- Home
- Astrology
- Festivals
- Lucky Zodiac Signs: ಲಕ್ಷ್ಮೀ ದೇವಿಗೆ ಇಷ್ಟವಾದ 5 ರಾಶಿಗಳು… ಇವರಿಗೆ ಯಾವತ್ತೂ ಹಣದ ಸಮಸ್ಯೆ ಬರೋದಿಲ್ಲ
Lucky Zodiac Signs: ಲಕ್ಷ್ಮೀ ದೇವಿಗೆ ಇಷ್ಟವಾದ 5 ರಾಶಿಗಳು… ಇವರಿಗೆ ಯಾವತ್ತೂ ಹಣದ ಸಮಸ್ಯೆ ಬರೋದಿಲ್ಲ
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತೆ. ಜೊತೆಗೆ ಲಕ್ಷ್ಮಿ ದೇವಿಯು ವಾಸಿಸುವ ಮನೆಯಲ್ಲಿ ಎಂದಿಗೂ ಸಂಪತ್ತು, ಸಂತೋಷ ಮತ್ತು ಸಮೃದ್ಧಿಗೆ ಕೊರತೆ ಇರೋದೆ ಇಲ್ಲ.

ಜ್ಯೋತಿಷ್ಯದ ಪ್ರಕಾರ, ಲಕ್ಷ್ಮಿ (Goddess Lakshmi) ತನ್ನ ಆಶೀರ್ವಾದವನ್ನು ಎಲ್ಲರಿಗೂ ನೀಡುವುದಿಲ್ಲ ಮತ್ತು ತಾನು ಮೆಚ್ಚಿದವರಿಗೆ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಯಾವಾಗ್ಲೂ ನೀಡುತ್ತಾಳೆ. ಪ್ರತಿಯೊಂದು ರಾಶಿಯವರಿಗೆ ಆಳುವ ಗ್ರಹವಿರುವಂತೆಯೇ, ಲಕ್ಷ್ಮಿಗೂ ಕೆಲವು ನೆಚ್ಚಿನ ರಾಶಿಗಳಿವೆ. ಲಕ್ಷ್ಮಿಯ ನೆಚ್ಚಿನ ರಾಶಿಗಳು ಯಾವುವು ಅನ್ನೋದನ್ನು ನೋಡೋಣ.
ಮೀನ
ಜ್ಯೋತಿಷ್ಯದ ಪ್ರಕಾರ, ಮೀನ ರಾಶಿಯಲ್ಲಿ ಜನಿಸಿದ ಜನರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಹೊಂದಿರುತ್ತಾರೆ. ಏಕೆಂದರೆ ಈ ರಾಶಿಯಲ್ಲಿ ಜನಿಸಿದ ಜನರು ತುಂಬಾ ಶ್ರಮಜೀವಿ ಮತ್ತು ಅವರು ತಾವು ಮಾಡಲು ಹೊರಟಿರುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ಈ ಗುಣದಿಂದಾಗಿ, ಲಕ್ಷ್ಮಿ ದೇವಿಯು ಅವರ ಬಗ್ಗೆ ಸಂತೋಷಪಡುತ್ತಾಳೆ ಮತ್ತು ಯಾವಾಗಲೂ ಅವರ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಇದ್ದೆ ಇರುತ್ತೆ.
ತುಲಾ ರಾಶಿ
ತುಲಾ ರಾಶಿಯವರು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯರು. ಈ ರಾಶಿಯಲ್ಲಿ ಜನಿಸಿದ ಜನರು ಶ್ರಮಜೀವಿಗಳು (hardworker) ಮತ್ತು ಶ್ರದ್ಧೆಯುಳ್ಳವರು. ಲಕ್ಷ್ಮಿ ದೇವಿಯ ಕೃಪೆಯಿಂದ ಅವರಿಗೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. ತುಲಾ ರಾಶಿಯಲ್ಲಿ ಜನಿಸಿದ ಜನರು ಜೀವನದಲ್ಲಿ ಎಲ್ಲಾ ಸೌಕರ್ಯಗಳು ಮತ್ತು ಐಷಾರಾಮಿ ಜೀವನ ಪಡೆಯುತ್ತಾರೆ.
Taurus - Vrushaba
ವೃಷಭ ರಾಶಿ
ವೃಷಭ ರಾಶಿಯನ್ನು ಲಕ್ಷ್ಮಿಯ ನೆಚ್ಚಿನ ರಾಶಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ರಾಶಿಯ ಆಳುವ ಗ್ರಹ ಶುಕ್ರ ಮತ್ತು ಶುಕ್ರನನ್ನು ಸಂಪತ್ತು, ಸಂತೋಷ, ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ರಾಶಿಯ ಜನರಿಗೆ ಲಕ್ಷ್ಮಿಯ ವಿಶೇಷ ಆಶೀರ್ವಾದವಿರುತ್ತೆ. ಈ ಜನರು ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾರೆ, ಅಲ್ಲದೆ ಇವರು ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು (financial problem) ಎದುರಿಸಬೇಕಾಗಿಲ್ಲ.
ಸಿಂಹ ರಾಶಿ
ಜ್ಯೋತಿಷ್ಯದ ಪ್ರಕಾರ, ಲಕ್ಷ್ಮಿ ದೇವಿಯು ಸಿಂಹ ರಾಶಿಯನ್ನು ತುಂಬಾ ಪ್ರೀತಿಸುತ್ತಾಳೆ. ಸಿಂಹ ರಾಶಿಯಲ್ಲಿ ಜನಿಸಿದ ಜನರು ಬಲವಾದ ದೃಢನಿಶ್ಚಯ ಮತ್ತು ತೀಕ್ಷ್ಣ ಮನಸ್ಸನ್ನು ಹೊಂದಿರುತ್ತಾರೆ. ಅವರು ಮಾಡಲು ನಿರ್ಧರಿಸಿದ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಈ ರಾಶಿಯ ಜನರಿಗೆ ಎಂದಿಗೂ ಆರ್ಥಿಕ ಸಮಸ್ಯೆಗಳು ಉಂಟಾಗೋದೇ ಇಲ್ಲ.
Scorpio
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ಧರ್ಮದಲ್ಲಿ ಹೆಚ್ಚಿನ ನಂಬಿಕೆಯನ್ನು ಹೊಂದಿರುತ್ತಾರೆ ಮತ್ತು ಅಂತಹ ಜನರು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯರು. ಲಕ್ಷ್ಮಿ ದೇವಿಯ ಆಶೀರ್ವಾದದಿಂದ, ಈ ಜನರು ಎಂದಿಗೂ ಹಣದ ಕೊರತೆಯನ್ನು (money problem) ಅನುಭವಿಸೋದಿಲ್ಲ .