ಕುಟುಂಬ ಕಲಹ ದೂರ ಮಾಡಲು ಈ ಟಿಪ್ಸ್ ಫಾಲೋ ಮಾಡಿ ಹ್ಯಾಪಿ ಲೈಫ್ ನಿಮ್ಮದಾಗಿಸಿ
ಮನೆ, ಸಂಸಾರ ಅಂದ ಮೇಲೆ ಅಲ್ಲಿ ಪ್ರೀತಿ, ಜಗಳ, ಕಲಹ ಎಲ್ಲವೂ ಇದ್ದೇ ಇರುತ್ತೆ. ಆದರೆ ಅದನ್ನೆಲ್ಲಾ ಮೆಟ್ಟಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಸಂಸಾರ ಮಾಡಿದಾಗ ಮಾತ್ರ ಆ ಸಂಸಾರ ಸುಂದರವಾಗಿರಲು ಸಾಧ್ಯ. ಒಂದು ವೇಳೆ ಮನೆಯ ಒಬ್ಬ ಸದಸ್ಯನಿಗೆ ಏನಾದರೂ ಅನ್ಯಾಯವಾಗುತ್ತಿದ್ದರೆ, ಆ ವಿಷಯದ ಬಗ್ಗೆ ಮೌನ ವಹಿಸುವ ಬದಲು, ಅದರ ಬಗ್ಗೆ ನೀವು ಮಾತನಾಡಿ. ಯಾವುದು ಸರಿ, ಯಾವುದು ತಪ್ಪು ಅನ್ನೋದನ್ನು ಹೇಳಿ, ಆವಾಗ ಮಾತ್ರ ಕಾದಾಟ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿ ಮೂಡಲು ಸಾಧ್ಯವಾಗುತ್ತೆ.
ದಿನವಿಡೀ ಕೆಲಸ ಮಾಡಿದ ನಂತರ, ಜನರು ಆಫೀಸ್ ಅಥವಾ ಶಾಲಾ ಕಾಲೇಜಿನಿಂದ ಮನೆಗೆ ಬಂದಾಗ, ಶಾಂತ ಮತ್ತು ನಗುವಿನ ವಾತಾವರಣ ಮನೆಯಲ್ಲಿದ್ದರೆ, ಇದರಿಂದ ಸಂಬಂಧಗಳಲ್ಲಿ ನಿಕಟತೆ ಹೆಚ್ಚಿಸಲು ಸಾಧ್ಯವಾಗುತ್ತೆ. ಆದರೆ ಕೆಲವು ಮನೆಗಳಲ್ಲಿ, ಕೌಟುಂಬಿಕ ಕಲಹ(Family dispute) ಎಷ್ಟರ ಮಟ್ಟಿಗೆ ಇದೆಯೆಂದ್ರೆ, ಮನೆಯ ಸದಸ್ಯರು ಮನೆಗೆ ಬರಲು ಬಯಸೋದಿಲ್ಲ ಅಥವಾ ಸಾಧ್ಯವಾದಷ್ಟು ಕಡಿಮೆ ಸಮಯ ಮನೆಯಲ್ಲಿರಲು ಬಯಸ್ತಾರೆ.
ಹಲವಾರು ಕಾರಣದಿಂದಾಗಿ, ಪರಸ್ಪರರ ನಡುವೆ ಸಾಕಷ್ಟು ಅಂತರ ಸಂಭವಿಸುತ್ತೆ ಮತ್ತು ಇಡೀ ಕುಟುಂಬದಲ್ಲಿ (Family) ಪ್ರತಿಯೊಬ್ಬರೂ ಏಕಾಂಗಿಯಾಗ್ತಾರೆ. ಇದು ಮನೆಯ ಸಣ್ಣ ಸದಸ್ಯರ ಮೇಲೆ ಅಂದರೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಮತ್ತು ಅವರು ಕ್ರಮೇಣ ಹೊರಗಿನವರ ಮಾತು ಕೇಳಲು ಪ್ರಾರಂಭಿಸುತ್ತಾರೆ. ನಿಮ್ಮ ಮನೆಯಲ್ಲಿಯೂ ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದರೆ, ಕೆಲವು ಟಿಪ್ಸ್ ಅಳವಡಿಸಿಕೊಳ್ಳೋ ಮೂಲಕ, ನೀವು ಮನೆಯಲ್ಲಿ ಪ್ರತಿದಿನ ಉಂಟಾಗುವ ಜಗಳಗಳನ್ನು ನಿಲ್ಲಿಸಬಹುದು.
