2026ರ ಸೂರ್ಯ ಸಂಚಾರ; ನವೆಂಬರ್ 16ರಿಂದ 12ರಲ್ಲಿ 6 ರಾಶಿಗೆ ಸಂಪತ್ತು ಪ್ರತಿಷ್ಠೆ!
ನವೆಂಬರ್ 16, 2026 ರಂದು ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಬದಲಾವಣೆಯು 6 ರಾಶಿಗಳ ವೃತ್ತಿ, ಆರ್ಥಿಕ ಹಾಗೂ ವೈಯಕ್ತಿಕ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
17

Image Credit : Chat Gpt
ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ
ಇದೇ 16ನೇ ನವೆಂಬರ್ 2026ರಂದು ಸೂರ್ಯ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ಚಲನೆಯು ಹಣಕಾಸು, ವೃತ್ತಿ ಮತ್ತು ಖಾಸಗಿ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯದೇವನನ್ನು ಅಧಿಕಾರ, ಮಾರ್ಗದರ್ಶನ, ವೃತ್ತಿಪರ ಸ್ಥಾನಮಾನದ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
27
Image Credit : SOCIAL MEDIA
ಮಕರ ರಾಶಿ: 11ನೇ ಮನೆಯಲ್ಲಿ ಸೂರ್ಯ
- ಆದಾಯ, ಲಾಭ ಸೇರಿದಂತೆ ಆರ್ಥಿಕವಾಗಿ ಸದೃಢತೆ, ಹಣಕಾಸಿನ ಅವಕಾಶಗಳು ಲಭ್ಯತೆ ಸಾಧ್ಯತೆ
- ಪ್ರಭಾವಿ ವ್ಯಕ್ತಿ ಅಥವಾ ಮೇಲಾಧಿಕಾರಿಗಳಿಂದ ಬೆಂಬಲ ಮತ್ತು ಮಾರ್ಗದರ್ಶನ
- ಹೊಸ ಆದಾಯ ಮೂಲಗಳ ಶೋಧನೆಗೆ ಇದು ಉತ್ತಮ ಸಮಯ
- ಹೊಸಬರ ಪರಿಚಯದಲ್ಲಿ ಎಚ್ಚರಿಕೆ, ಹಣದ ವಿಷಯಲ್ಲಿ ಆತುರದ ನಿರ್ಧಾರ ಬೇಡ
37
Image Credit : SOCIAL MEDIA
ಕುಂಭ ರಾಶಿ: 10ನೇ ಮನೆ ಮೂಲಕ ಸೂರ್ಯನ ಚಲನೆ
- ಕೆಲಸ ಮಾಡುವ ಸ್ಥಳದಲ್ಲಿ ಗೌರವ, ಮೇಲಾಧಿಕಾರಿಗಳಿಂದ ಬೆಂಬಲ
- ಹೊಸ ಯೋಚನೆಗಳಿಗೆ ಮನ್ನಣೆ, ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ
- ವ್ಯವಹಾರ ವಿಸ್ತರಣೆ ಮತ್ತು ಷೇರುಗಳಲ್ಲಿ ಹೂಡಿಕೆಗೆ ಉತ್ತಮ ಅವಕಾಶ
- ಕೆಲಸದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಎಚ್ಚರವಿರಿಲಿ. ಜವಾಬ್ದಾರಿ ನಿರ್ವಹಿಸುವ ಆತುರ ಬೇಡ
47
Image Credit : others
ವೃಷಭ ರಾಶಿ: 7ನೇ ಮನೆಯಲ್ಲಿ ಸೂರ್ಯ
- ಪಾಲುದಾರಿಕೆ ವ್ಯಾಪಾರ, ವೃತ್ತಿಪರ ಸಂಬಂಧಗಳಲ್ಲಿ ಸಕಾರಾತ್ಮಕ ಬೆಳವಣಿಗೆಯಿಂದ ಲಾಭ
- ಹೊಸ ಸಂಪರ್ಕಗಳಿಂದ ಆದಾಯ ಏರಿಕೆ
- ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಿ
57
Image Credit : OTHERS
ತುಲಾ ರಾಶಿ: 2ನೇ ಮನೆಯಲ್ಲಿ ಸೂರ್ಯ
- ಹಣ, ಉಳಿತಾಯ, ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒಳ್ಳೆಯ ಬೆಳವಣಿಗೆ
- ಹಣಕಾಸಿನ ವಿಷಯದಲ್ಲಿ ಉಳಿತಾಯ ಹೆಚ್ಚಿಸುವತ್ತ ಗಮನ ನೀಡಿ. ಖರ್ಚುಗಳ ಮೇಲೆ ನಿಗಾ ಇರಲಿ
- ಖಾಸಗಿ ವಿಷಯಗಳನ್ನು ಚರ್ಚೆ ಮಾಡುವಾಗ ತಾಳ್ಮೆ ಕಾಪಾಡಿಕೊಳ್ಳಿ.
- ಅನಗತ್ಯ ವಾದ ಮತ್ತು ದುಡುಕಿನ ನಿರ್ಧಾರಗಳು ಬೇಡ
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
67
Image Credit : OTHERS
ಮಿಥುನ ರಾಶಿ: 6ನೇ ಮನೆಯಲ್ಲಿ ಸೂರ್ಯ
- ವೃತ್ತಿಜೀವನದ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವೃತ್ತಿಪರ ಸವಾಲುಗಳನ್ನು ಎದುರಿಸೋ ಸಾಮರ್ಥ್ಯ
- ಹಳೆಯ ವಿವಾದಗಳಿಂದ ಮುಕ್ತಿ
- ದೀರ್ಘ ಸಮಯದಿಂದ ತಡೆಹಿಡಿದಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ
- ಆದಾಯ ಏರಿಕೆಯಿಂದ ಆತ್ಮವಿಶ್ವಾಸ ಹೆಚ್ಚಳ
77
Image Credit : OTHERS
ಕನ್ಯಾ ರಾಶಿ: 3ನೇ ಮನೆಯಲ್ಲಿ ಸೂರ್ಯ
- ಮಾಧ್ಯಮ, ಬರವಣಿಗೆ, ಮಾರ್ಕೆಟಿಂಗ್, ಮಾರಾಟ ಮತ್ತು ಸಂವಹನದಲ್ಲಿ ಕೆಲಸ ಮಾಡುವವರಿಗೆ ಲಾಭ
- ಹೊಸ ಯೋಜನೆಯನ್ನು ಪ್ರಾರಂಭಿಸಲು ಸೂಕ್ತ ಸಮಯ
- ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಯಾಣ
- ಸೂರ್ಯನ ಚಲನೆಯು ಧೈರ್ಯ, ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಹೆಚ್ಚಿಸುತ್ತದೆ.
Latest Videos













