ಕಾಳಸರ್ಪ ದೋಷ ನಿವಾರಿಸಲು ಈ ಮಾರ್ಗ ಅನುಸರಿಸಿ
ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಕಾಳಸರ್ಪ ದೋಷವನ್ನು ಹೊಂದಿರುವ ಜನರು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತೆ. ಇದರೊಂದಿಗೆ, ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಈ ದೋಷವನ್ನು ತೊಡೆದುಹಾಕೋದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ಚಕ್ರದಲ್ಲಿ ರಾಹು ಮತ್ತು ಕೇತುವಿನ ಸ್ಥಾನವು ಮುಖಾಮುಖಿಯಾಗಿದೆ. ಇದರೊಂದಿಗೆ, ಉಳಿದ ಏಳು ಗ್ರಹಗಳು ರಾಹು ಕೇತುವಿನ ಒಂದು ಬದಿಯಲ್ಲಿದ್ದರೆ ಮತ್ತು ಇನ್ನೊಂದು ಬದಿಯಲ್ಲಿ ಯಾವುದೇ ಗ್ರಹವಿಲ್ಲದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಕಾಳಸರ್ಪ ಯೋಗ ರೂಪುಗೊಳ್ಳುತ್ತೆ. ಇದನ್ನು ಕಾಳಸರ್ಪ ದೋಷ (Kaal sarp dosh) ಎಂದು ಕರೆಯಲಾಗುತ್ತೆ. ಜಾತಕದಲ್ಲಿ ಕಾಳಸರ್ಪ ದೋಷವಿದ್ದಾಗ ಅನೇಕ ಚಿಹ್ನೆಗಳನ್ನು ಕಾಣಬಹುದು. ಕಾಳಸರ್ಪ ದೋಷದ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ತಿಳಿಯಿರಿ.
ಕಾಳಸರ್ಪ ದೋಷದ ಲಕ್ಷಣಗಳು
ಆಧ್ಯಾತ್ಮಿಕ ಗುರುಗಳ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ, ಒಂದು ಸಮಯದಲ್ಲಿ ಅವನು ಕೆಲವು ರೀತಿಯ ಸಂಕೇತಗಳನ್ನು(Symbols) ಪಡೆಯಲು ಪ್ರಾರಂಭಿಸುತ್ತಾನೆ, ಅದನ್ನು ಸಮಯಕ್ಕೆ ಸರಿಯಾಗಿ ಗುರುತಿಸಬಹುದು ಮತ್ತು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
ತಮ್ಮ ಜಾತಕದಲ್ಲಿ ಕಾಳಸರ್ಪ ದೋಷವನ್ನು ಹೊಂದಿರುವ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಇದಲ್ಲದೆ, ಹಾವುಗಳು(Snake) ಕನಸಿನಲ್ಲಿ ಹೆಚ್ಚು ಗೋಚರಿಸುತ್ತವೆ, ಕೌಟುಂಬಿಕ ಸಂಘರ್ಷಗಳೂ ಉಂಟಾಗುತ್ತೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿರೋದು, ಕೆಲಸದಲ್ಲಿ ಅಡೆತಡೆ, ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ, ಇತ್ಯಾದಿ.
ಕಾಳಸರ್ಪ ದೋಷವನ್ನು ತೊಡೆದುಹಾಕುವ ಮಾರ್ಗಗಳು ಹೀಗಿವೆ
ಶಿವಲಿಂಗದ(Shivling) ಮೇಲೆ ನೀರನ್ನು ಅರ್ಪಿಸಿ
ಜಾತಕದಲ್ಲಿ ಕಾಳಸರ್ಪ ದೋಷವನ್ನು ತೊಡೆದು ಹಾಕುವ ಪರಿಹಾರವೆಂದ್ರೆ,ಸೋಮವಾರ ಶಿವನ ದೇಗುಲಕ್ಕೆ ತೆರಳಿ ಶಿವಲಿಂಗದ ಮೇಲೆ ಗಂಗಾ ನೀರಿನ ಅಭಿಷೇಕ ಮಾಡುವ ಮೂಲಕ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ, ಸತತ 108 ದಿನಗಳ ಕಾಲ ಅಭಿಷೇಕವನ್ನು ಮಾಡಿ, ಶ್ರೀಗಂಧದ ಸಮೃದ್ಧ ಧೂಪವನ್ನು ಮಹಾದೇವನಿಗೆ ಅರ್ಪಿಸಿ, ಹೀಗೆ ಮಾಡೋದ್ರಿಂದ ಕಾಳಸರ್ಪ ದೋಷವನ್ನು ತೊಡೆದುಹಾಕಬಹುದು.
ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸಿ
ಎರಡನೆಯ ಪರಿಹಾರವೆಂದ್ರೆ ಒಂದು ಜೋಡಿ ಬೆಳ್ಳಿ ಹಾವುಗಳನ್ನು(Silver snake) ತಯಾರಿಸಿ, ಸೋಮವಾರ ಅಥವಾ ಶಿವರಾತ್ರಿ ಅಥವಾ ನಾಗರ ಪಂಚಮಿಯಂದು ಹಾಲಿನಲ್ಲಿ ಇರಿಸಿ ಮತ್ತು ಶಿವಲಿಂಗದ ಮೇಲೆ ಅರ್ಪಿಸೋದು ಅಥವಾ ಅಭಿಷೇಕ ಮಾಡೋದ್ರಿಂದ ಈ ದೋಷನಿವಾರಣೆಯಾಗುತ್ತೆ.
ಇದರೊಂದಿಗೆ ಸರ್ವ ಗಾಯತ್ರಿ ಅಥವಾ ಮಹಾಮೃತ್ಯುಂಜಯ(Mahamruthyunjaya mantra) ಮಂತ್ರವನ್ನು ಪಠಿಸಬೇಕು. ಅದನ್ನು ನೀವೇ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ, ಯಜ್ಞಪವಿತಾರಿ, ಸರ್ಪ ಗಾಯತ್ರಿಯನ್ನು ಪಠಿಸುವ ಬ್ರಾಹ್ಮಣನನ್ನು ಸಂಪರ್ಕಿಸಲು ಪ್ರಯತ್ನಿಸಿ, ಮಂತ್ರವನ್ನು ಪಠಿಸಿ ಮತ್ತು ನೀವು ಅಭಿಷೇಕ ಮಾಡುತ್ತಲೇ ಇರಿ.
ಈ ಮಂತ್ರವನ್ನು ಪಠಿಸಿ
ಕಾಳಸರ್ಪ ದೋಷವನ್ನು ತೊಡೆದುಹಾಕಲು, ನವಿಲು ಗರಿಗಳನ್ನು ಧರಿಸಿ ಮನೆಯಲ್ಲಿ ಶ್ರೀಕೃಷ್ಣನ (Sri Krishna )ಪ್ರತಿಮೆಯನ್ನು ಸ್ಥಾಪಿಸಬೇಕು, ಜೊತೆಗೆ ಪ್ರತಿದಿನ ಅವನನ್ನು ಪೂಜಿಸಬೇಕು ಮತ್ತು 'ಓಂ ನಮೋ ಭಗವತೇ ವಾಸುದೇವಾಯ' ಮಂತ್ರವನ್ನು108 ಬಾರಿ ಪಠಿಸಬೇಕು. ಇದರಿಂದ ದೋಷ ನಿವಾರಣೆಯಾಗುತ್ತೆ.