Astrology: ಸಿಂಹ ರಾಶಿಗೆ ಮಂಗಳ ಪ್ರವೇಶ: 4 ರಾಶಿ ಮೇಲೆ ಶನಿ- ಕೇತುವಿನ ನೇರ ಪ್ರಭಾವ
ನವೆಂಬರ್ 12ರಂದು ಮಂಗಳ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಿದ್ದು, ಶನಿ ಮತ್ತು ಕೇತುವಿನ ಪ್ರಭಾವದಿಂದ ವಿಶೇಷ ಬದಲಾವಣೆಗಳಾಗಲಿವೆ. ಮುಂದಿನ 5 ತಿಂಗಳುಗಳಲ್ಲಿ 5 ರಾಶಿಯವರಿಗೆ ವೃತ್ತಿ ಹಾಗೂ ಆರ್ಥಿಕವಾಗಿ ಅಪಾರ ಲಾಭ ಸಿಗಲಿದೆ.

Mangala Shani
ನವೆಂಬರ್ 12ರಂದು ಮಂಗಳ ಗ್ರಹವು ಕರ್ಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದೆ. ಖ್ಯಾತ ಜ್ಯೋತಿಷಿ ಶೈಲೇಂದ್ರ ಪಾಂಡೆ ಅವರ ಪ್ರಕಾರ, 9ನೇ ಮಾರ್ಚ್ 2027ರವರೆಗೆ ಸಿಂಹ ರಾಶಿಯಲ್ಲಿರಲಿದ್ದು, ಈ ವೇಳೆ ಕೇತು ಸಹ ಜೊತೆಯಲ್ಲಿರುತ್ತಾನೆ. ಈ ಸಂಚಾರ ಶನಿ ದೃಷ್ಟಿಯು ವಿವಿಧ ಬದಲಾವಣೆಗಳನ್ನು ಸೂಚಿಸುತ್ತದೆ. ಈ ಬದಲಾವಣೆ 4 ರಾಶಿಯವರಿಗೆ ಮುಂದಿನ 5 ತಿಂಗಳು ಅದೃಷ್ಟವನ್ನು ನೀಡಲಿದೆ. ಆ ನಾಲ್ಕು ರಾಶಿಗಳು ಯಾವವು?
ಮಿಥುನ ರಾಶಿ
ಮಂಗಳ ಸಂಚಾರವು ಶುಭ ಫಲಿತಾಂಶಗಳನ್ನು ನೀಡಲಿದ್ದು, ಬಹುದಿನಗಳಿಂದ ಅಪೂರ್ಣಗೊಂಡಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಹೂಡಿಕೆಯಲ್ಲಿ ನಷ್ಟ ಅನುಭವಿಸುತ್ತಿರೋರಿಗೆ ಲಾಭ ಸಿಗಲಿದೆ. ವೃತ್ತಿಯಲ್ಲಿ ಬೆಳವಣಿಗೆ ಕಾಣಲಿದ್ದು, ನೀವು ಆಕರ್ಷಣೆಯ ಕೇಂದ್ರಬಿಂದು ಆಗುತ್ತೀರಿ. ಕಠಿಣ ಪರಿಶ್ರಮಕ್ಕೆ ಫಲಿತಾಂಶಗಳು ಸಿಗಲಿವೆ.
ತುಲಾ ರಾಶಿ
ಕೆಲಸದ ಸ್ಥಳದಲ್ಲಿ ಯಶಸ್ಸು ಸಿಗುತ್ತದೆ. ಸೃಜನಶೀಲ ಕ್ಷೇತ್ರಗಳಲ್ಲಿ ಕೆಲಸ ಮಾಡೋರಿಗೆ ಒಳ್ಳೆಯ ದಿನಗಳು ಬರಲಿವೆ. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗಲಿದೆ. ಮಂಗಳನ ಬಲದಿಂದ ಕಠಿಣ ಪರಿಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಸಿಗುವ ಶುಭ ಸೂಚನೆಗಳು ಸಿಗಲಿವೆ. ಸ್ನೇಹಿತರು ಮತ್ತು ಸಂಬಂಧಿಕರ ಜೊತೆಗಿನ ಮನಸ್ತಾಪಗಳು ಬಗೆಹರಿಯಲಿವೆ.
ವೃಶ್ಚಿಕ ರಾಶಿ
ಹೊಸ ವ್ಯವಹಾರ ಆರಂಭಿಸುವ ಮತ್ತು ವಿಸ್ತರಣೆ ಮಾಡಿಕೊಳ್ಳೋರಿಗೆ ಇದು ಶುಭಕರ ಸಮಯವಾಗಿದೆ. ಕಾರ್ಪೋರೇಟ್ ಉದ್ಯೋಗಿಗಳು ಯಶಸ್ಸು ಸಿಗಲಿದೆ. ಉದ್ಯೋಗ ಬದಲಾಯಿಸಲು ಸಹ ಇದು ಸೂಕ್ತ ಸಮಯವಾಗಿದೆ. ಆಸ್ತಿ ಅಥವಾ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗೆ ಒಳ್ಳೆಯ ಲಾಭ ಪಡೆದುಕೊಳ್ಳುವ ಸಾಧ್ಯತೆ.
ಮೀನ ರಾಶಿ
ವೃತ್ತಿಗೆ ಸಂಬಂಧಿಸಿದ ಅಡೆತಡೆಗಳು ದೂರವಾಗಲಿವೆ. ಬಾಕಿ ಉಳಿದಿರೋ ಕೆಲಸಗಳು ಪೂರ್ಣಗೊಳ್ಳೋದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಪತ್ತು ನಿಮ್ಮನ್ನು ಅರಸಿಕೊಂಡು ಬರಲಿದ್ದು, ಆರ್ಥಿಕವಾಗಿ ಸದೃಢವಾಗುತ್ತೀರಿ. ವೆಚ್ಚಗಳು ಕಡಿಮೆಯಾಗಿ ಆದಾಯದ ಮೂಲಗಳು ಹೆಚ್ಚಾಗುವ ಲಕ್ಷಣಗಳು ಗೋಚರಿಸಲಿವೆ. ಈ ಸಮಯದಲ್ಲಿ ಭವಿಷ್ಯದ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.













