ಹಾವು ಕಡಿತವನ್ನೂ ಗುಣಪಡಿಸುವ ಕಪ್ಪು ವಿಭೂತಿ ನಂಬಿಕೆ, ಕಾಳಿಪಟ್ಟಿ ದೇವಸ್ಥಾನದ ಮಹಿಮೆ
ಹಾವು ಕಡಿತವನ್ನೂ ಗುಣಪಡಿಸುವ ಕಪ್ಪು ವಿಭೂತಿ ನಂಬಿಕೆ, ಕಾಳಿಪಟ್ಟಿ ಕಂದಸ್ವಾಮಿ ದೇವಸ್ಥಾನದ ಕಪ್ಪು ವಿಭೂತಿ ಹಾವು,ಚೇಳು, ಕೀಟಗಳ ಕಡಿತಕ್ಕೆ ಅತ್ಯುತ್ತಮ ಔಷಧಿ ಎಂಬ ನಂಬಿಕೆ ಇದೆ. ಹಲವರು ಗುಣಮುಖರಾಗಿದ್ದಾರೆ.

ಹಾವು ಕಡಿತವನ್ನೂ ಗುಣಪಡಿಸುವ ಕಪ್ಪು ವಿಭೂತಿ
ಕಾಳಿಪಟ್ಟಿ ಕಂದಸ್ವಾಮಿ ದೇವಸ್ಥಾನವು ತನ್ನ ವಿಶೇಷತೆಗಳಿಂದ ಪ್ರಸಿದ್ಧವಾಗಿದೆ. ಇಲ್ಲಿ ಸಿಗುವ ಕಪ್ಪು ಬಣ್ಣದ ವಿಭೂತಿ ಬೇರೆಲ್ಲೂ ಕಾಣಸಿಗದು. ಇದರ ಇತಿಹಾಸ ಮತ್ತು ಮಹತ್ವ ಅಪಾರವಾಗಿದೆ. ಭಕ್ತರು ಅತ್ಯಂತ ಗೌರವದಿಂದ ನಡೆದುಕೊಳ್ಳುವ ಕ್ಷೇತ್ರವಿದು. ಈ ದೇವಸ್ಥಾನ 18ನೇ ಶತಮಾನದಲ್ಲಿ ನಿರ್ಮಾಣವಾಗಿದೆ.
ಕಾಳಿಪಟ್ಟಿ ಇತಿಹಾಸ:
ಈ ದೇವಸ್ಥಾನ ತಮಿಳುನಾಡಿ ಸೇಲಂ ಮುಖ್ಯರಸ್ತೆಯ ತಿರುಚನಗೋಡು ಬಳಿ ಇದೆ. ಹಿಂದೆ, ಇಲ್ಲೊಬ್ಬ ಮುರುಗ ಭಕ್ತ ವಾಸಿಸುತ್ತಿದ್ದ. ಆತ ಪ್ರತಿ ವರ್ಷ ಪಳನಿಗೆ ಪಾದಯಾತ್ರೆ ಹೋಗುತ್ತಿದ್ದ. ಒಮ್ಮೆ ಅವನ ಕನಸಿನಲ್ಲಿ ಬಂದ ಮುರುಗ, 'ನೀನು ಪಳನಿಗೆ ಬರಬೇಕಿಲ್ಲ, ನಾನೇ ನಿನ್ನ ಸ್ಥಳದಲ್ಲಿ ನೆಲೆಸುತ್ತೇನೆ' ಎಂದನು. ಅದರಂತೆ ಈ ದೇವಸ್ಥಾನ ನಿರ್ಮಾಣವಾಯಿತು ಎಂಬ ಪ್ರತೀತಿ ಇದೆ.
ಕಂದಸ್ವಾಮಿ ವಿಭೂತಿಯ ಮಹಿಮೆ:
ಒಮ್ಮೆ ಹಸುವೊಂದು ಹಾಲು ಕೊಡದಿದ್ದಾಗ, ಮಾಲೀಕನು ಈ ವಿಭೂತಿಯನ್ನು ಹಚ್ಚಿದನು. ಈ ದೇವಸ್ಥಾನದ ಮಹಿಮೆಯಿಂದ ಹಸು ಹಾಲು ಕೊಡಲು ಆರಂಭಿಸಿತ್ತು ಎಂಬು ಪುರಾಣ ಕತೆ. ಕಬ್ಬಿನ ಜಲ್ಲೆಯನ್ನು ಸುಟ್ಟು ಈ ವಿಭೂತಿಯನ್ನು ತಯಾರಿಸಲಾಗುತ್ತದೆ. ಇದು ಹಾವು ಕಡಿತದಂತಹ ವಿಷವನ್ನು ಮುರಿಯುತ್ತದೆ ಎಂದು ಭಕ್ತರು ನಂಬುತ್ತಾರೆ.
ಫಲಗಳು:
ಈ ದೇವಸ್ಥಾನದ ವಿಭೂತಿಯಿಂದ ಗುಣಪಡಿಸಲಾಗದ ಕಾಯಿಲೆಗಳೂ ವಾಸಿಯಾಗುತ್ತವೆ ಎನ್ನಲಾಗಿದೆ. ಇಲ್ಲಿ ಕಂದಸ್ವಾಮಿ ದೇವರು ಹಾಗೂ ಪತ್ನಿಯರೊಂದಿಗೆ ಇರುವುದರಿಂದ, ಮದುವೆ ಅಡೆತಡೆಗಳು ನಿವಾರಣೆಯಾಗಿ ಶೀಘ್ರದಲ್ಲೇ ವಿವಾಹವಾಗುತ್ತದೆ ಎಂದು ಹೇಳಲಾಗುತ್ತದೆ.
ಸಾವಿರಾರು ಭಕ್ತರಿಂದ ದರ್ಶನ
ಪ್ರತಿ ದಿನ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ತಮ್ಮ ಇಷ್ಟಾರ್ಥಗಳು, ಕಷ್ಟ ಕಾರ್ಪಣ್ಯಗಳು ದೂರವಾಗಲು ಪ್ರಾರ್ಥಿಸುತ್ತಾರೆ. ಇನ್ನು ಜಾತ್ರೆ ಸೇರಿದಂತೆ ಇತರ ವಿಶೇಷ ಸಂದರ್ಭಗಳಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ.

