ಈ ಸ್ಥಳಗಳಿಗೆ ಸಂಪತ್ತಿನ ದೇವತೆ ಲಕ್ಷ್ಮಿ ದೇವಿ ತಾನಾಗಿಯೇ ಒಲಿಯುತ್ತಾಳೆ!
ಆಚಾರ್ಯ ಚಾಣಕ್ಯನು ಹೇಳುವ ಪ್ರಕಾರ, ಕಷ್ಟಪಟ್ಟು ದುಡಿಯುವವರ ಮೇಲೆ ತಾಯಿ ಲಕ್ಷ್ಮಿಯ ಅನುಗ್ರಹ ಖಂಡಿತವಾಗಿಯೂ ಇರುತ್ತೆ. ಹಾಗೆಯೇ, ಕಷ್ಟಪಟ್ಟು ದುಡಿಯುವ ಮತ್ತು ಆಹಾರ ಸಂಗ್ರಹಿಸುವವರ ಜಾಗದಲ್ಲಿ ತಾಯಿ ಲಕ್ಷ್ಮಿ ವಾಸಿಸುತ್ತಾಳೆ. ಇದಕ್ಕಾಗಿ ನೀವು ಯಾವಾಗಲೂ ಶ್ರಮಿಸಬೇಕು.
ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತೆ. ಇದರೊಂದಿಗೆ, ಈ ಸಂದರ್ಭದಲ್ಲಿ ತಾಯಿಯ ಲಕ್ಷ್ಮಿ(Goddess Lakshmi) ವೈಭವ ವ್ರತವನ್ನು ಸಹ ಮಾಡಲಾಗುತ್ತೆ. ಜೊತೆಗೆ, ಶುಕ್ರ ಗ್ರಹವನ್ನು ಶುಕ್ರವಾರ ಪೂಜಿಸಲಾಗುತ್ತೆ. ಇದು ವೃತ್ತಿಜೀವನ, ವ್ಯವಹಾರ ಮತ್ತು ಪ್ರೇಮ ಸಂಬಂಧದಲ್ಲಿ ಯಶಸ್ಸಿಗೆ ಕಾರಣವಾಗುತ್ತೆ.
ಶುಕ್ರವಾರದಂದು(Friday) ತಾಯಿ ಲಕ್ಷ್ಮಿಯನ್ನು ಪೂಜಿಸೋದರಿಂದ ವ್ಯಕ್ತಿ ಸಂಪತ್ತನ್ನು ಪಡೆಯುತ್ತಾನೆ. ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸಹ ಬರುತ್ತೆ. ಇದಕ್ಕಾಗಿ, ಜನರು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.
ಆಚಾರ್ಯ ಚಾಣಕ್ಯನು ತನ್ನ ಸಂಯೋಜನೆಯಲ್ಲಿ ಸಂಪತ್ತನ್ನು(Wealth) ಪಡೆಯುವ ಯೋಗದ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಆಚಾರ್ಯರ ಪ್ರಕಾರ, ತಾಯಿ ಲಕ್ಷ್ಮಿ ಸ್ವತಃ ತಾನೇ 3 ಸ್ಥಳಗಳಿಗೆ ಬರುತ್ತಾರೆ. ಇದು ವ್ಯಕ್ತಿಗೆ ಅಪಾರ ಸಂಪತ್ತು ಮತ್ತು ಸಂತೋಷವನ್ನು ನೀಡುತ್ತೆ. ಅವುಗಳ ಬಗ್ಗೆ ತಿಳಿಯೋಣ.
