ಕಾಳ ಸರ್ಪ ದೋಷ ಎಂದರೇನು, ಅದನ್ನು ತೊಡೆದುಹಾಕಲು ಏನು ಮಾಡಬೇಕು?
ಜ್ಯೋತಿಷ್ಯದಲ್ಲಿ ಅನೇಕ ರೀತಿಯ ದೋಷಗಳು ವರದಿಯಾಗಿವೆ. ಈ ದೋಷಗಳು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಆದ್ದರಿಂದ, ಅದನ್ನು ತಪ್ಪಿಸೋದು ಅವಶ್ಯಕ. ಇವುಗಳಲ್ಲಿ ಒಂದು ಕಾಳ ಸರ್ಪ ದೋಷ, ಇದು ವ್ಯಕ್ತಿಯ ಮೇಲೆ ಅಶುಭ ಪರಿಣಾಮ ಬೀರುತ್ತೆ.
ವ್ಯಕ್ತಿಯ ಜಾತಕದಲ್ಲಿ ಅನೇಕ ಯೋಗಗಳಿವೆ, ಅದು ಅವನ ಜೀವನದಲ್ಲಿ ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತೆ. ತಮ್ಮ ಜಾತಕದಲ್ಲಿ ಕಾಳ ಸರ್ಪ ದೋಷವನ್ನು(Kaal Sarp Dosh) ಹೊಂದಿರುವ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಏನಿದು ಕಾಳಸರ್ಪ ದೋಷ ಮತ್ತು ಅದನ್ನು ತೊಡೆದುಹಾಕುವ ಮಾರ್ಗಗಳು ಯಾವುವು ಎಂದು ತಿಳಿದುಕೊಳ್ಳೋಣ.
ಈ ದೋಷವು ಹೇಗೆ ರೂಪುಗೊಳ್ಳುತ್ತೆ?: ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ಚಕ್ರದಲ್ಲಿ ರಾಹು ಮತ್ತು ಕೇತುವಿನ ಸ್ಥಾನವು ಮುಖಾಮುಖಿಯಾದರೆ, ಇದರೊಂದಿಗೆ, ಉಳಿದ ಏಳು ಗ್ರಹಗಳು(Planets) ರಾಹು ಮತ್ತು ಕೇತುವಿನ ಒಂದು ಬದಿಯಲ್ಲಿದ್ದರೆ ಮತ್ತು ಇನ್ನೊಂದು ಬದಿಯಲ್ಲಿ ಯಾವುದೇ ಗ್ರಹಗಳಿಲ್ಲದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಕಾಳ ಸರ್ಪ ಯೋಗ ರೂಪುಗೊಳ್ಳುತ್ತೆ.
ಕಾಳ ಸರ್ಪ ದೋಷದ ಲಕ್ಷಣಗಳು ಯಾವುವು?: ತನ್ನ ಜಾತಕದಲ್ಲಿ ಕಾಳ ಸರ್ಪ ದೋಷವನ್ನು ಹೊಂದಿರುವ ವ್ಯಕ್ತಿಯು ತನ್ನ ಕನಸಿನಲ್ಲಿ(Dream) ಹಾವುಗಳನ್ನು ಹೆಚ್ಚಾಗಿ ನೋಡುತ್ತಾನೆ. ಹಾಗೆಯೇ ಮನೆಯಲ್ಲಿ ಯಾವಾಗಲೂ ಜಗಳದ ವಾತಾವರಣವಿರುತ್ತೆ. ಆ ವ್ಯಕ್ತಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗೋದಿಲ್ಲ. ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳಿರುತ್ತವೆ. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸುತ್ತಾರೆ.
ಈ ದೋಷವನ್ನು ತೊಡೆದುಹಾಕೋದು ಹೇಗೆ?: ಕಾಳ ಸರ್ಪ ದೋಷವನ್ನು ತೊಡೆದುಹಾಕಲು, ಸೋಮವಾರ, ಗಂಗಾ ನೀರನ್ನು ಸಾಮಾನ್ಯ ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ(Shivling) ಅಭಿಷೇಕ ಮಾಡಬೇಕು. ಇದರೊಂದಿಗೆ ಶ್ರೀಗಂಧದ ಧೂಪವನ್ನು ಮಹಾದೇವನಿಗೆ ಅರ್ಪಿಸಬೇಕು. ಕಾಳ ಸರ್ಪ ದೋಷವನ್ನು ತೊಡೆದುಹಾಕಲು, ಮಹಾಮೃತ್ಯುಂಜಯ ಮಂತ್ರವನ್ನು ಸತತ ಏಳು ದಿನಗಳವರೆಗೆ 108 ಬಾರಿ ಪಠಿಸಿ.
ಶಿವಲಿಂಗದ ಮೇಲೆ ಏನು ಮಾಡಬೇಕು?: ಒಂದು ಜೋಡಿ ಬೆಳ್ಳಿ ಹಾವುಗಳನ್ನು(Silver snake) ಮಾಡಿ, ಸೋಮವಾರ ಅವುಗಳನ್ನು ಹಾಲಿನಲ್ಲಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಶಿವರಾತ್ರಿ ಅಥವಾ ನಾಗರ ಪಂಚಮಿಯ ದಿನದಂದು ಸಹ ಈ ಪರಿಹಾರವನ್ನು ಮಾಡಬಹುದು. ಇದು ಕಾಳ ಸರ್ಪ ದೋಷದಿಂದ ಪರಿಹಾರವನ್ನು ನೀಡುತ್ತೆ.
ಸರ್ಪ ಗಾಯತ್ರಿ ಅಥವಾ ಮಹಾಮೃತ್ಯುಂಜಯವನ್ನು ಪಠಿಸುವ ಬ್ರಾಹ್ಮಣನ ಸಹಾಯ ನೀವು ಪಡೆಯಬಹುದು. ಜಪ ಮಾಡುವಾಗ, ನೀವು ಶಿವಲಿಂಗವನ್ನು ಅಭಿಷೇಕ(Abhishek) ಮಾಡೋದನ್ನು ಮುಂದುವರಿಸಬೇಕು.
ಯಾವ ಮಂತ್ರವನ್ನು ಪಠಿಸಬೇಕು?: ಜಾತಕದಲ್ಲಿ ಕಾಳ ಸರ್ಪ ದೋಷ ಹೊಂದಿರುವ ವ್ಯಕ್ತಿಯು ಮನೆಯಲ್ಲಿ ನವಿಲು ಗರಿಗಳನ್ನು ಧರಿಸಿದ ಶ್ರೀಕೃಷ್ಣನ(Shri Krishna) ವಿಗ್ರಹವನ್ನು ಸ್ಥಾಪಿಸಬೇಕು. ಪ್ರತಿದಿನವೂ ಆತನನ್ನು ವಿಧಿವಿಧಾನಗಳೊಂದಿಗೆ ಪೂಜಿಸಿ. ಹಾಗೆಯೇ, 'ಓಂ ನಮೋ ಭಗವತೇ ವಾಸುದೇವಾಯ' ಮಂತ್ರವನ್ನು 108 ಬಾರಿ ಪಠಿಸುವ ಮೂಲಕ ಅಭಿಷೇಕ ಮಾಡಿ. ನಿಮ್ಮ ಸಮಸ್ಯೆಗಳೆಲ್ಲ ಸರಿಯಾಗುತ್ತೆ.