MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಭಾರತದಲ್ಲಿಯೇ ಇದೆ ಗಣೇಶನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ಒಂದು ವಿಶಿಷ್ಟ ದೇವಾಲಯ

ಭಾರತದಲ್ಲಿಯೇ ಇದೆ ಗಣೇಶನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ಒಂದು ವಿಶಿಷ್ಟ ದೇವಾಲಯ

ಭಾರತದಲ್ಲಿ ಕೆಲವು ಅದ್ಭುತ ದೇವಾಲಯಗಳಿವೆ. ಅವುಗಳ ಬಗ್ಗೆ ಕೇಳಿದ್ರೆ, ನಿಮಗೆ ಅಚ್ಚರಿಯಾಗಬಹುದು. ಇಂದು ಒಂದು ವಿಶೇಷ ಗಣಪತಿ ದೇವಾಲಯದ ಬಗ್ಗೆ ಹೇಳುತ್ತೇವೆ. ಈ ದೇವಾಲಯದಲ್ಲಿ ಗಣೇಶನ ಸ್ತ್ರೀ ಅವತಾರವಾದ ವಿನಾಯಕಿ ದೇವಿಯ ವಿಗ್ರಹವನ್ನು ಹೊಂದಿದೆ. 

2 Min read
Suvarna News
Published : Dec 15 2023, 05:55 PM IST
Share this Photo Gallery
  • FB
  • TW
  • Linkdin
  • Whatsapp
17

ಇಲ್ಲಿಯವರೆಗೆ ನೀವು ಗಣೇಶನ ಅನೇಕ ರೂಪಗಳನ್ನು ನೋಡಿರಬೇಕು. ಗಣಪತಿ ಎಂದರೆ ಗಂಡು ಅನ್ನೋದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನಮ್ಮ ದೇಶದಲ್ಲಿ ಗಣೇಶನ ಒಂದು ಪ್ರತಿಮೆ ಇದೆ, ಅದು ನಿಮ್ಮನ್ನು ಖಂಡಿತವಾಗಿಯೂ ಆಕರ್ಷಿಸಬಹುದು. ಹೌದು ಭಾರತದಲ್ಲಿ ವಿನಾಯಕ ಸ್ತ್ರೀ ರೂಪದಲ್ಲಿರುವ ದೇವಾಲಯವಿದೆ.
 

27

ಸ್ತ್ರೀ ರೂಪದ ಗಣಪತಿಯೇ (Lord Ganesha) ಎಂದು ಶಾಕ್ ಆಗಬೇಡಿ. ಆದರೆ ಇದು ನಿಜ. ಹೌದು ಭಾರತದ ಒಂದು ವಿಶಿಷ್ಟವಾದ ದೇಗುಲದಲ್ಲಿ ಗಣೇಶನನ್ನು ಮಹಿಳೆಯ ರೂಪದಲ್ಲಿ ಮಾತ್ರ ಪೂಜಿಸಲಾಗುತ್ತದೆ. ಸೀರೆ ಉಟ್ಟು, ಗಣಪತಿ ತಾಯಿಯಂತೆ ಕುಳಿತಿದ್ದಾರೆ. ಇಲ್ಲಿ ಗಣಪತಿಯನ್ನು ವಿನಾಯಕಿ ಎಂದು ಕರೆಯಲಾಗುತ್ತದೆ. 
 

37

ಸ್ತ್ರೀ ರೂಪದ ಗಣಪತಿ ಎಲ್ಲಿದ್ದಾಳೆ?
ಗಣೇಶನ ಈ ವಿಗ್ರಹವು ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿದೆ. ಚೆನ್ನೈನಿಂದ (Chennai) ದಕ್ಷಿಣಕ್ಕೆ 100 ಕಿ.ಮೀ ದೂರದಲ್ಲಿರುವ ಈ ಸ್ಥಳದಲ್ಲಿ ಇರುಂಬು ಎಂಬ ಗ್ರಾಮವಿದೆ. ಅಲ್ಲಿ ಗಣಪತಿಯನ್ನು ಸ್ತ್ರೀ ರೂಪದಲ್ಲಿ ಪೂಜಿಸಲಾಗುತ್ತೆ.

