ಜಾತಕ ಹೀಗಿದ್ದರೆ ಎರಡು, ಮೂರು ಸಂಬಂಧಗಳೂ ಇರಬಹುದು!
ಮದುವೆ ವಿಷಯಕ್ಕೆ ಬಂದಾಗ, ಅನೇಕ ಜನರು ತುಂಬಾ ಅದೃಷ್ಟವಂತರು, ಅವರು ಕುಟುಂಬದ ಸಂಪೂರ್ಣ ಬೆಂಬಲ ಪಡೆಯುತ್ತಾರೆ ಮತ್ತು ಪ್ರೇಮ ವಿವಾಹವು ವಿರೋಧವಿಲ್ಲದೆ ನಡೆಯುತ್ತೆ. ಆದರೆ ಎಲ್ಲರೂ ಅಷ್ಟು ಅದೃಷ್ಟವಂತರಿರೋದಿಲ್ಲ. ಕೆಲವು ಜನರು ಲವ್ ಮ್ಯಾರೇಜ್‌ಗಳಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಾರೆ. ಪ್ರೇಮ ವಿವಾಹದಲ್ಲಿ ಯಾರು ಕಷ್ಟವನ್ನು ಎದುರಿಸಬೇಕಾಗುತ್ತೆ ಎಂದು ತಿಳಿಯೋಣ.
ನೀವು ಲವ್ ಮ್ಯಾರೇಜ್ (Love marriage) ಆಗಲು ಬಯಸೋದಾದ್ರೆ, ಕೆಲವು ವಿಷಯಗಳನ್ನು ಪರಿಗಣಿಸಬೇಕು ಏಕೆಂದ್ರೆ ಎಲ್ಲರಿಗೂ ಮದುವೆಯಾಗೋದು ಸುಲಭವಲ್ಲ. ಇದಕ್ಕಾಗಿ ಅನೇಕ ಜನರು ಸಾಕಷ್ಟು ವಿರೋಧ ಎದುರಿಸಬೇಕಾಗುತ್ತೆ . ಜಾತಕದಲ್ಲಿನ ಯೋಗವು ಪ್ರೇಮ ವಿವಾಹ ಹೇಗೆ ತಡೆಯುತ್ತೆ ಎಂಬುದನ್ನು ತಿಳಿದುಕೊಳ್ಳೋಣ.
ಪ್ರೇಮ ವಿವಾಹಗಳಲ್ಲಿ ಸಾಕಷ್ಟು ವಿರೋಧವಿರುತ್ತೆ
ಜ್ಯೋತಿಷ್ಯ ಪ್ರಕಾರ, ಜಾತಕದ ಸಪ್ತಮದಲ್ಲಿ ರಾಹು ಅಥವಾ ಶನಿ ಕಾಣಿಸಿಕೊಂಡರೆ, ಆಗ, ಎರಡು ವಿವಾಹಗಳು ರೂಪುಗೊಳ್ಳುತ್ತವೆ. ಈ ಗ್ರಹಗಳ ಪ್ರಭಾವದಿಂದ, ಆ ವ್ಯಕ್ತಿ ಪ್ರೀತಿಗಾಗಿ ಅಲೆದಾಡುತ್ತಲೇ ಇರುತ್ತಾನೆ. ಅವರು ಪ್ರೀತಿಯನ್ನು (Love) ಕಂಡುಕೊಂಡರೂ, ಪ್ರೇಮ ವಿವಾಹದ ಸಂದರ್ಭದಲ್ಲಿ ಅವರು ಸಾಕಷ್ಟು ವಿರೋಧ ಎದುರಿಸಬೇಕಾಗಬಹುದು.
ಮದುವೆಯಲ್ಲಿ(Marriage) ಅನೇಕ ಅಡೆತಡೆಗಳು ಉಂಟಾಗುತ್ತೆ
ಜಾತಕದಲ್ಲಿ ರಾಹು ಮತ್ತು ಕೇತು ಇಬ್ಬರೂ ಐದನೇ ಸ್ಥಾನದಲ್ಲಿದ್ದರೆ, ಪ್ರೇಮ ವಿವಾಹಗಳು ರೂಪುಗೊಳ್ಳುತ್ತವೆ. ಆಗ, ವ್ಯಕ್ತಿಗಳು ತಮ್ಮ ಪ್ರೀತಿಯನ್ನು ಮದುವೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಪ್ರೇಮ ವಿವಾಹದ ಸಮಯದಲ್ಲಿ ಅನೇಕ ಅಡೆತಡೆಗಳ ಸಾಧ್ಯತೆಯಿದೆ. ಕೆಲವೊಮ್ಮೆ ಸಂಬಂಧಿಕರು, ಅಥವಾ ಇತರ ಯಾವುದೇ ವ್ಯಕ್ತಿಯಿಂದಾಗಿ ಸ್ವಲ್ಪ ಸಮಸ್ಯೆ ಇರಲಿದೆ.
ಈ ಪರಿಸ್ಥಿತಿಯಲ್ಲಿ, ವ್ಯಭಿಚಾರವಾಗುವ ಸಾಧ್ಯತೆಯಿದೆ!
