ಸಾಮಾನ್ಯವಾಗಿ ಶೇಕ್​ ಹ್ಯಾಂಡ್​ ಮಾಡುವ ವಿದೇಶಿ ಪದ್ಧತಿ ರೂಢಿಯಲ್ಲಿದ್ದರೂ, ಇದರಿಂದ ಶಕ್ತಿಯ ವರ್ಗಾವಣೆ ಆಗುತ್ತದೆ ಎನ್ನುತ್ತದೆ ವಿಜ್ಞಾನ. ಅದರಲ್ಲಿಯೂ ಈ ದಿನಾಂಕದಂದು ಜನಿಸಿದವರಿಗೆ ಶೇಕ್​​ಹ್ಯಾಂಡ್​ ನಿಷಿದ್ಧ. ಯಾವ ದಿನ ಎಂದು ಇಲ್ಲಿದೆ ನೋಡಿ... 

ಸಂಖ್ಯಾಶಾಸ್ತ್ರಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ವಿಭಿನ್ನ ಗುಣಗಳು ಇರುತ್ತವೆ. ಇದೇ ಕಾರಣಕ್ಕೆ ಹುಟ್ಟಿದ ದಿನಾಂಕದ ಪ್ರಕಾರ ಮದುವೆ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರ. ಈ ಒಂಬತ್ತು ಅಂಕೆಗೆ ತಕ್ಕಂತೆ ಕೆಲವರು ಭಾವುಕರಾಗಿರುತ್ತಾರೆ, ಕೆಲವರು ಪ್ರೇಮದಲ್ಲಿ ಪ್ರಾಕ್ಟಿಕಲ್ ಆಗಿದ್ದರೆ, ಇನ್ನು ಕೆಲವರು ಸೌಂದರ್ಯದ ಹುಡುಕಾಟದಲ್ಲಿರುತ್ತಾರೆ, ಮತ್ತೆ ಕೆಲವರು ಪ್ರೀತಿಗೆ ಹಂಬಲಿಸಿದರೆ, ಕೆಲವರು ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ. ಇದು ನೀವು ಯಾವಾಗ ಜನಿಸಿದಿರಿ ಎಂಬುದರ ಮೇಲೆ ಅವಲಂಬಿತವಾಗಿದೆ. ವ್ಯಕ್ತಿಯ ಹುಟ್ಟಿದ ದಿನಾಂಕದಿಂದ ಸಂಖ್ಯಾಶಾಸ್ತ್ರವನ್ನು ಕಲಿತ ನಂತರ ನೀವೇ ವಿಶ್ಲೇಷಿಸಬಹುದು.

ಇನ್ನು ನೀವು ಹುಟ್ಟಿದ ದಿನದ ಆಧಾರದ ಮೇಲೆ ನಿಮ್ಮಲ್ಲಿರುವ ಶಕ್ತಿಯ ಬಗ್ಗೆ ಸಂಖ್ಯಾಶಾಸ್ತ್ರ ಹೇಳುತ್ತದೆ. ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಾಗ ಭಾರತೀಯ ಪದ್ಧತಿಯಲ್ಲಿ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತೇವೆ. ಆದರೆ ಇದೀಗ ವಿದೇಶಿ ಸಂಸ್ಕೃತಿ ಹೆಚ್ಚಾಗಿರುವ ಕಾರಣ ಶೇಕ್​ಹ್ಯಾಂಡ್​ ಮಾಡುವುದು ಸಾಮಾನ್ಯವಾಗಿದೆ. ಇದು ಪ್ರತಿಷ್ಠೆಯ ಸಂಕೇತ ಎಂದೂ ಎನ್ನಿಸಿಕೊಳ್ಳುತ್ತದೆ. ಆದರೆ ಕೆಲವು ದಿನಾಂಕಗಗಳಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ವಿಶೇಷವಾದ ಎನರ್ಜಿ ಇದ್ದು, ಅವರು ಶೇಕ್​ ಹ್ಯಾಂಡ್​ ಮಾಡಿದರೆ ತಮ್ಮ ಶಕ್ತಿಯನ್ನು ಬೇರೆಯವರಿಗೆ ನೀಡುತ್ತಾರೆ ಎನ್ನುತ್ತದೆ Vedic Science.

