ದೇಶದ ಮೊದಲ ಕೊರೋನಾ ಸಾವಿನ ಊರಲ್ಲಿ ನಡೆದ ಜಾತ್ರೆ! ಫೋಟೋ ನೋಡಿ

First Published 15, Mar 2020, 12:45 PM IST

ದೇಶದ ಮೊದಲ ಕೊರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ವರದಿಯಾಗಿದೆ. ಕೊರೋನಾ ಭೀತಿಯಿಂದ ಇಡೀ ಕರ್ನಾಟಕ ರಾಜ್ಯವೇ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕರ್ನಾಟಕದಲ್ಲಿ ಬಂದ್‌ ಮಾಡಲಾಗಿದೆ. ಜಾತ್ರೆಗಳು, ದೇವಾಲಯಗಳಲ್ಲಿನ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕವು ಮಾರಣಾಂತಿಕ ಕೊರೋನ ವೈರಸ್‌ ಹರಡದಂತೆ  ಹೋರಾಡುತ್ತಿರುವಾಗ, ಕಲಬುರಗಿಯ ಜನರು ದೇವಾಲಯದ ಸಮಾರಂಭ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.

ಕಲಬುರಗಿಯ ನೆಡೆದ ಶರಣ ಬಸವೇಶ್ವರ ದೇವಸ್ಥಾನದ ಜಾತ್ರೆಯ  ದೃಶ್ಯ.

ಕೊರೋನಾ ಭೀತಿಯಿಂದ ಇಡೀ ರಾಜ್ಯಕ್ಕೆ ಬಂದ್‌ ಆದೇಶ ನೀಡಿರುವಾಗ, ದೇವಸ್ಥಾನದ ಆಡಳಿತವು ಯಾವುದೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿತನ  ತೋರಿಸಿದೆ.

ದೇಶದ ಮೊದಲ ಕೊರೋನಾ ಸಾವಿನ ಹೊರತಾಗಿಯು ಯಾವುದೇ  ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳದೆ ಜಾತ್ರೆ ನೆಡೆಸಿದ ಆಡಳಿತ ಮಂಡಳಿ.

ಅರಿವು ಮೂಡಿಸುವ ಪೋಲಿಸರು ಸಹ ಯಾವುದೇ ರೀತಿಯ ಮಾಸ್ಕ್‌ ಧರಿಸಿದೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಸಾವಿರಾರು ಜನ ಸೇರಿದ್ದರೂ ಸಹ ವೈರಸ್‌ ಹರಡದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.

ದೇಶದ ಕೊರೋನಾ ಬಲಿ ಕಲಬುರಗಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕ್.

ಕಲಾಬುರಗಿಯಲ್ಲಿರುವ ಕರೋನ ವೈರಸ್ ರೋಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್ ಅವರ ಮನೆ ಪ್ರತ್ಯೇಕಿಸಲ್ಪಟ್ಟು ನಿರ್ಬಂಧ ಹೇರಲಾಗಿದೆ..

ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಆತನ ದೇಹವನ್ನು ತೆಗೆದುಕೊಂಡ ಸ್ಥಳವನ್ನು ಪರಿಶೀಲಿಸಿ  ಸೋಂಕುರಹಿತಗೊಳಿಸಿದ್ದಾರೆ.

ಸಿದ್ದಿಕ್‌ ಅವರ ಮನೆಯ ನಿರ್ಜನ ರಸ್ತೆ.

ಸಿದ್ದಿಕ್‌ ಅವರ ಮನೆಯ ನಿರ್ಜನ ರಸ್ತೆ.

ಅವರ ಸಂಬಂಧಿಗಳನ್ನು  ಪ್ರತ್ಯೇಕಿಸಿ, ಪ್ರದೇಶವನ್ನು ಸೋಂಕುರಹಿತಗೊಳಿಸಲಾಗಿದೆ.

loader