Astrology Tips: ಈ ರಾಶಿಯವರು ವಜ್ರ ಧರಿಸಿದ್ರೆ ಅದೃಷ್ಟವೇ ಬದಲಾಗುತ್ತೆ !
ವಜ್ರವು ರತ್ನಗಳಲ್ಲೇ ಒಂದು ಶ್ರೇಷ್ಟವಾದ ರತ್ನವಾಗಿದೆ. ವಜ್ರದ ಹೊಳಪು ಎಲ್ಲರನ್ನೂ ಆಕರ್ಷಿಸುತ್ತೆ. ವಜ್ರ ಪಾರದರ್ಶಕವಾಗಿರುತ್ತೆ, ವಜ್ರದಷ್ಟು ಕಠಿಣ ವಸ್ತು ಬೇರೊಂದು ಇರಲಾರದು ಎಂದು ಹೇಳಲಾಗುತ್ತೆ. ಆದರೆ ವಜ್ರದ ಬಗ್ಗೆ ಮತ್ತೊಂದು ವಿಷ್ಯ ನಿಮಗೆ ಗೊತ್ತಾ? ವಜ್ರ ಔಷಧೀಯ ಗುಣಗಳನ್ನು ಹೊಂದಿದೆ ಎಂದು ರಿಸರ್ಚ್ ಹೇಳುತ್ತೆ. ವಜ್ರವನ್ನು ಧರಿಸೋದರಿಂದ ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ನಿವಾರಿಸಬಹುದು, ಅದರೊಂದಿಗೆ ವಜ್ರ ಅನೇಕ ಸಂಕೀರ್ಣ ರೋಗಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತೆ ಎನ್ನಲಾಗಿದೆ.
ವಜ್ರವು(Diamond) ಬಹಳ ಅಮೂಲ್ಯವಾದ ರತ್ನವಾಗಿದೆ. ವಜ್ರವನ್ನು ನೈಸರ್ಗಿಕ ವಸ್ತುಗಳಲ್ಲಿ ಅತ್ಯಂತ ಕಠಿಣವೆಂದು ಪರಿಗಣಿಸಲಾಗುತ್ತೆ. ಈ ಕಾರಣಕ್ಕಾಗಿ, ಇದನ್ನು ಆಭರಣಗಳಲ್ಲಿ ಬಳಸಲಾಗುತ್ತೆ. ನೀವು ವಜ್ರವನ್ನು ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಅವುಗಳ ಬಗ್ಗೆ ತಿಳಿಯೋಣ ಬನ್ನಿ.
ವಜ್ರ ಮಂಗಳಕರ ಮತ್ತು ಅಶುಭ ಫಲಿತಾಂಶಗಳನ್ನು ಸಹ ನೀಡುತ್ತೆ
ವಜ್ರವು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತೆ. ಆದ್ದರಿಂದ, ಅದನ್ನು ಧರಿಸುವಾಗ ಎಚ್ಚರಿಕೆ ವಹಿಸಬೇಕು. ಸಲಹೆಯಿಲ್ಲದೆ ಈ ರತ್ನವನ್ನು ಧರಿಸಬಾರದು. ಜಾತಕದಲ್ಲಿ(Jataka) ಶುಕ್ರನ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಶುಭ ಸಮಯದಲ್ಲಿ ವಜ್ರವನ್ನು ಧರಿಸುವುದು ಒಳ್ಳೆಯದು.
'ವಜ್ರ'ವನ್ನು ಧರಿಸೋದರಿಂದ ಏನಾಗುತ್ತೆ?
ವಜ್ರವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ತಮ್ಮ ಜಾತಕದಲ್ಲಿ ಶುಕ್ರನ ಸ್ಥಾನವು ದುರ್ಬಲ ಅಥವಾ ಅಶುಭವಾಗಿರುವ ಜನರಿಗೆ ವಜ್ರವನ್ನು ಧರಿಸಲು ಸಲಹೆ ನೀಡಲಾಗುತ್ತೆ. ವಜ್ರವು ಆರಾಮವನ್ನು ಹೆಚ್ಚಿಸುತ್ತೆ. ಶುಕ್ರನು ಐಷಾರಾಮಿ ಜೀವನಕ್ಕೆ(Luxury life) ಸಂಬಂಧಿಸಿದ ಗ್ರಹ. ಆದ್ದರಿಂದ, ಇದನ್ನು ಧರಿಸೋದರಿಂದ ಶುಕ್ರನ ಶಕ್ತಿ ಹೆಚ್ಚಾಗುತ್ತೆ.
ವಜ್ರವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೆ. ಪ್ರೀತಿಯ(Love) ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಿಸಲು ಸಹ ಇದು ಸಹಕಾರಿ. ಅಷ್ಟೇ ಅಲ್ಲ, ಸಂತೋಷದ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತೆ. ಲಲಿತಕಲೆ, ಮೀಡಿಯಾ, ಚಲನಚಿತ್ರ ಅಥವಾ ಫ್ಯಾಷನ್ ಇತ್ಯಾದಿಗಳಿಗೆ ಸಂಬಂಧಿಸಿದ ಜನರು ಇದನ್ನು ಧರಿಸಿದರೆ, ಅದು ಅದೃಷ್ಟವನ್ನು ಹೆಚ್ಚಿಸುತ್ತೆ.
ಯಾವ ರಾಶಿಚಕ್ರದವರು 'ವಜ್ರ'ವನ್ನು ಧರಿಸಬಹುದು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ, ಮಿಥುನ, ಕನ್ಯಾ, ಮಕರ, ತುಲಾ ಮತ್ತು ಕುಂಭ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸಬಹುದು. ಈ ರಾಶಿಯವರು ವಜ್ರ ಧರಿಸುವುದು ಹೆಚ್ಚು ಮಂಗಳಕರ ಹಾಗೂ ಅದೃಷ್ಟವನ್ನು(Lucky) ತರುತ್ತೆ ಎಂದು ನಂಬಲಾಗಿದೆ.
ಈ ಜನರು 'ವಜ್ರ' ಧರಿಸಬಾರದು
ಮೇಷ, ಸಿಂಹ, ವೃಶ್ಚಿಕ, ಧನುಸ್ಸು ಮತ್ತು ಮೀನ ಲಗ್ನಕ್ಕೆ ವಜ್ರ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಎಂದು ನಂಬಲಾಗಿದೆ. ವೃಶ್ಚಿಕ ರಾಶಿಯ್ವರು ಇದನ್ನು ಧರಿಸಬಾರದು. ಫ್ಯಾಷನ್(Fashion) ಕಾರಣದಿಂದಾಗಿ ನೀವು ವಜ್ರವನ್ನು ಧರಿಸಲು ಬಯಸಿದರೆ, ಮೊದಲು ಜ್ಯೋತಿಷಿಗಳ ಸಲಹೆ ಪಡೆಯಿರಿ. ಇಲ್ಲಾಂದ್ರೆ ಅಪಾಯ ಉಂಟಾಗುವ ಸಾಧ್ಯತೆ ಇದೆ.