ಯಾರ ಮೂಲಾಂಕ ಮೂರು ಆಗಿರುತ್ತದೆಯೋ ಅವರು ಕೈಕಲುಕುವುದನ್ನು ಅಥವಾ ಶೇಕ್​ಹ್ಯಾಂಡ್​ ಮಾಡುವುದು ನಿಷಿದ್ಧ ಎನ್ನಲಾಗಿದೆ. ಮೂಲಾಂಕ 3 ಎಂದರೆ, ಯಾವುದೇ ತಿಂಗಳಿನ 3, 12, 21 ಅಥವಾ 30 ನೇ ದಿನಾಂಕದಂದು ಜನಿಸಿದವರು. ಈ ಅಂಕೆ ಕೂಡಿದರೆ ಮೂರು ಬರುತ್ತದೆ. ಉದಾ: 12 (1+2), 21 (2+1) ಹಾಗೂ 30 (3+0). ಈ ದಿನಾಂಕದಂದು ಜನಿಸಿದವರು ಗುರು ತಮ್ಮ ರಾಜನನ್ನಾಗಿ ಹೊಂದಿರುತ್ತಾರೆ, ದೈವಿಕ ಬುದ್ಧಿವಂತಿಕೆ, ಸಮೃದ್ಧಿ ಮತ್ತು ಧರ್ಮದ ಮನೆ ಇದು.. ಗುರುವು ಅವರಿಗೆ ಕಾಂತೀಯ ಪ್ರಭೆ ಮತ್ತು ನೈಸರ್ಗಿಕ ಸಮೃದ್ಧಿಯನ್ನು ನೀಡುತ್ತಾನೆ. ಅವರನ್ನು ಸ್ವಾಭಾವಿಕವಾಗಿ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಹಣಕಾಸು ಮತ್ತು ಆಶೀರ್ವಾದಗಳಲ್ಲಿ. ಅನೇಕ ಸಂಪ್ರದಾಯಗಳಲ್ಲಿ ಕೈಕುಲುಕುವುದು ಅಥವಾ ಯಾರೊಂದಿಗಾದರೂ ಆಗಾಗ್ಗೆ ದೈಹಿಕ ಸಂಪರ್ಕ ಹೊಂದಿರುವುದು ಅವರ ಶಕ್ತಿ ಕ್ಷೇತ್ರವನ್ನು ತೊಂದರೆಗೊಳಿಸುತ್ತದೆ ಮತ್ತು ತಿಳಿಯದೆಯೇ ಅವರ ಗುರುಗ್ರಹದ ಅದೃಷ್ಟವನ್ನು ಇತರರಿಗೆ ವರ್ಗಾಯಿಸುತ್ತದೆ ಎಂದು ನಂಬಲಾಗಿದೆ.

ಇನ್ನು ವಿಜ್ಞಾನದ ಶಕ್ತಿಯ ಸೂಕ್ಷ್ಮ ದೃಷ್ಟಿಕೋನದಿಂದ ನೋಡಿದಾಗ, ನಮ್ಮ ಕೈಗಳು ಶಕ್ತಿ ಟ್ರಾನ್ಸ್ಮಿಟರ್‌ಗಳು ಮತ್ತು ಸ್ವೀಕರಿಸುವವರಾಗಿ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ಬಲಗೈ. ಯಾರಾದರೂ ಆಗಾಗ್ಗೆ ಕೈಕುಲುಕಿದಾಗ ಅಥವಾ ಇತರರು ತಮ್ಮ ಕೈಗಳನ್ನು ಸ್ಪರ್ಶಿಸಲು ಅನುಮತಿಸಿದಾಗ, ಅವರು ಮಧ್ಯದಲ್ಲಿ ಇತರ ವ್ಯಕ್ತಿಯ ಭಾವನಾತ್ಮಕ ಅಥವಾ ಕರ್ಮದ ಅವಶೇಷಗಳನ್ನು ಹೀರಿಕೊಳ್ಳುತ್ತಾರೆ. ಹೆಚ್ಚಿನ ಕಂಪನಗಳನ್ನು ಹೊಂದಿರುವ ಜನರಿಗೆ (ರಾಡಿಕ್ಸ್ 3 ಇರುವವರಂತೆ) ಇದು ಆಯಾಸವನ್ನುಂಟುಮಾಡಬಹುದು ಅಥವಾ ಅವರ ಮಾನಸಿಕ ಅಥವಾ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಗಳನ್ನು ಹೊಂದಿರಬಹುದು. ಆದ್ದರಿಂದ ಯಾವುದೇ ಸಂಖ್ಯೆಯಲ್ಲಿ ಹುಟ್ಟಿದ್ದರೂ ಸಾಧ್ಯವಾದಷ್ಟು ಮಟ್ಟಿಗೆ ಕೈಕಲುಕುವುದನ್ನು ಮಾಡಬೇಡಿ. ಇದೇನೂ ಮೂಢ ನಂಬಿಕೆ ಅಲ್ಲ, ಅದರಲ್ಲಿಯೂ ಮೇಲೆ ಹೇಳಿದ ದಿನಾಂಕಗಳಂದು ಜನಿಸಿದವರಿಗೆ ಇದು ವಿಶೇಷವಾಗಿ ಅನ್ವಯ ಆಗುತ್ತದೆ.

View post on Instagram