ಜಾತಕದ ಏಳನೇ ಮನೆಯಲ್ಲಿ ರಾಹುವಿನೊಂದಿಗೆ ಸಪ್ತಮೇಶನೊಂದಿಗೆ ಕುಳಿತುಕೊಳ್ಳುವುದು ಅಥವಾ ಶುಕ್ರನೊಂದಿಗೆ ರಾಹು ಕುಳಿತುಕೊಳ್ಳುವುದು ಸಹ ಪ್ರೇಮ ವಿವಾಹದ ಶುಭ ಅವಕಾಶಗಳನ್ನು ನೀಡುತ್ತೆ. ಆದರೆ, ಅಂತಹ ಪರಿಸ್ಥಿತಿ ಉದ್ಭವಿಸಿದಾಗ, ವ್ಯಕ್ತಿಗಳು ಸಮಾಜದಿಂದ ಓಡಿಹೋಗುವ ಮೂಲಕ ಮದುವೆಯಾಗುತ್ತಾರೆ. ಜಾತಕದಲ್ಲಿ(Jataka) ಅಂತಹ ಯೋಗವಿದ್ದರೆ ವ್ಯಕ್ತಿ ವ್ಯಭಿಚಾರಿಯಾಗುವ ಸಾಧ್ಯತೆಯೂ ಇದೆ!
ಇವರಿಗೆ ಇಬ್ಬರು ಅಥವಾ ಮೂರು ಜನರೊಂದಿಗೆ ಸಂಬಂಧವಿರಬಹುದು
ಜಾತಕದಲ್ಲಿ ಗ್ರಹಗಳ ಅಧಿಪತಿಯಾದ ಮಂಗಳನು ಏಳನೇ ಮನೆ ಅಥವಾ ಅದರ ಅಧಿಪತಿಗೆ ಸಂಬಂಧ(Relation) ಹೊಂದಿದ್ದರೆ, ಈ ಜಾತಕದವರು ಎರಡು-ಮೂರು ಬಾರಿ ಪ್ರೀತಿಸುವ ಸಾಧ್ಯತೆಯಿದೆ.ಈ ಪರಿಸ್ಥಿತಿಯಲ್ಲಿ, ಅವರ ಪ್ರೇಮ ವಿವಾಹದಲ್ಲಿ ತೊಂದರೆಯಾಗುತ್ತೆ ಮತ್ತು ಕೆಲವೊಮ್ಮೆ ಅವರು ಒಟ್ಟಿಗೆ ವಾಸಿಸಲು ತೊಂದರೆ ಅನುಭವಿಸುತ್ತಾರೆ.
ಈ ಜನರಿಗೆ ಪ್ರೇಮ ವಿವಾಹದಿಂದ ತೊಂದರೆ.
ಜಾತಕದಲ್ಲಿ, ಅಶುಭ (Bad Luck) ಮತ್ತು ಕ್ರೂರ ಗ್ರಹಗಳು ಪ್ರೇಮ ವಿವಾಹದ ಅಂಶಗಳಾದ ಶುಕ್ರ, ಪಂಚಮೇಷ, ಸಪ್ತಮೇಶ, ಹನ್ನೊಂದನೇ ಭವಗಳು ಇತ್ಯಾದಿಗಳೊಂದಿಗೆ ಕುಳಿತರೆ, ಪ್ರೇಮ ವಿವಾಹದಲ್ಲಿ ಅನೇಕ ಅಡೆತಡೆಗಳಿವೆ. ಅಂತಹ ಪರಿಸ್ಥಿತಿ ಉದ್ಭವಿಸಿದಾಗ, ವ್ಯಕ್ತಿ ಮದುವೆ ಮೇಲಿನ ನಂಬಿಕೆಯನ್ನು ಸಹ ಕಳೆದುಕೊಳ್ಳುತ್ತಾನೆ.ಜಾತಕದಲ್ಲಿ ಪ್ರೇಮ ವಿವಾಹದ ಯೋಗವಿಲ್ಲದಿದ್ದರೇ, ಪ್ರೇಮ ವಿವಾಹ ಸಂಭವಿಸೋದಿಲ್ಲ.
ಈ ಯೋಗಗಳು ಪ್ರೇಮ ವಿವಾಹದ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ
ಜ್ಯೋತಿಷ್ಯ ಪ್ರಕಾರ, ಜಾತಕದಲ್ಲಿ ಮಂಗಳ ರಾಹು ಅಥವಾ ಶನಿಯೊಂದಿಗೆ ಸಂಯೋಗ ಹೊಂದಿದ್ದರೆ, ಪ್ರೇಮ ವಿವಾಹದ ಸಾಧ್ಯತೆ ಇದೆ. ಹಾಗೆಯೇ, ಶುಕ್ರ ದುರ್ಬಲಗೊಳ್ಳುವುದರಿಂದ, ಜಾತಕದಲ್ಲಿ ಪ್ರೀತಿಯ ಅಂಶ, ಪ್ರೇಮ ವಿವಾಹ ಮತ್ತು ಇಂದ್ರಿಯ ಭಾವನೆಗಳು ಸಹ ದುರ್ಬಲವಾಗುತ್ತವೆ. ಆಗ, ಅವರ ಪ್ರೀತಿಯು ಪ್ರಯತ್ನಗಳ ಮೂಲಕ ಮದುವೆಯನ್ನು ತಲುಪುತ್ತೆ ಆದರೆ ಮತ್ತೆ ಸಮಸ್ಯೆಗಳನ್ನು(Problems) ಎದುರಿಸಬೇಕಾಗಬಹುದು.