ಜನರ ಆಲೋಚನೆಯನ್ನು ಅರ್ಥಮಾಡಿಕೊಳ್ಳಿ
ಮನೆಯ ಪ್ರತಿಯೊಬ್ಬ ಸದಸ್ಯನು ವಿಭಿನ್ನ ಯೋಚನೆಯನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಬ್ಬರೂ ತಮ್ಮ ದೃಷ್ಟಿಕೋನದಿಂದ ವಿಷಯಗಳನ್ನು ನೋಡುತ್ತಾರೆ. ಆದರೆ ಈ ವಿಭಿನ್ನ ಆಲೋಚನೆಯಿಂದಾಗಿ ಜಗಳವಾಡುವ ಬದಲು, ನಾವು ಜನರ ಆಲೋಚನೆಯನ್ನು(Thinking) ಅರ್ಥಮಾಡಿಕೊಂಡರೆ, ಜಗಳವನ್ನು ತಪ್ಪಿಸಬಹುದು.
ವಿಷಯಗಳನ್ನು ಹಂಚಿಕೊಳ್ಳಿ
ಸಮಸ್ಯೆಗಳನ್ನು ಅಥವಾ ಯಾವುದೇ ರೀತಿಯ ವಿಷಯವನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡರೆ, ಆಗ ಅವರು ಪರಸ್ಪರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇಷ್ಟೇ ಅಲ್ಲ, ಹೀಗೆ ಮಾಡೋದರಿಂದ, ಮನಸ್ಸು ಸಹ ಹಗುರವಾಗುತ್ತೆ. ಇದನ್ನು ಮಾಡೋದರಿಂದ, ಪ್ರೀತಿ(Love) ಹೆಚ್ಚಾಗುತ್ತೆ ಮತ್ತು ಯಾವುದೇ ಜಗಳ ಇರೋದಿಲ್ಲ.
ಶಬ್ದ(Sound) ಮಾಡೋದನ್ನು ತಪ್ಪಿಸಿ
ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಉಂಟಾದಾಗ ನೀವು ಕಿರುಚಲು ಪ್ರಾರಂಭಿಸಿದ್ರೆ, ಇದು ಮನೆಯಲ್ಲಿ ಉದ್ವಿಗ್ನತೆ ಹೆಚ್ಚಿಸುತ್ತೆ. ಇದರಿಂದ ಜಗಳ ಪ್ರಾರಂಭವಾಗುತ್ತವೆ. ಆದ್ದರಿಂದ ಆರಾಮವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಮಾತುಗಳನ್ನು ಸಮಾಧಾನವಾದ ರೀತಿಯಲ್ಲಿ ಇನ್ನೊಬ್ಬರ ಮುಂದೆ ಇಡಲು ಪ್ರಯತ್ನಿಸಿ. ಇದರಿಂದ ಜಗಳ ನಡೆಯೋದಿಲ್ಲ.
ತಪ್ಪನ್ನು ಬೆಂಬಲಿಸಬೇಡಿ(Encourage)
ಮನೆಯ ಒಬ್ಬ ಸದಸ್ಯನಿಗೆ ಏನಾದರೂ ಅನ್ಯಾಯವಾಗುತ್ತಿದ್ದರೆ, ಆ ವಿಷಯದ ಬಗ್ಗೆ ಮೌನ ವಹಿಸುವ ಬದಲು, ಅದನ್ನು ವಿರೋಧಿಸಿ ನೀವೂ ಮಾತನಾಡೀ. ನೀವು ಶಾಂತವಾಗಿದ್ದು ಅವರನ್ನು ಬೆಂಬಲಿಸಿ ಮತ್ತು ಸತ್ಯದ ಹಾದಿಲಿ ನಡೆದರೆ ನೆಮ್ಮದಿಯ ಜೀವನ ನಿಮ್ಮದ್ದಾಗುತ್ತೆ. ಮನೆಯಲ್ಲೂ ಶಾಂತಿ ನೆಲೆಸುತ್ತೆ.
ಮನೆ ಸದಸ್ಯರು ಜೊತೆ ಸೇರಿ:
ಮನೆಯ ಸದಸ್ಯರೆಲ್ಲರೂ ಜೊತೆಯಾಗಿ ಸೇರಿ ಪೂಜೆ, ಹಬ್ಬ ಆಚರಣೆ ಅಥವ ಪಿಕ್ ನಿಕ್(Picnic) ಹೀಗೆ ಪ್ಲ್ಯಾನ್ ಮಾಡಿ, ವರ್ಷಕ್ಕೆ ಒಂದೆರಡು ಬಾರಿ ಜೊತೆಯಾಗಿ ಸೇರಬೇಕು. ಹೀಗೆ ಎಲ್ಲರೂ ಜೊತೆ ಜೊತೆಯಾಗಿ ಕೂಡಿ ಕೆಲಸ ಮಾಡಿದಾಗ ಮನೆ ಮಂದಿಯಲ್ಲಿ ಜಗಳ ಇರೋದಿಲ್ಲ್, ಬದಲಾಗಿ ಎಲ್ಲರೂ ನೆಮ್ಮದಿ ಮತ್ತು ಸಂತೋಷವಾಗಿರಲು ಸಾಧ್ಯವಾಗುತ್ತೆ.