ಗಂಡನ ಮೇಲೆ ಸೇಡಿಗಾಗಿ ಮಾರಿಯಾದಳಾ ಈ ಮಾರಿಕಾಂಬೆ!!

First Published 28, Feb 2020, 3:42 PM

ಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬಾ ದೇವಿ ಜಾತ್ರೆಗೆ ಶತಮಾನದ ಇತಿಹಾಸವಿದೆ. ಕೆಳದಿ ರಾಜ ಶಿವಪ್ಪನಾಯಕ ಯುದ್ಧ, ಬೇಟೆ ಹಾಗೂ ರಾಜಕಾರ್ಯಗಳನ್ನು ಕೈಗೊಳ್ಳುವ ಮುಂಚೆ ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿ, ಮುನ್ನಡಿ ಇಡುತ್ತಿದ್ದನಂತೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ  ಆ ಕಾಲದಲ್ಲಿ ಜನರನ್ನು ಕಾಡುತ್ತಿದ್ದ ಸಿಡುಬು, ಅಮ್ಮ, ದಡಾರ, ಬರದಂತಹ ನೈಸರ್ಗಿಕ ವಿಪತ್ತು, ಕಾಯಿಲೆಗಳ ನಿವಾರಣೆಗಾಗಿ ಪೂಜೆ, ಹರಕೆ ಸಲ್ಲಿಸುವ ವಾಡಿಕೆಯನ್ನು ಜನರನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಮಾರಿಕಾಂಬೆ ಕಥೆ ನಿಮಗೆ ಗೊತ್ತಾ?

ದಲಿತರ ಹುಡುಗ ಬ್ರಾಹ್ಮಣ ಹುಡುಗಿ ಮಾರಿಕಾಂಬೆಯ ಸೌಂದರ್ಯಕ್ಕೆ ಮರುಳಾಗಿ ತನ್ನ ಜಾತಿಯನ್ನು ಮರೆಮಾಚಿ ಮೋಸದಿಂದ ಮದುವೆಯಾಗುತ್ತಾನೆ.

ಗಂಡನ ಮೋಸ ತಿಳಿದು ಮಾರಿಕಾಂಬೆ ಗಂಡ ಮತ್ತು ಮಕ್ಕಳನ್ನು ಬಲಿ ತೆಗೆದು ಕೊಳ್ಳುವ ಶಪಥ ಮಾಡಿ ಮಾರಿಯಾಗುತ್ತಾಳೆ.

ಬಲಿ ಕೊಡುವ ಕೋಣ, ಗಂಡ ಹಾಗೂ ಕುರಿ, ಕೋಳಿಗಳು ಮಾರಿಯ ಮಕ್ಕಳೆಂಬ ನಂಬಿಕೆ ಇವೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬ ಶಿವಮೊಗ್ಗದ ಮಾರಿಕಾಂಬ ಜಾತ್ರೆ.

ಈ ಜನಪದ ಕಥೆ ಹೆಚ್ಚು ಪ್ರಚಲಿತದಲ್ಲಿದ್ದು,  ಮಾರಿಕಾಂಬೆಯನ್ನು ಸಮಾಧಾನಪಡಿಸಲು ಮಾರಿಜಾತ್ರೆ ನೆಡೆಸುವುದು ಎಂಬುದು ಜನಪ್ರಿಯವಾಗಿದೆ.

ಜಾತ್ರೆಯ ಮೊದಲ ದಿನ  ತವರು ಮನೆ ಗಾಂಧಿಬಜಾರ್‌ನಲ್ಲಿ ಜಾತ್ರೆ ನಡೆಯುತ್ತೆ.

ಉಳಿದ ನಾಲ್ಕು ದಿನಗಳ ಕಾಲ ಗಂಡನ ಮನೆ ಮಾರಿಗದ್ದುಗೆಯಲ್ಲಿ ಹಬ್ಬ ಆಚರಿಸಲಾಗುತ್ತದೆ.

ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯಗಳನ್ನು ತಪ್ಪದೇ ಆಚರಿಸಲಾಗುತ್ತದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಿಯೂ ಶಿವಮೊಗ್ಗದ ಮಾರಿಕಾಂಬ ಜಾತ್ರೆ ಪ್ರಸಿದ್ಧ.

ಈ ಮಾರಿ ಜಾತ್ರೆಗೆ ಹೆಣ್ಣು ಮಕ್ಕಳು ತವರಿಗೆ ಬರುವುದು ವಾಡಿಕೆ.

loader