ಇವರಿಗೆ ಅವರು ಪ್ರೇಮಿ, ಅವರಿಗೆ ಇವರಲ್ಲ! ಒನ್ ಸೈಡೆಡ್ ಲವ್ ಈ ರಾಶಿಯವರಲ್ಲಿ ಹೆಚ್ಚು
ಒನ್ ಸೈಡೆಡ್ ಲವ್ವಲ್ಲಿರುವುದು ಬಹಳ ಕಠಿಣ. ಹಾಗಂಥ ಅದರಿಂದ ಹೊರ ಬರುವುದು ಮತ್ತೂ ಕಠಿಣವೆನಿಸುತ್ತಿರುತ್ತದೆ ಏಕಪಕ್ಷೀಯವಾಗಿ ಪ್ರೀತಿಯಲ್ಲಿರುವವರಿಗೆ. ಆದರೆ, ಈ ರಾಶಿಗಳ ಲಕ್ ಸ್ವಲ್ಪ ಹಾಗೆಯೇ, ಅವರು ಒನ್ ಸೈಡೆಡ್ ಲವ್‌ನಲ್ಲಿರುವುದೇ ಹೆಚ್ಚು!
ನೀವೇನೋ ಅವರನ್ನು ಪ್ರಾಣದಂತೆ ಹಚ್ಚಿಕೊಂಡಿದ್ದೀರಿ. ಸಿಕ್ಕಾಪಟ್ಟೆ ಪ್ರೀತಿಸುತ್ತೀರಿ. ಆದರೆ ಅವರು ಮಾತ್ರ ಮತ್ತೊಬ್ಬರೊಂದಿಗೆ ಪ್ರೀತಿಯಲ್ಲಿ ಇದ್ದಾರೆ! ಎಷ್ಟು ನೋವಿನ ವಿಷಯವಲ್ಲವೇ? ಅಥವಾ ಅವರಿಗೆ ಬೇರೆ ಲವ್ ಇಲ್ಲವಾದರೂ ನಿಮ್ಮೊಂದಿಗೆ ಕೂಡಾ ಪ್ರೀತಿಯಿಲ್ಲ. ಅವರೇನಿದ್ದರೂ ನಿಮ್ಮನ್ನು ಕೇವಲ ಫ್ರೆಂಡ್ ಹಾಗೆ ನೋಡುತ್ತಾರೆ. ಇಷ್ಟಾದರೂ ಅವರ ಮೇಲಿನ ಪ್ರೀತಿ ನಿಮ್ಮಲ್ಲಿ ಕೊಂಚವೂ ಕಡಿಮೆಯಾಗದು. ಬೇಡವೆಂದರೂ ಬಿಟ್ಟು ಹೋಗದು. ಬಿಟ್ಟೆನೆಂದರೂ ಬಿಡದೀ ಮಾಯೆಯೆಂಬಂತೆ ಒನ್ ಸೈಡೆಡ್ ಲವ್‌ನಲ್ಲಿ ನೀವು ಬಂಧಿಯಾಗಿ ಬಿಡುತ್ತೀರಿ. ಪ್ರೀತಿಯೇ ಹಾಗೆ, ಅದು ಹೇಳಿ ಕೇಳಿ ಆಗುವುದಿಲ್ಲ. ಆದ ಮೇಲೆ ಹೋಗುವುದಿಲ್ಲ. ಆದರೇನು ಮಾಡುವುದು ಏಕಪಕ್ಷೀಯ ಸಂಬಂಧದಲ್ಲಿರುವುದು ಬಹಳ ಕಠಿಣ. ಒನ್ ಸೈಡೆಡ್ ಪ್ರೇಮದಿಂದ ತುಂಬಾ ನೋವಿನ ಮತ್ತು ಹೃದಯ ವಿದ್ರಾವಕ ಸಂಗತಿಯಾಗಿದೆ. ಇಂಥ ಸಂದರ್ಭದಲ್ಲಿ ಸ್ವಾಭಿಮಾನ ಕೂಡಾ ನೀವು ಹೇಳಿದಂತೆ ಕೇಳದೆ ಮಕಾಡೆ ಮಲಗುತ್ತದೆ.