47

ಈ ದೇಗುಲದಲ್ಲಿ ಗಣಪತಿಯನ್ನು ವಿನಾಯಕಿ ಎನ್ನಲಾಗುವುದು. ವಿನಾಯಕಿ (Vinayaki) ಎಂದರೆ 'ಗಣೇಶನ ಸ್ತ್ರೀ ರೂಪ' ಎಂದರ್ಥ. ಭಗವಾನ್ ವಿಘ್ನೇಶ್ವರನನ್ನು ತಮಿಳುನಾಡಿನಲ್ಲಿ ಮಹಿಳೆ ಎಂದು ಪರಿಗಣಿಸಲಾಗುತ್ತದೆ. ಜನರು ಅವರನ್ನು ದೇವತೆಯಾಗಿ ಪೂಜಿಸುತ್ತಾರೆ. ಗಣೇಶೇಶ್ವರಿಯನ್ನು ತಮಿಳುನಾಡಿನ ಜನರು ದೈವಿಕ ದೇವರೆಂದು ಪೂಜಿಸುತ್ತಾರೆ. 
 

57

ಗಣಪತಿಯ ಈ ವಿಗ್ರಹವು ಬಹಳ ವಿಶೇಷವಾಗಿದೆ
ಸಹಜವಾಗಿ, ನೀವು ಗಣೇಶನನ್ನು ಪೂಜಿಸಲು ಎಲ್ಲಿ ಬೇಕಾದರೂ ಹೋಗುತ್ತೀರಿ, ಆದರೆ ನೀವು ಇಲ್ಲಿಗೆ ಬಂದಾಗ, ನೀವು ವಿಭಿನ್ನತೆಯನ್ನು ಕಾಣಬಹುದು. ಅದಕ್ಕಾಗಿಯೇ, ಈ ದೇಗುಲ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇಲ್ಲಿ ಭಗವಂತನು ಕಾಲಿನ ಮೇಲೆ ಅಡ್ಡ ಕಾಲಿಟ್ಟು ಕುಳಿತಿದ್ದಾನೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾನೆ. ಇದನ್ನು ದೈವಿಕ ಆಭರಣಗಳು ಮತ್ತು ಆಯುಧಗಳಿಂದ ಅಲಂಕರಿಸಲಾಗಿದೆ. ಗಣಪತಿ ಮೇಲಿನ ಎಡಗೈಯಲ್ಲಿ ಕೊಡಲಿ ಮತ್ತು ಕೆಳಗಿನ ಎಡಗೈಯಲ್ಲಿ ಶಂಖ ಹಿಡಿದಿದ್ದಾನೆ. 
 

67

ಇನ್ನು ಗಣಪತಿಯ ಒಂದು ಕೈಯಲ್ಲಿ ಹೂವು, ಮತ್ತೊಂದು ಕೈ ಆಶೀರ್ವಾದದ ಭಂಗಿಯಲ್ಲಿ ಇದೆ. ನೀವು ಇಲ್ಲಿ ಗಣಪತಿಯ ಮುಖವನ್ನು ನೋಡದಿದ್ದರೆ, ಅದು ದೇವಿಯ ಮೂರ್ತಿ ಎಂದೇ ಭಾವಿಸುವಿರಿ. ಯಾಕೆಂದರೆ ಸೀರೆಯುಟ್ಟು ಕುಳಿತ ಗಣಪತಿಯನ್ನು ಇಲ್ಲಿ ಕಾಣಬಹುದು.  
 

77

ದೇವಾಲಯದ ಇತಿಹಾಸ 
ತನುಮಲಯನ್ ದೇವಾಲಯವು 1300 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಈ ದೇವಾಲಯದ ವಿವರಣೆಯು ಶಿವಮಹಾಪುರಾಣದ ಕಥೆಯಲ್ಲಿ ಕಂಡುಬರುತ್ತದೆ. ಅದರಲ್ಲಿ ದೇವರ ಸ್ತ್ರೀ ಅವತಾರದ ಕಥೆಯನ್ನು ನೀವು ಕಾಣಬಹುದು. 

About the Author

SN
Suvarna News
ದೇವಸ್ಥಾನ
ಪ್ರವಾಸ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved