ಕನಸಲ್ಲಿ ಹಣ ನೋಡಿದ್ರೆ, ನಿಜವಾಗ್ಲೂ ಶ್ರೀಮಂತರಾಗ್ತಾರ?
ಕನಸುಗಳು ನಿಜ ಜೀವನಕ್ಕೆ ತುಂಬಾ ಹತ್ತಿರವಾದ ಸಂಬಂಧ ಹೊಂದಿದೆ. ಸ್ವಪ್ನ ಶಾಸ್ತ್ರದಲ್ಲಿ ಕನಸುಗಳ ಬಗ್ಗೆ ವಿವರವಾಗಿ ವಿವರಿಸಲಾಗಿದೆ. ವಿಶೇಷವಾಗಿ, ಕನಸಿನಲ್ಲಿ ಹಣವನ್ನು ನೋಡೋದು ಒಂದು ವಿಶೇಷ ಅರ್ಥವನ್ನು ಹೊಂದಿದೆ. ತಜ್ಞರ ಪ್ರಕಾರ, ಕನಸುಗಳಿಗೆ ಎರಡು ಕಾರಣಗಳಿವೆ. ಇದಕ್ಕೆ ಒಂದು ವೈಜ್ಞಾನಿಕ ಕಾರಣ. ಸರಳವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ಆಲೋಚನೆಯು ಯಾವಾಗಲೂ ಒಂದೇ ಬಿಂದುವಿನ ಮೇಲೆ ಕೇಂದ್ರೀಕೃತವಾದಾಗ, ವ್ಯಕ್ತಿಯು ರಾತ್ರಿಯಲ್ಲಿ ಅದೇ ಕನಸುಗಳನ್ನು ಹೊಂದುತ್ತಾನೆ. ಕನಸುಗಳ ಪ್ರಾಮುಖ್ಯತೆಯನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಧರ್ಮಗ್ರಂಥದ ಪ್ರಕಾರ, ಪ್ರತಿಯೊಂದು ಕನಸಿಗೂ ಅರ್ಥವಿದೆ. ನೀವು ಕನಸಿನಲ್ಲಿ ಸಾಕಷ್ಟು ಹಣ ಕಂಡರೆ, ಅದರ ಅರ್ಥ ಏನಿರಬಹುದು ಅನ್ನೋದನ್ನು ತಿಳಿಯೋಣ?
ನೀವು ಕನಸಿನಲ್ಲಿ (Dream) ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡುತ್ತಿದ್ದರೆ, ಈ ಕನಸನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತೆ. ಇದು ನೀವು ಶೀಘ್ರದಲ್ಲೇ ಹಣ ಗಳಿಸಲಿದ್ದೀರಿ ಎಂಬುದರ ಸಂಕೇತ. ಆದ್ದರಿಂದ, ಕನಸಿನಲ್ಲಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡೋದು ಶುಭಕರ.
ಕನಸಿನಲ್ಲಿ ಯಾರಾದರೂ ನಿಮಗೆ ಗರಿಗರಿ ನೋಟ್ (Note) ನೀಡಿದರೆ, ಅದು ನಿಮ್ಮ ಆರ್ಥಿಕ ಪರಿಸ್ಥಿತಿ ಶೀಘ್ರದಲ್ಲೇ ಸರಿಹೋಗಲಿದೆ ಎಂಬುದರ ಸಂಕೇತ. ಇದು ಆದಾಯದ ಹೆಚ್ಚಳವನ್ನು ಸೂಚಿಸುತ್ತೆ. ಹಾಗಾದ್ರೆ ಇಂತಹ ಕನಸು ಬಿದ್ದಾಗ ಖುಷಿ ಪಡಿ.
- ಅದೇ ಸಮಯದಲ್ಲಿ, ಕನಸಿನಲ್ಲಿ ಹಣ ಕಳೆದು ಕೊಳ್ಳೋದು ಮತ್ತು ಕಳೆದು ಹೋದ ಹಣವನ್ನು(Money) ಮತ್ತೊಮ್ಮೆ ಪಡೆಯೋದು ಶುಭವಲ್ಲ. ಇದು ಶೀಘ್ರದಲ್ಲೇ ನೀವು ಕೆಲವು ಶುಭ ಕಾರ್ಯಗಳಲ್ಲಿ ವಿಫಲರಾಗಬಹುದು ಎಂಬುದರ ಸಂಕೇತ. ಅಲ್ಲದೆ, ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಬೇಕಾದೀತು.
