ಈ ಹೆಸರಿನ ಹೆಂಡತಿ ಗಂಡನಿಗೆ ಸುಖ, ಸಮೃದ್ಧಿ ಸಂಕೇತ
ಹುಟ್ಟಿದ ಸಮಯ, ದಿನಾಂಕ ಆಧರಿಸಿ ಯಾವ ಹೆಸರಿಡಬೇಕೆಂದು ನಿರ್ಧರಿಸುತ್ತಾರೆ. ಹಾಗಾಗಿ ನಮ್ಮ ಹೆಸರ ಆಧಾರದ ಮೇಲೆ ನಮ್ಮ ಭವಿಷ್ಯ ಹೇಗಿರುತ್ತದೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಅಕ್ಷರದಿಂದ ಆರಂಭವಾಗುವ ಮಹಿಳೆಯರನ್ನು ಮದುವೆಯಾದರೆ ಗಂಡಂದಿರಿಗೆ ಯಾವ ಫಲಗಳು ಸಿಗುತ್ತವೆ ಎಂದು ನೋಡಿ..

ಹೆಸರುಗಳ ಆಧಾರದ ಮೇಲೆ ನಮ್ಮ ಜಾತಕವನ್ನು ಊಹಿಸಬಹುದು. ಅದಕ್ಕಾಗಿಯೇ ಮದುವೆ ಆಲೋಚನೆ ಬಂದಾಗ ಮೊದಲು ಜಾತಕವನ್ನು ಪರಿಶೀಲಿಸುತ್ತಾರೆ. ಜ್ಯೋತಿಷ್ಯ, ಜಾತಕ ಚಕ್ರದ ಪ್ರಕಾರ ಯಾವ ಅಕ್ಷರಗಳಿಂದ ಆರಂಭವಾಗುವ ಮಹಿಳೆಯರನ್ನು ವಿವಾಹವಾದರೆ ಯಾವ ಫಲಗಳು ಬರುತ್ತವೆ. ಈಗ ತಿಳಿದುಕೊಳ್ಳೋಣ..
ಮದುವೆ
P ಅಕ್ಷರದಿಂದ:
P ಅಕ್ಷರದಿಂದ ಆರಂಭವಾಗುವ ಹುಡುಗಿಯರು ಜೀವನ ಸಂಗಾತಿಯಾದರೆ ಬದುಕು ಬಿಂದಾಸ್. ಸರಳವಾಗಿ ಬದುಕಲು ಇಷ್ಟಪಡುತ್ತಾರೆ. ಗಂಡನಿಗೆ ಗೌರವ, ಪ್ರಾಧಾನ್ಯತೆ ನೀಡುತ್ತಾರೆ. ಹಣ ಗಳಿಸುವುದು ಮಾತ್ರವಲ್ಲ, ಖರ್ಚು ಮಾಡುವುದು ಕೂಡ ಗೊತ್ತು.
R ಅಕ್ಷರದಿಂದ:
R ಅಕ್ಷರದ ಹೆಸರಿನ ಹುಡುಗಿಯರು ಒಳ್ಳೆಯ ಹೃದಯವಂತರು. ಮನಸ್ಸಿನಲ್ಲಿ ಒಂದು, ಹೊರಗೆ ಒಂದು ಮಾತನಾಡುವವರಲ್ಲ. ಕಷ್ಟ ಬಂದರೂ ಸಹನೆ ಕಳೆದುಕೊಳ್ಳುವುದಿಲ್ಲ. ಸಂಗಾತಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಮಲ್ಟಿ ಟಾಸ್ಕ್ ಮಾಡಬಲ್ಲರು.
E ಅಕ್ಷರದಿಂದ:
ಈ ಅಕ್ಷರದ ಹೆಸರಿನ ಹುಡುಗಿಯರು ಬುದ್ಧಿವಂತರು, ವಾಕ್ಚಾತುರ್ಯವುಳ್ಳವರು. ಗಂಡನನ್ನು ಅರ್ಥಮಾಡಿಕೊಳ್ಳುತ್ತಾರೆ, ಸಂಗಾತಿಯ ಸಂತೋಷದಲ್ಲಿ ತಮ್ಮ ಸಂತೋಷ ಕಾಣುತ್ತಾರೆ.
V ಅಕ್ಷರದಿಂದ:
V ಅಕ್ಷರದ ಹೆಸರಿನ ಹುಡುಗಿಯರು ಬುದ್ಧಿವಂತರು. ಇವರನ್ನು ಮದುವೆಯಾಗುವ ಗಂಡಂದಿರು ಅದೃಷ್ಟವಂತರು. ಎಲ್ಲರೊಂದಿಗೆ ಚೆನ್ನಾಗಿರುತ್ತಾರೆ.
B ಅಕ್ಷರದಿಂದ:
B ಅಕ್ಷರದ ಹೆಸರಿನ ಹುಡುಗಿಯರು ಅದೃಷ್ಟವಂತರು. ಗಂಡ ಮತ್ತು ಅತ್ತೆಯ ಮನೆಯವರ ಒಳಿತಿಗಾಗಿ ಶ್ರಮಿಸುತ್ತಾರೆ. ಕಷ್ಟದಲ್ಲಿ ಗಂಡನಿಗೆ ಬೆಂಬಲವಾಗಿ ನಿಲ್ಲುತ್ತಾರೆ.
K ಅಕ್ಷರದಿಂದ:
ಈ ಅಕ್ಷರದ ಹೆಸರಿನ ಹುಡುಗಿಯರು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇವರಿದ್ದಲ್ಲಿ ಸಂತೋಷ ತುಂಬಿರುತ್ತದೆ. ಕುಟುಂಬದ ಕಷ್ಟದಲ್ಲಿ ಭಾಗಿಯಾಗುತ್ತಾರೆ.
ಗಮನಿಸಿ: ಮೇಲಿನ ವಿಷಯಗಳು ಕೇವಲ ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಅಂಶಗಳಾಗಿವೆ. ಇವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.