ಆಚಾರ್ಯ ಚಾಣಕ್ಯ ಹೇಳುವಂತೆ ಲಕ್ಷ್ಮಿ ಮಾತೆಯ ಅನುಗ್ರಹ ಖಂಡಿತವಾಗಿಯೂ ಕಷ್ಟಪಟ್ಟು ದುಡಿಯುವವರ ಮೇಲೆ ಇದ್ದೇ ಇರುತ್ತೆ. ಹಾಗೆಯೇ, ಆಹಾರವನ್ನು ಸಂಗ್ರಹಿಸಲು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ ಸ್ಥಳದಲ್ಲಿ ತಾಯಿ ಲಕ್ಷ್ಮಿ ವಾಸಿಸುತ್ತಾಳೆ. ಇದಕ್ಕಾಗಿ ನೀವು ಯಾವಾಗಲೂ ಶ್ರಮಿಸಬೇಕು. ಕಷ್ಟಪಟ್ಟು ಕೆಲಸ ಮಾಡಿ (Hard Work) ಯಾವುದೇ ರೀತಿಯ ಅಡ್ಡ ದಾರಿ ಹಿಡಿಬೇಡಿ. ನಿಮ್ಮ ಕಠಿಣ ಪರಿಶ್ರಮದಿಂದ ಸಂತುಷ್ಟರಾದ ನಾರಾಯಣ ಮತ್ತು ತಾಯಿ ಲಕ್ಷ್ಮಿ ತಾವಾಗಿಯೇ ನಿಮ್ಮ ಮನೆಗೆ ಬರುತ್ತಾರೆ.
ಆಚಾರ್ಯ ಚಾಣಕ್ಯನ ಪ್ರಕಾರ, ಕುಟುಂಬ ಕಲಹವಿರುವ (Fight) ಮನೆ, ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುವ ಮನೆ, ತಾಯಿ ಲಕ್ಷ್ಮಿ ಇಂತಹ ಮನೆಯಲ್ಲಿ ಎಂದಿಗೂ ವಾಸಿಸೋದಿಲ್ಲ. ಬಂದರೂ, ತಕ್ಷಣ ಹೊರಟು ಹೋಗುತ್ತಾರೆ. ಹಾಗಾಗಿ ಮನೆಯಲ್ಲಿ ಜಗಳ ನಡೆಯದಂತೆ ನೀವು ನೋಡಿಕೊಳ್ಳಬೇಕು.
ವೈವಾಹಿಕ ಜೀವನದಲ್ಲಿ(Married life) ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಲಾಗುತ್ತವೆ. ಇದಕ್ಕಾಗಿ, ಮನೆಯ ವಾತಾವರಣವನ್ನು ತುಂಬಾ ಶಾಂತವಾಗಿರಿಸಿಕೊಳ್ಳಿ. ಸರಳವಾಗಿ ಹೇಳುವುದಾದರೆ, ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯದ ಭಾವನೆಯನ್ನು ಹೊಂದಿರಿ. ಇದರಿಂದ ತಾಯಿ ಲಕ್ಷ್ಮಿಗೆ ಸಂತೋಷವಾಗುತ್ತೆ. ಅಂತಹ ಮನೆಯಲ್ಲಿ, ತಾಯಿ ಲಕ್ಷ್ಮಿ ಸ್ವತಃ ಬರುತ್ತಾಳೆ.
ಮನೆಯಲ್ಲಿ ಮೂರ್ಖರು ಮತ್ತು ದುಷ್ಕರ್ಮಿಗಳಿಗೆ ಗೌರವ (Respect) ನೀಡಬೇಡಿ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾನೆ. ಸರಳವಾಗಿ ಹೇಳುವುದಾದ್ರೆ, ಎಲ್ಲಿ ಮೂರ್ಖರನ್ನು ಗೌರವಿಸಲಾಗುತ್ತೋ ತಾಯಿ ಲಕ್ಷ್ಮಿ ಆ ಸ್ಥಳದಲ್ಲಿ ಒಂದು ಕ್ಷಣವೂ ನಿಲ್ಲೋದಿಲ್ಲ. ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಲು ನೀವು ಬಯಸೋದಾದ್ರೆ, ಮೂರ್ಖರು ಮತ್ತು ಮೋಸಗಾರರಿಂದ ದೂರವಿರಿ.