೆ. 
 

67
Asianet Image

ಜ್ಯೋತಿಷ್ಯದ ಪ್ರಕಾರ, ಇಂಗ್ಲಿಷ್ ನಲ್ಲಿ A ಅಕ್ಷರದಿಂದ ಅಥವಾ ಕನ್ನಡದಲ್ಲಿ ಅ, ಆ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರನ್ನು ತಮ್ಮ ಸಂಗಾತಿಗೆ ತುಂಬಾ ಅದೃಷ್ಟಶಾಲಿ (lucky) ಎಂದು ಪರಿಗಣಿಸಲಾಗುತ್ತದೆ. ಮದುವೆಯ ನಂತರ, ಅವರು ತಮ್ಮ ಗಂಡನ ಅದೃಷ್ಟವನ್ನು ಹೆಚ್ಚಿಸುತ್ತಾರೆ. ಈ ಹೆಸರಿನಿಂದ ಪ್ರಾರಂಭವಾಗುವ ಹುಡುಗಿಯರ ಅದೃಷ್ಟ ಯಾವಾಗಲೂ ಆಕೆಯ ಜೊತೆಗೆ ಇರುತ್ತೆ. ಅವಳು ತನ್ನ ಜೀವನದುದ್ದಕ್ಕೂ ತನ್ನ ಗಂಡನಿಗೆ ಡೆಡಿಕೇಟ್ ಆಗಿರ್ತಾರೆ. ತನ್ನ ಗಂಡನ ಸಂತೋಷ ಮತ್ತು ದುಃಖದಲ್ಲಿ ಯಾವಾಗ್ಲೂ ಜೊತೆಯಾಗಿರ್ತಾಳೆ. 

77
Asianet Image

ಇವಾಗ ಗೊತ್ತಾಯ್ತಲ್ವಾ A, D, P,K ಅಕ್ಷರಗಳಿಂದ ಆರಂಭವಾಗುವ ಹೆಸರುಳ್ಳ ಮಹಿಳೆಯರು ನಿಮ್ಮ ಜೀವನದಲ್ಲಿ ಎಷ್ಟು ಅದೃಷ್ಟವನ್ನ ಹೊತ್ತು ತರುತ್ತಾರೆ ಅನ್ನೋದು. ನೀವು ಕೂಡ ಈ ಅಕ್ಷರಗಳನ್ನ ಹೊಂದಿರೋ ಹುಡುಗಿಯರನ್ನು ಮದ್ವೆಯಾದ್ರೆ ನಿಮ್ಮಷ್ಟು ಅದೃಷ್ಟವಂತರು ಬೇರಾರು ಇಲ್ಲ ನೋಡಿ. 
 

Pavna Das
About the Author
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More...
ಮದುವೆ
ಪತ್ನಿ
 
Recommended Stories
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved