ಜಾತಕದಲ್ಲಿ ಈ ಗ್ರಹ ದುರ್ಬಲವಾಗಿದ್ರೆ ಆ ಸಂಬಂಧ ಹೆಚ್ಚು ಸಮಯ ಉಳಿಯಲ್ಲ
ಜೀವನದ ಘಟನೆಗಳ ಹಿಂದೆ ಗ್ರಹಗಳ ದಿಕ್ಕು ಮತ್ತು ಸ್ಥಿತಿ ಕಾರಣವಾಗಿರುತ್ತೆ. ಇಲ್ಲಿ, ಸಂಬಂಧ ಹಾಳು ಮಾಡುವ, ಹದಗೆಡಿಸುವ ಮತ್ತು ಸಂಬಂಧವನ್ನು ಮುರಿಯುವ ಹಿಂದೆ ಯಾವ ಗ್ರಹವಿದೆ ಎಂದು ನಾವು ತಿಳಿಯೋಣ.
ಗ್ರಹಗಳು (Planets) ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಜೀವನದಲ್ಲಿ ಸಂಭವಿಸುವ ಘಟನೆಗಳು ಗ್ರಹಗಳ ದಿಕ್ಕು ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತೆ. ಯಾವ ಗ್ರಹವು ಸಂಬಂಧ ಹಾಳು ಮಾಡುತ್ತದೆ ಎಂದು ಜ್ಯೋತಿಷ್ಯ ತಜ್ಞರಿಂದ ತಿಳಿದುಕೊಳ್ಳೋಣ.
ವೈದಿಕ ಜ್ಯೋತಿಷ್ಯದಲ್ಲಿ, ಮಂಗಳನನ್ನು ಸಂಬಂಧಗಳ ಅಂಶವೆಂದು ಪರಿಗಣಿಸಲಾಗುತ್ತೆ, ಆದರೆ ಈ ಸಂದರ್ಭದಲ್ಲಿ ಕೇತು ಮಂಗಳನಿಗಿಂತ ಹೆಚ್ಚು ಅಪಾಯಕಾರಿ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಕೇತುವಿನ ಸ್ಥಾನ ಕಡಿಮೆ ಇದ್ರೆ ಅದು ಸಂಬಂಧವನ್ನು(Relationship) ನಾಶಪಡಿಸುತ್ತೆ.
ನೀವು ಯಾರೊಂದಿಗಾದರೂ ಅಂದರೆ ಗೆಳೆಯ ಅಥವಾ ಗರ್ಲ್ ಫ್ರೆಂಡ್ ಜೊತೆ ಪ್ರೇಮ ಸಂಬಂಧದಲ್ಲಿದ್ದರೆ, ಅದು ಕೇತುವಿಗೆ ಸಂಬಂಧಿಸಿದೆ. ಜಾತಕದಲ್ಲಿ ಕೇತುವಿನ ಅವನತಿಯು ಸಂಬಂಧದಲ್ಲಿ ಬಿರುಕು ಸೃಷ್ಟಿಸುತ್ತೆ . ಲವರ್ಸ್(Lovers) ನಡುವೆ ಅಂತರ ಉಂಟಾಗುತ್ತೆ.
ಕಪಲ್ಸ್ ಗಳ(Couples) ನಡುವಿನ ಭಿನ್ನಾಭಿಪ್ರಾಯ, ತಪ್ಪು ತಿಳುವಳಿಕೆಗಳು ಮತ್ತು ಪ್ರೀತಿಯ ಕೊರತೆ ಹೆಚ್ಚಾಗಲು ಪ್ರಾರಂಭಿಸುತ್ತೆ. ಸಂಬಂಧವು ಮುರಿದುಬೀಳುವ ಸಾಧ್ಯತೆಗಳು ಸಹ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಅಥವಾ ಸಂಬಂಧವು ದೂರವಾಗುತ್ತದೆ..
ಮಂಗಳನ ಪ್ರಭಾವ ಹೆಚ್ಚಿರುವಾಗ ಕೇತು ಕುಂಡಲಿಯನ್ನು ಪ್ರವೇಶಿಸಿದರೆ, ಸಂಬಂಧವೂ ಹದಗೆಡಲು ಪ್ರಾರಂಭಿಸುತ್ತೆ. ಕೇತುವಿನ ಅಡ್ಡಪರಿಣಾಮಗಳು ತೀವ್ರ ಮಾನಸಿಕ ಒತ್ತಡ(Mental stress) ಉಂಟುಮಾಡುತ್ತವೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿಯು ಆಗ ಪ್ರೀತಿಯಲ್ಲಿ ಯಶಸ್ಸನ್ನು ಪಡೆಯೋದಿಲ್ಲ ಮತ್ತು ವ್ಯಕ್ತಿಯು ಧಾರ್ಮಿಕ ಕಾರ್ಯಗಳಿಂದ ದೂರವಿರುತ್ತಾನೆ.
ಮಂಗಳನ (Mars) ಪರಿಣಾಮ ಹೆಚ್ಚಾದ್ರೆ ಕೇತುವನ್ನು ಹೊಂದಿರುವುದು ಒಬ್ಬ ವ್ಯಕ್ತಿಯನ್ನು ಗುರಿಯಿಲ್ಲದವನನ್ನಾಗಿ ಮಾಡುತ್ತೆ. ವ್ಯಕ್ತಿಯು ತನ್ನ ಉದ್ದೇಶದಿಂದ ಗಮನವನ್ನು ಬೇರೆಡೆಗೆ ಹರಿಸುವಂತಾಗುತ್ತೆ. ಆಗ ಲವ್ ಲೈಫ್ ನಲ್ಲಿ ನೀವು ಯಾವುದೇ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡಿದ್ರೂ ಅದು ಎಂದಿಗೂ ಯಶಸ್ವಿಯಾಗೋದಿಲ್ಲ.
ಕೇತು ಕೆಟ್ಟವನೋ ಅಲ್ಲವೋ ಎಂದು ಕಂಡು ಹಿಡಿಯಲು ಸರಳ ಮಾರ್ಗವೆಂದರೆ ನಿಮ್ಮ ಪಾದಗಳು ಎಂದು ನಂಬಲಾಗಿದೆ. ಅಂದರೆ, ಕೆಲವು ಕಾರಣಗಳಿಂದಾಗಿ ಪದೇ ಪದೇ ಕಾಲಿಗೆ ಗಾಯವಾಗುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಕೇತು ಕೆಟ್ಟದಾಗಿದೆ ಎಂದರ್ಥ. ಕೇತುವಿನ ಕೆಟ್ಟ ಪರಿಣಾಮಗಳಿಂದ ನಿಮ್ಮ ಸಂಬಂಧವನ್ನು ಉಳಿಸಲು, ಪ್ರತಿದಿನ ಹನುಮಾನ್ ಚಾಲೀಸಾವನ್ನು(Hanuman Chalisa) ಪಠಿಸಬೇಕು.