ನವೆಂಬರ್ 16 ರಿಂದ ಮಂಗಳನಿಂದ ಈ ರಾಶಿಗೆ ಲಾಭ,ಬಾಳು ಬಂಗಾರ.!
ನವೆಂಬರ್ 16 ರಂದು ಮಂಗಳವು ತನ್ನದೇ ಆದ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಗ್ರಹವು ವೃಶ್ಚಿಕ ರಾಶಿಗೆ ಹೋಗುವುದರಿಂದ ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.
ಮಂಗಳನು ನವೆಂಬರ್ 16,2023 ರಂದು ಬೆಳಗ್ಗೆ 10.04 ರಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಡಿಸೆಂಬರ್ 28,2023 ರಂದು ಮಧ್ಯಾಹ್ನ 12.21 ರವೆರೆಗೆ ಅದೇ ರಾಶಿಯಲ್ಲಿ ಸಾಗುತ್ತಾನೆ.
ಕನ್ಯಾ ರಾಶಿಯವರಿಗೆ ಆತ್ಮ ವಿಶ್ವಾಸ ಮತ್ತು ಶೌರ್ಯ ಹೆಚ್ಚಲಿದೆ. ಸಹೋದರ ಅಥವಾ ಸಹೋದರಿ ಉತ್ತಮ ಪ್ರಗತಿಯನ್ನು ಹೊಂದುತ್ತಾರೆ.ಬಾಕಿ ಉಳಿದಿರುವ ಕೆಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ತುಲಾ ರಾಶಿಯವರಿಗೆ ಆರ್ಥಿಕ ಲಾಭ , ಸಂಪತ್ತು ಶೇಖರಣೆ, ಹೊಸ ಕೆಲಸದಲ್ಲಿ ಬಂಡವಾಳ ಹೂಡಿಕೆ ಒಳ್ಳೆ ಸಮಯ. ಮನೆಯಲ್ಲಿ ಶುಭ ಕಾರ್ಯಗಳು ಇರುತ್ತದೆ. ಚರ ಮತ್ತು ಸ್ಥಿರ ಆಸ್ತಿ ಖರೀದಿ ಇರುತ್ತದೆ.
ವೃಶ್ಚಿಕ ರಾಶಿಯವರಿಗೆ ಮಂಗಳವು ಆತ್ಮವಿಶ್ವಾಸ, ಶೌರ್ಯ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಚರ ಮತ್ತು ಸ್ಥಿರ ಆಸ್ತಿಯಲ್ಲಿ ಹೂಡಿಕೆ ಇರುತ್ತದೆ. ಕೆಲವು ಹೊಸ ಕೆಲಸಗಳಲ್ಲಿ ತೊಡಕಿಕೊಳ್ಳಬಹುದು.ಎಲ್ಲಾ ಕೆಲಸಗಳಲ್ಲಿ ಯಶಸ್ಸು ಇರುತ್ತದೆ.
ಮಕರ ರಾಶಿಯವರಿಗೆ ದೊಡ್ಡ ಆರ್ಥಿಕ ಲಾಭವಿದೆ. ಹೊಸ ಆದಾಯದ ಮೂಲವನ್ನು ಸ್ವಾಧೀನಪಡಿಸಿಕೊಳ್ಳಬಹುದು. ಗೌರವ ಹೆಚ್ಚುತ್ತದೆ. ಸ್ಪರ್ಧಾತ್ಮಕ ಪರಿಕ್ಷೇಯಲ್ಲಿ ಯಶಸ್ಸು ಸಿಗುತ್ತದೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಹೆಚ್ಚಿನ ಜನರಿಂದ ಸಹಕಾರ ದೊರೆಯಲಿದೆ.