ಹುಡುಗಿಯರ ಅದೃಷ್ಟವನ್ನೇ ಬದಲಾಯಿಸುತ್ತಾರೆ ಈ ದಿನಾಂಕದಂದು ಜನಿಸಿದ ಹುಡುಗರು
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಹುಡುಗರು ಪ್ರತಿ ಹುಡುಗಿಯೂ ಜೀವನ ಸಂಗಾತಿಯಲ್ಲಿ ಬಯಸುವ ಗುಣಗಳನ್ನ ಹೊಂದಿರುತ್ತಾರೆ. ಈ ಹುಡುಗರು ಪರ್ಫೆಕ್ಟ್ ಜೀವನ ಸಂಗಾತಿಗಳಾಗುತ್ತಾರೆ. ಹುಡುಗಿಯರ ಅದೃಷ್ಟವನ್ನೆ ಬದಲಾಯಿಸುತ್ತಾರೆ.

ಈ ಜನರು ಪರಿಪೂರ್ಣ ಜೀವನ ಸಂಗಾತಿಗಳಾಗುತ್ತಾರೆ.
ಸಂಖ್ಯಾಶಾಸ್ತ್ರದ (numerology) ಪ್ರಕಾರ, ಮೂಲಾಂಕ 4ನ್ನು ಹೊಂದಿರುವವರು ಪರಿಪೂರ್ಣ ಜೀವನ ಸಂಗಾತಿಗಳಾಗುತ್ತಾರೆ. ಈ ಪುರುಷರನ್ನು ಮದುವೆಯಾಗುವುದರಿಂದ ಹುಡುಗಿಯ ಅದೃಷ್ಟ ಬದಲಾಗಬಹುದು. ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದವರ ಮೂಲಾಂಕ 4 ಆಗಿರುತ್ತದೆ.
ತಮ್ಮ ಹೆಂಡತಿಯ ಭವಿಷ್ಯವನ್ನೇ ಬದಲಾಯಿಸುತ್ತಾರೆ
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 4 (radix 4) ನ್ನು ಹೊಂದಿರುವ ಪುರುಷನನ್ನು ಮದುವೆಯಾದ ನಂತರ ಮಹಿಳೆಯ ಭವಿಷ್ಯ ಬದಲಾಗುತ್ತದೆ. ಈ ಪುರುಷರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ಆಕೆಯ ಪ್ರತಿಯೊಂದು ಆಸೆಯನ್ನು ಪೂರೈಸಲು ಪ್ರಯತ್ನಿಸುತ್ತಾರೆ.
ತಮ್ಮ ಹೆಂಡತಿಯರನ್ನು ಬಹಳ ಗೌರವದಿಂದ ಕಾಣುತ್ತಾರೆ
ಮೂಲಾಂಕ 4ರ ಜನರು ತಮ್ಮ ಸಂಗಾತಿಗಳನ್ನು ಓಲೈಸುವಲ್ಲಿ ನಿಪುಣರಾಗಿರುತ್ತಾರೆ ಮತ್ತು ಯಾವಾಗಲೂ ತಮ್ಮ ಹೆಂಡತಿಯರನ್ನು ಬಹಳ ಗೌರವದಿಂದ (respect wife) ಕಾಣುವವರಾಗಿರುತ್ತಾರೆ. ಇದು ಅವರ ವಿಶಿಷ್ಟ ಲಕ್ಷಣವಾಗಿದೆ. ಅವರು ತಮ್ಮ ವೃತ್ತಿಜೀವನದಲ್ಲಿಯೂ ಸಹ ಅವರನ್ನು ಬೆಂಬಲಿಸುತ್ತಾರೆ.
ಇತರರಿಗೆ ಸಹಾಯ ಮಾಡುವುದು
4 ಮೂಲಾಂಕ ಹೊಂದಿರುವ ಜನರು ಪರೋಪಕಾರಿ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಅವರು ನಿರ್ಗತಿಕರಿಗೆ ಮತ್ತು ಬಡವರಿಗೆ ಸಾಧ್ಯವಾದಷ್ಟು ಸಹಾಯ (helping poor) ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.
ಅವರು ಸಂಬಂಧಗಳಿಗೆ ಬೆಲೆ ಕೊಡುತ್ತಾರೆ
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 4 ಹೊಂದಿರುವ ಪುರುಷರು ತಮ್ಮ ಸಂಬಂಧಗಳಿಗೆ ಬೆಲೆ ಕೊಡುತ್ತಾರೆ. ಅವರು ತಮ್ಮ ಸಂಗಾತಿ, ಕುಟುಂಬ ಅಥವಾ ಸಂಬಂಧಿಕರನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ ಮತ್ತು ಅಗತ್ಯವಿದ್ದಾಗ ಯಾವಾಗಲೂ ಅವರ ಜೊತೆ ಇರುತ್ತಾರೆ.