ಈ ದಿನ ಹುಟ್ಟಿದ ಒಬ್ಬ ಫ್ರೆಂಡ್ ಇದ್ರೆ ಸಾಕು, ಪಕ್ಕಾ ಅದೃಷ್ಟ
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಗಳಲ್ಲಿ ಹುಟ್ಟಿದವರು ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಈ ದಿನಗಳಲ್ಲಿ ಹುಟ್ಟಿದ ಒಬ್ಬ ಫ್ರೆಂಡ್ ಇದ್ರೆ ಸಾಕು, ಅವರು ಅದೃಷ್ಟವಂತರು.

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಗಳ ಸ್ವಭಾವವನ್ನು ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರದಲ್ಲಿ ಮೂಲ ಸಂಖ್ಯೆಗೆ ಬಹಳ ಮಹತ್ವವಿದೆ. ಹುಟ್ಟಿದ ದಿನಾಂಕದ ಆಧಾರದ ಮೇಲೆ ಮೂಲ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಕೆಲವು ದಿನಗಳಲ್ಲಿ ಹುಟ್ಟಿದವರು ತುಂಬಾ ವಿಶೇಷವಾಗಿರುತ್ತಾರೆ. ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಹಾಗಾದರೆ ಯಾವ ದಿನಗಳಲ್ಲಿ ಹುಟ್ಟಿದವರು ಸ್ನೇಹಿತರಿಗಾಗಿ ಪ್ರಾಣವನ್ನೂ ಲೆಕ್ಕಿಸುವುದಿಲ್ಲ ಎಂದು ಇಲ್ಲಿ ತಿಳಿದುಕೊಳ್ಳೋಣ.
ಸಂಖ್ಯಾಶಾಸ್ತ್ರದ ಪ್ರಕಾರ ಮೂಲ ಸಂಖ್ಯೆ 1 ಹೊಂದಿರುವ ವ್ಯಕ್ತಿಗಳು ಸ್ನೇಹಕ್ಕಾಗಿ ಏನು ಬೇಕಾದರೂ ಮಾಡುತ್ತಾರಂತೆ. ಯಾವುದೇ ತಿಂಗಳಿನಲ್ಲಿ 1, 10, 19, 28 ದಿನಗಳಲ್ಲಿ ಹುಟ್ಟಿದವರ ಮೂಲ ಸಂಖ್ಯೆ 1 ಆಗಿರುತ್ತದೆ. ಈ ಸಂಖ್ಯೆಯ ಅಧಿಪತಿ ಸೂರ್ಯ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ವ್ಯಕ್ತಿತ್ವ, ನಾಯಕತ್ವ, ಆರೋಗ್ಯ, ಅಧಿಕಾರ, ಆತ್ಮವಿಶ್ವಾಸಗಳಿಗೆ ಕಾರಕ ಎಂದು ಪರಿಗಣಿಸಲಾಗುತ್ತದೆ.
ಯಾವುದೇ ತಿಂಗಳಿನಲ್ಲಿ ಈ ನಾಲ್ಕು ದಿನಗಳಲ್ಲಿ ಹುಟ್ಟಿದವರು ತುಂಬಾ ಪ್ರಾಮಾಣಿಕವಾಗಿ ಬದುಕುತ್ತಾರೆ. ಯಾರನ್ನೂ ಮೋಸ ಮಾಡಲು ಇವರು ಇಷ್ಟಪಡುವುದಿಲ್ಲ. ಈ ವ್ಯಕ್ತಿತ್ವವೇ ಅವರನ್ನು ಎಲ್ಲರಲ್ಲೂ ವಿಶೇಷವಾಗಿ ಕಾಣುವಂತೆ ಮಾಡುತ್ತದೆ. ಈ ದಿನಗಳಲ್ಲಿ ಹುಟ್ಟಿದವರು ಕುಟುಂಬ, ಸ್ನೇಹಿತರನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಇವರಿಗೆ ಕೋಪವೂ ಸ್ವಲ್ಪ ಜಾಸ್ತಿ.
ಸಂಖ್ಯಾಶಾಸ್ತ್ರದ ಪ್ರಕಾರ ಮೂಲ ಸಂಖ್ಯೆ 1 ಹೊಂದಿರುವ ವ್ಯಕ್ತಿಗಳು ತುಂಬಾ ಚುರುಕಾಗಿ, ಉತ್ಸಾಹದಿಂದ ಇರುತ್ತಾರೆ. ಇವರಿಗೆ ಆತ್ಮವಿಶ್ವಾಸ ಜಾಸ್ತಿ. ಯಾವುದೇ ಕೆಲಸ ಶುರು ಮಾಡಿದರೂ ಮುಗಿಸುವವರೆಗೂ ಬಿಡುವುದಿಲ್ಲ. ಈ ದಿನಗಳಲ್ಲಿ ಹುಟ್ಟಿದವರು ಒಳ್ಳೆಯ ಉದ್ಯಮಿಗಳಾಗಿ ಬೆಳೆಯುವ ಸಾಧ್ಯತೆ ಇದೆ.
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನಲ್ಲಿ ಈ ನಾಲ್ಕು ದಿನಗಳಲ್ಲಿ ಹುಟ್ಟಿದವರು ಸ್ನೇಹ ಸಂಬಂಧದಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಲ್ಲಿ ಇವರು ಮುಂದಿರುತ್ತಾರೆ. ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕಷ್ಟದ ಸಮಯದಲ್ಲಿ ಸ್ನೇಹಿತರನ್ನು ಒಂಟಿಯಾಗಿ ಬಿಡುವುದಿಲ್ಲ. ಯಾವಾಗಲೂ ಅವರ ಜೊತೆಗಿರುತ್ತಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಿರುತ್ತಾರೆ.