ಹೀಗೆ ರಾಶಿಚಕ್ರಗಳಲ್ಲಿ ಯಾವ ರಾಶಿ ಹೆಚ್ಚಾಗಿ ಒನ್ ಸೈಡೆಡ್ ಲವ್‌ನಿಂದ ತೊಂದರೆಗೊಳಗಾಗಿ ಸಂಬಂಧ ಅಂತ್ಯಗೊಳಿಸುವ ಅನಿವಾರ್ಯಕ್ಕೆ ಸಿಲುಕಿ ನಲುಗುತ್ತದೆ ನೋಡೋಣ.
ಮೇಷ ರಾಶಿ(Aries)
ಅವರು ಭಾವೋದ್ರಿಕ್ತರು ಮತ್ತು ಸಮರ್ಥನೀಯರು. ಅವರು ತಮ್ಮ ಪಾಲುದಾರರ ಅಗತ್ಯಗಳು ಮತ್ತು ಆಸೆಗಳನ್ನು ಪರಿಗಣಿಸಲು ವಿಫಲವಾಗುವುದು ಹೆಚ್ಚು. ಆದರೆ, ಇದು ಅವರಿಗೆ ತಿಳಿಯುವುದಿಲ್ಲ. ಅವರ ಸಂಬಂಧದಲ್ಲಿ ಅವರೊಬ್ಬರೇ ಮುಂಚಿನಿಂದ ಇರುತ್ತಾರೆ. ಪ್ರೇಮಿಯೂ ಇದ್ದಾರೆಂಬ ಊಹೆಯಲ್ಲಿರುತ್ತಾರೆ. ಆದರೆ, ಇವರ ಡಾಮಿನೆನ್ಸ್ ತಡೆದುಕೊಳ್ಳುವುದು ಸುಲಭವಲ್ಲದ ಕಾರಣ ಸಾಮಾನ್ಯವಾಗಿ ಇವರ ಪ್ರೇಮ ಏಕಪಕ್ಷೀಯವಾಗಿರುತ್ತದೆ. ಆದರೆ, ಮೇಷ ರಾಶಿಗೆ ತಾವು ಎಡವುತ್ತಿರುವುದೆಲ್ಲಿ ಎಂದು ತಿಳಿಯುವುದೇ ಇಲ್ಲ.
ಕಟಕ ರಾಶಿ(Cancer)
ಅವರು ಪೋಷಣೆಯ ಭಾವ ಮತ್ತು ಆಳವಾದ ಸಹಾನುಭೂತಿ ಹೊಂದಿದ್ದಾರೆ. ಈ ಗುಣಲಕ್ಷಣಗಳು ಸಕಾರಾತ್ಮಕವಾಗಿದ್ದರೂ, ಅವರು ತಮ್ಮ ಪಾಲುದಾರರ ಯೋಗಕ್ಷೇಮವನ್ನು ತಮ್ಮ ಸ್ವಂತಕ್ಕಿಂತ ಮುಂದಿಡಲು ತೊಡಗುತ್ತಾರೆ. ಈ ಸ್ವಯಂ ತ್ಯಾಗ ಪ್ರವೃತ್ತಿಯನ್ನು ಹೆಚ್ಚಿನವರು ಮಿಸ್ಯೂಸ್ ಮಾಡಿಕೊಳ್ಳುವುದೇ ಹೆಚ್ಚು. ಇವರ ಅತಿಯಾದ ಭಾವುಕತೆ ಹಿಡಿಸದವರು, ಅದನ್ನು ತಮ್ಮ ಲಾಭಕ್ಕಾಗಿ ಮಾತ್ರ ಬಳಸುತ್ತಾ, ಸಂಬಂಧದಲ್ಲಿ ಇವರನ್ನು ಏಕಾಂಗಿಯಾಗಿಸುವ ಸಾಧ್ಯತೆ ಹೆಚ್ಚು.
Shani Vakri 2023: ಮತ್ತೆ 5 ತಿಂಗಳು ವಕ್ರಿಯಾಗಲಿದ್ದಾನೆ ಶನಿ, ಯಾವ ರಾಶಿಯ ಮೇಲೇನು ಪರಿಣಾಮ?
ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರು ವಿವರ-ಆಧಾರಿತ ಮತ್ತು ಇತರರಿಗೆ ಸೇವೆ ಸಲ್ಲಿಸುವಲ್ಲಿ ಹೆಚ್ಚು ಗಮನ ಹರಿಸುತ್ತಾರೆ. ಅವರ ಪರಿಪೂರ್ಣತೆಯ ಸ್ವಭಾವವು ಕೆಲವೊಮ್ಮೆ ಅವರನ್ನು ಸಂಬಂಧಗಳಲ್ಲಿ ಅತಿಯಾಗಿ ವರ್ತಿಸುವಂತೆ ಮಾಡುತ್ತದೆ. ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂಬ ಅವರ ಬಯಕೆಯು ಅವರು ಪ್ರೀತಿಸುವವರಿಗೆ ಉಸಿರುಗಟ್ಟಿಸಬಹುದು. ಅಥವಾ ತದ್ವಿರುದ್ಧವಾಗಿ ತಮ್ಮ ಸಂಗಾತಿಯ ಅಗತ್ಯಗಳನ್ನು ಪೀಠದ ಮೇಲೆ ಇರಿಸಲು ಹೋಗಿ ಸ್ವತಃ ತಮ್ಮ ವಿಷಯಗಳನ್ನು ಇವರು ನಿರ್ಲಕ್ಷ್ಯ ಮಾಡಬಹುದು. ಈ ನಿಸ್ವಾರ್ಥತೆ ಕೂಡಾ ಅಸಮತೋಲನಕ್ಕೆ ಕಾರಣವಾಗಿ ಸಂಬಂಧದಲ್ಲಿ ಇವರನ್ನು ಒಂಟಿಯಾಗಿಸುತ್ತದೆ.
ತುಲಾ ರಾಶಿ(Libra)
ಅವರು ಸಾಮರಸ್ಯವನ್ನು ಗೌರವಿಸುತ್ತಾರೆ ಮತ್ತು ಇತರರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಅವರ ಸ್ವಂತ ಅಗತ್ಯಗಳನ್ನು ನಿರ್ಲಕ್ಷಿಸಿ ಪ್ರೀತಿಸುವವರಿಗೆ ಬೆಲೆ ಕೊಡುತ್ತಾರೆ. ಅವರು ಸಾಕಷ್ಟು ರಾಜಿ ಮಾಡಿಕೊಳ್ಳುತ್ತಾರೆ. ಇದರಿಂದ ಸಂಬಂಧದಲ್ಲಿ ಅವರು ಹೆಚ್ಚಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಕಡೆಗೆ ಒನ್ ಸೈಡೆಡ್ ಪ್ರೀತಿಯ ನೋವನ್ನನುಭವಿಸುತ್ತಾರೆ.
ಮ.ಪ್ರ. ಸರ್ಕಾರದಿಂದ ಲವ- ಕುಶ ದೇಗುಲ ನಿರ್ಮಾಣ ಘೋಷಣೆ; ಲವ ಕುಶರ ಕತೆ ನಿಮಗೆ ಗೊತ್ತಾ?
ಮೀನ ರಾಶಿ(Pisces)
ಅವರು ಹಗಲುಗನಸು ಕಾಣುವುದರಲ್ಲ ನಿಸ್ಸೀಮರು. ಹೆಚ್ಚಿನ ಬಾರಿ ಅವರು ತಮಗ್ಯಾರ ಮೇಲೆ ಪ್ರೀತಿ ಆಗಿದೆಯೋ ಅವರಿಗೂ ತಮ್ಮ ಮೇಲೆ ಪ್ರೀತಿಯಾದಂತೆ ಕನಸು ಕಾಣುತ್ತಾರೆಯೇ ಹೊರತು ಇದಕ್ಕಾಗಿ ಹೆಚ್ಚು ಪ್ರಯತ್ನ ಹಾಕುವುದಿಲ್ಲ. ಅಲ್ಲದೆ, ಪ್ರೀತಿಯನ್ನು ಫ್ಯಾಂಟಸೈಸ್ ಮಾಡುವ ಅವರ ಸ್ವಭಾವದಿಂದಾಗಿ ಅವರಿಗೆ ನಿಲುಕಿದ ಪ್ರೀತಿಯು ಸಂಪೂರ್ಣ ಸಮಾಧಾನ ತರದೆ ಹೋಗಬಹುದು. ಇವರ ನಿರೀಕ್ಷೆಗಳು ಮತ್ತೊಬ್ಬರಿಗೆ ಅಸಹಜ ಎನ್ನಿಸುವುದರಿಂದ ಅವರು ಇವರನ್ನು ಪ್ರೀತಿಯಲ್ಲಿ ಒಂಟಿಯಾಗಿಸುವ ಸಾಧ್ಯತೆ ಹೆಚ್ಚು.