-ಕನಸಿನಲ್ಲಿ ನೆಲದ ಮೇಲೆ ಬಿದ್ದ ಹಣವನ್ನು ನೀವು ಎತ್ತಿಕೊಳ್ಳುತ್ತಿದ್ದರೆ, ನಿಮಗೆ ಅದೇ ಎಚ್ಚರಿಕೆಯಾಗಿದೆ. ಇದಕ್ಕಾಗಿ, ಭವಿಷ್ಯದಲ್ಲಿ ನಿಮ್ಮ ನಿಜವಾದ ಕೆಲಸದ ಮೇಲೆ ಗಮನ ಹರಿಸೋದು ಅಗತ್ಯ. ಇದರಿಂದ ನಿಮ್ಮ ಆರ್ಥಿಕ ಜೀವನದಲ್ಲಿ(Financial Life) ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಿ.
- ಕನಸಿನಲ್ಲಿ ಗಾಳಿಯಲ್ಲಿ(Air) ಹಾರುತ್ತಿರುವ ಹಣವನ್ನು ಹಿಡಿಯಲು ಪ್ರಯತ್ನಿಸುತ್ತಿತುವಂತೆ ಕಂಡರೆ, ಖಂಡಿತವಾಗಿಯೂ ಇದು ಹಣ ಸಿಗುವ ಬಗ್ಗೆ ಅಲ್ಲವೇ ಅಲ್ಲ, ಬದಲಾಗಿ ನೀವು ಇತರ ಜನರಿಗೆ ಸಲಹೆ ನೀಡಲಿದ್ದೀರಿ ಎಂಬುದರ ಸಂಕೇತವಾಗಿದೆ ಅಷ್ಟೇ..
-ಕನಸಿನಲ್ಲಿ ಹಣವನ್ನು ಕಳೆದುಕೊಳ್ಳೋದು(Lost money) ನಿಜ ಜೀವನ ಸರಿಯಾಗಿಲ್ಲ ಎಂದು ಅರ್ಥ. ಇದು ನಿಮ್ಮ ಜೀವನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದರ ಸಂಕೇತ. ಆದುದರಿಂದ ನಿಮ್ಮ ಜೀವನವನ್ನು ಸರಿ ಮಾರ್ಗದಲ್ಲಿ ಕೊಂಡೊಯ್ಯಲು ನೀವು ಏನು ಮಾಡಬೇಕು ಅನ್ನೋದರ ಬಗ್ಗೆ ಗಮನ ಹರಿಸೋದು ತುಂಬಾ ಮುಖ್ಯ.
ಹಣ ಅಥವಾ ಆಭರಣ(Jewellery) ಸಿಗುವ ಕನಸು ಕಂಡರೆ?
ಮೇಲೆ ಹೇಳಿದಂತೆ, ಸ್ವಪ್ನದಲ್ಲಿನ ಹಣವು ಆತ್ಮ ವಿಶ್ವಾಸ, ಸ್ವ-ಮೌಲ್ಯ, ಸಂಪತ್ತು, ಅಧಿಕಾರ ಮತ್ತು ಸಮೃದ್ಧಿಯ ಸಂಕೇತ. ಕನಸಿನಲ್ಲಿ ಹಣ ಅಥವಾ ಆಭರಣ ಸಿಗುವಂತೆ ಕಂಡರೆ, ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗುತ್ತಿದೆ, ಅಥವಾ ಪರಿಶ್ರಮದ ಸಂಕೇತವಾಗಿದೆ.
ನಾಣ್ಯಗಳ ಬಗ್ಗೆ ಕನಸು ಕಾಣುವುದು ಅಸಾಧಾರಣ ಆರ್ಥಿಕ ಅವಕಾಶಗಳನ್ನು ಸೂಚಿಸುತ್ತದೆ. ನೀವು ಶೀಘ್ರದಲ್ಲೇ ಲಾಭ ಗಳಿಸುವ ಸಾಧ್ಯತೆ ಇದೆ ಅನ್ನೋದನ್ನು ಇದು ಸೂಚಿಸುತ್ತದೆ. ಇನ್ನು ಚಿನ್ನದ ನಾಣ್ಯಗಳ(Gold coin) ಕನಸು ಬಿದ್ದರೆ, ಅದು ಸಂಪತ್ತು ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ಸಾಕಷ್ಟು ಅದ್ಭುತ ಆಶ್ಚರ್ಯಗಳು ನಿಮ್ಮ ದಾರಿಯಲ್ಲಿವೆ.