Appeasing Shanidev: ಶನಿಯ ಪ್ರಭಾವದಿಂದ ಪರಿಹಾರ ಪಡೆಯಲು ಈ ಶಕ್ತಿಶಾಲಿ ವಿಧಾನ ಅನುಸರಿಸಿ
ನಿಮಗೂ ಶನಿಯಿಂದ ಜೀವನದಲ್ಲಿ ಹಲವು ತೊಂದರೆಗಳು ಎದುರಿಸಬೇಕಾಗಿ ಬಂದಿದೆಯೇ? ಹಾಗಿದ್ರೆ ಶನಿಯ ಪ್ರಭಾವದಿಂದ ಪರಿಹಾರ ಪಡೆಯಲು ಈ ಶಕ್ತಿಶಾಲಿ ವಿಧಾನ ಅನುಸರಿಸಿ.

ಪದೇ ಪದೇ ಕೆಲಸದಲ್ಲಿ ವಿಳಂಬ, ಜೀವನದಲ್ಲಿ ಅಶಾಂತಿ, ಯಾವುದೇ ಕೆಲಸ ಮಾಡಿದ್ರೂ ಅದರಲ್ಲಿ ತಡೆ, ಉಂಟಾಗುತ್ತಿರುತ್ತದೆಯೇ? ಇದಕ್ಕೆಲ್ಲಾ ಶನಿಯ ಪ್ರಭಾವ ಕಾರಣವಿರಬಹುದು. ನೀವು ಕೂಡ ಶನಿಯಿಂದ ಪ್ರಭಾವಿತರಾಗಿದ್ದರೆ, ಅಂತಹ ಸಂದರ್ಭದಲ್ಲಿ ಈ ಪವರ್ ಫುಲ್ ಪರಿಹಾರಗಳನ್ನು (powerful remedies) ಪಾಲಿಸುವ ಮೂಲಕ ಶನಿಯ ಪ್ರಭಾವದಿಂದ ಮುಕ್ತಿ ಪಡೆಯಬಹುದು.
ನವಗ್ರಹ ತೈಲ ಅಭಿಷೇಕ
ಶಿವಲಿಂಗದ (Shiv Ling) ಮೇಲೆ ಎಳ್ಳು ಎಣ್ಣೆಯ ಅಭಿಷೇಕ ಮಾಡುತ್ತಾ, ಓಂ ನಮಃ ಶಿವಾಯ ಶ ಶನಿಶ್ವರಾಯ ನಮಃ ಮಂತ್ರವನ್ನು ಪಠಿಸುತ್ತಲೇ ಇರಿ. ಈ ವಿಧಾನವನ್ನು ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ. ಶಿವನಿಗೆ ಅಭಿಷೇಕ ಮಾಡುವ ಮೂಲಕ ಶನಿಯ ದುಷ್ಪರಿಣಾಮಗಳನ್ನು (effects of shani) ಕಡಿಮೆ ಮಾಡಬಹುದು ಎಂದು ತಿಳಿಸಲಾಗಿದೆ.
ಶನಿ ಜಯಂತಿ ದಿನ ಅರಳಿ ಮರಕ್ಕೆ ಪೂಜೆ
ಶನಿ ಜಯಂತಿಯನ್ನು (shani jayanti) ಕಲವ ಅಂದ್ರೆ ಹಳದಿ ಪವಿತ್ರ ದಾರವನ್ನು ತೆಗೆದುಕೊಂಡು ಅರಳಿ ಮರಕ್ಕೆ ಏಳು ಸುತ್ತು ಸುತ್ತಿ. ಜೊತೆಗೆ ಓಂ ಶನಿಶ್ಚರಾಯ ನಮಃ ಎನ್ನುತ್ತಾ 108 ಬಾರಿ ಅರಳಿ ಮರಕ್ಕೆ ಸುತ್ತು ಬನ್ನಿ. ಇದು ಪಿತೃ ದೋಷವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತೆ.
ನಿರ್ಗತಿಕರಿಗೆ ಅನ್ನದಾನ
ಬಡವರಿಗೆ ಅಥವಾ ಕೆಲಸಗಾರರಿಗೆ ಮುಖ್ಯವಾಗಿ ಕಬ್ಬಿಣ, ಚರ್ಮ, ಗದ್ದೆ ಕೆಲಸ ಮಾಡುವವರಿಗೆ ಅನ್ನದಾನ (donate food) ಮಾಡಿ. ಇದನ್ನು ಶನಿವಾರದಂದೇ ಮಾಡಬೇಕು. ಇದರಿಂದ ಶನಿ ದೋಷ ನಿವಾರಣೆಯಾಗಿ, ದೇವರ ಆಶೀರ್ವಾದ ನಿಮ್ಮ ಮೇಲೆ ಸದ ಉಳಿಯುವಂತೆ ಮಾಡುತ್ತೆ.
ಶನಿ ದೇವಾಲಯದಲ್ಲಿ ಕಬ್ಬಿಣದ ವಸ್ತುಗಳ ಅರ್ಪಣೆ
ಶನಿ ದೇವಾಲಯಕ್ಕೆ (shani temple) ಹೋಗಿ ಅಲ್ಲಿ ನೀವು ಬಳಸಿದ ಕಬ್ಬಿಣದ ವಸ್ತುಗಳನ್ನು ನೀಡಿ. ಆದರೆ ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನು ನೀಡಬೇಡಿ. ಇದರಿಂದ ಶನಿ ದೋಷ ನಿವಾರಣೆಯಾಗುತ್ತೆ.
ದಶರಥ ಕೃತ ಶನಿ ಸ್ತ್ರೋತ್ರವನ್ನು ಪಠಿಸಿ
ನಮಃ ಕ್ರೂರಾಯಾ, ರೌದ್ರಾಯ ದಂಡಧಾರಿ ನಮೋಸ್ತುತೆ ಈ ಮಂತ್ರವನ್ನು ಪ್ರತಿದಿನ ಅಥವಾ ಪ್ರತಿ ಶನಿವಾರದಂದು ಪಠಿಸಿ. ಇದರಿಂದ ಶನಿಯ ದುಷ್ಫರಿಣಾಮ ದೂರವಾಗುತ್ತೆ. ಇದು ಬೀಜ ಮಂತ್ರಕ್ಕಿಂತ ತುಂಬಾನೆ ಪವರ್ ಫುಲ್ ಆಗಿದೆ.