ಅನ್ಯಾಯದಿಂದ ಹಣ ಸಂಪಾದಿಸಿದ್ರೆ ಅದು ನಿಮ್ ಹತ್ರ ಉಳಿಯೋದು ಎಷ್ಟು ವರ್ಷ ಗೊತ್ತಾ?
ಅನ್ಯಾಯದ ಮೂಲಕ ಗಳಿಸಿದ ಹಣವು ಕೇವಲ ಹತ್ತು ವರ್ಷಗಳವರೆಗೆ ಮಾತ್ರ ನಿಮ್ಮ ಬಳಿ ಇರುತ್ತದೆ, ಹನ್ನೊಂದನೇ ವರ್ಷದಲ್ಲಿ ಅದು ಖಂಡಿತವಾಗಿ ನಾಶವಾಗುತ್ತದೆ.
ಕೆಟ್ಟ ಕೆಲಸಗಳಿಂದ ಹಣ ಸಂಪಾದಿಸುವ ವ್ಯಕ್ತಿಯು, ಅಂದರೆ, ತಪ್ಪಾಗಿ ಸಂಪಾದಿಸಿದ ಹಣ ಬಹಳಷ್ಟು ಅಭಿವೃದ್ಧಿ ಹೊಂದುತ್ತದೆ, ಅದ್ರಿಂದ ಒಬ್ಬ ವ್ಯಕ್ತಿಯು ಸಾಕಷ್ಟು ಪ್ರತಿಷ್ಠೆ ಗಳಿಸುತ್ತಾನೆ. ತನ್ನ ವಿರೋಧಿಗಳನ್ನು ಗೆಲ್ಲುತ್ತಾನೆ, ಆದರೆ ಕೊನೆಯಲ್ಲಿ ಆ ಎಲ್ಲಾ ಹಣವು ನಾಶವಾಗುತ್ತೆ, ಯಾಕಂದ್ರೆ, ಅಂತಹ ಹಣ ಹೆಚ್ಚು ಸಮಯ ಉಳಿಯೋದೆ ಇಲ್ಲ.
ಚಾಣಕ್ಯ, ಮಹರ್ಷಿ ವೇದವ್ಯಾಸ, ಮಹರ್ಷಿ ಮನು ಅವರಂತಹ ಮಹರ್ಷಿಗಳು ತಮ್ಮ ತಮ್ಮ ಗ್ರಂಥಗಳಲ್ಲಿ, ಒಬ್ಬ ವ್ಯಕ್ತಿಗೆ ನ್ಯಾಯಯುತ ರೀತಿಯಲ್ಲಿ ಹಣ ಸಂಪಾದಿಸಲು ಸೂಚನೆ ನೀಡಿದ್ದಾರೆ, ನ್ಯಾಯಯುತವಾಗಿ ಸಂಪಾದಿಸಿದ ಹಣ ವ್ಯಕ್ತಿ ಮತ್ತು ಅವನ ಕುಟುಂಬಕ್ಕೆ ಶುಭಕರವಾಗಿದೆ. ಆದರೆ ಕೆಟ್ಟ ಕೆಲಸ, ಅನ್ಯಾಯದಿಂದ ಪಡೆದಂತಹ ಹಣ ಎಂದಿಗೂ ಶುಭವಲ್ಲ. ಇದರಿಂದ ಸಮಸ್ಯೆಗಳು ಹೆಚ್ಚುತ್ತವೆ ಅನ್ನೋದನ್ನು ಚಾಣಕ್ಯ (Acharya Chanakya) ತಿಳಿಸಿದ್ದಾರೆ.
ಮನುಸ್ಮೃತಿ ಅಧ್ಯಾಯ 4 ಶ್ಲೋಕ 174 ರಲ್ಲಿ, ಮಹರ್ಷಿ ಮನು ಅನ್ಯಾಯದಿಂದ ಗಳಿಸಿದ ಸಂಪತ್ತಿನ ಬಗ್ಗೆ ಹೇಳುತ್ತಾರೆ, ಅನ್ಯಾಯವಾಗಿ ಸಂಪಾದಿಸಿದ ಹಣದ ನಾಶಕ್ಕೆ ಕಾಲಮಿತಿ ಇದೆ ಎಂದು ತಿಳಿಸಿದ್ದಾರೆ.
ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿಯ ಹದಿನೈದನೇ ಅಧ್ಯಾಯದ ಆರನೇ ಶ್ಲೋಕದಲ್ಲಿಯೂ ಅನ್ಯಾಯದ ಹಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳುವಂತೆ ಅನ್ಯಾಯದಿಂದ ಗಳಿಸಿದ ಹಣವು ಗರಿಷ್ಠ ಹತ್ತು ವರ್ಷಗಳವರೆಗೆ ಉಳಿಯುತ್ತದೆ ಮತ್ತು ಹನ್ನೊಂದನೇ ವರ್ಷದಲ್ಲಿ ಬಡ್ಡಿ ಸಮೇತ ನಾಶವಾಗುತ್ತದೆ. ಇದರಿಂದ ನೀವು ದರಿದ್ರರಾಗುತ್ತೀರಿ.
ಹಾಗಿದ್ರೆ ಯಾವ ಸಂಪತ್ತು ಉಳಿಯುತ್ತೇ?
ಧರ್ಮಗ್ರಂಥಗಳು, ವೇದಗಳು, ಪುರಾಣಗಳಲ್ಲಿ ಉಲ್ಲೇಖಿಸಲಾದ ರಹಸ್ಯಗಳ ಬಗ್ಗೆ ಸಾಮಾನ್ಯ ಮನುಷ್ಯನಿಗೆ ಹೆಚ್ಚಾಗಿ ತಿಳಿದೇ ಇಲ್ಲ. ಸಾಮಾನ್ಯ ಜನರ ಅನುಕೂಲಕ್ಕಾಗಿ, ಧಾರ್ಮಿಕ ವಿಜ್ಞಾನ ಮತ್ತು ನೀತಿಶಾಸ್ತ್ರವನ್ನು ರಚಿಸಲಾಗಿದೆ, ಅದರಲ್ಲಿ ಯಾವ ರೀತಿಯಲ್ಲಿ ಹಣವನ್ನು ಗಳಿಸಬೇಕು ಎಂದು ಹೇಳಲಾಗಿದೆ.
ನೀವು ಮಾಡೋ ಕೆಲಸದಿಂದ ಮನಸ್ಸಿಗೆ ಸಂತೋಷ ಸಿಕ್ರೆ, ಆ ಕೆಲಸ ಮಾಡುವ ಬಗ್ಗೆ ನಿಮಗೆ ಭಯ ಇಲ್ಲದೇ ಇದ್ರೆ, ಆತ್ಮಸಾಕ್ಷಿಗೆ ವಿರುದ್ಧವಾಗಿರದ, ನಿಮಗೆ ಯಾವುದೇ ಹಾನಿಯನ್ನುಂಟು ಮಾಡದ ಮತ್ತು ಯಾರಿಂದಲೂ ಕಸಿದುಕೊಳ್ಳಲಾಗದ ಸಂಪತ್ತನ್ನು ಕಷ್ಟ ಪಟ್ಟು ಸಂಪಾದಿಸಿದರೆ ಅದು ಯಾವಾಗಲೂ ನಿಮ್ಮ ಬಳಿಯೇ ಇರುತ್ತದೆ.
ಒಬ್ಬರ ಕುಟುಂಬ ಮತ್ತು ಸಮಾಜಕ್ಕೆ ಸಂತೋಷವನ್ನು ತಂದಾಗ ಮಾತ್ರ ಆ ಸಂಪತ್ತು ಒಳ್ಳೆಯದಾಗಿರುತ್ತದೆ ಎಂದು ಶ್ರೀಕೃಷ್ಣನು ಸಹ ಗೀತೆಯಲ್ಲಿ ಹೇಳುತ್ತಾನೆ. ಅಂದರೆ, ಸಾತ್ವಿಕ ಸಂಪತ್ತು ಮಾತ್ರ ಸಾತ್ವಿಕ ಮನೋಭಾವ ಮತ್ತು ಶುಭ ಗುಣಗಳನ್ನು ಸೃಷ್ಟಿಸಬಲ್ಲದು. ಅಸಾತ್ವಿಕ (ತಪ್ಪಾಗಿ ಸಂಪಾದಿಸಿದ) ಸಂಪತ್ತು ದೇಹದಲ್ಲಿನ ರೋಗ, ಮನಸ್ಸಿನಲ್ಲಿ ತೊಂದರೆ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡುತ್ತೆ.