ಪತ್ನಿಯ ಸೇವೆ ಮಾಡೋದ್ರಿಂದ ನೀವಾಗ್ತೀರಿ ಕೋಟ್ಯಾಧಿಪತಿ… ಪುರಿ ಜಗನ್ನಾಥನ ಕಥೆ ಕೇಳಿ…
ಶುಕ್ರವಾರದಂದು ಹೆಂಡತಿಗೆ ಏಳು ಬಿಳಿ ರಸಗುಲ್ಲಾಗಳನ್ನು ತಿನ್ನಿಸುವುದರಿಂದ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಭಗವಾನ್ ಜಗನ್ನಾಥನು ಕೂಡ ತಾಯಿ ಲಕ್ಷ್ಮಿಗೆ ರಸಗುಲ್ಲಾಗಳನ್ನು ತಿನ್ನಿಸುವ ಮೂಲಕ ಆಕೆಯ ಮುಖದಲ್ಲಿ ಸಂತಸ ತಂದನು. ಈ ಸಂಪ್ರದಾಯವು 1000 ವರ್ಷಗಳಷ್ಟು ಹಳೆಯದು.

ಪ್ರತಿಯೊಬ್ಬ ವ್ಯಕ್ತಿಯು ಮಿಲಿಯನೇರ್ ಆಗಬೇಕೆಂದು ಕನಸು ಕಾಣುತ್ತಾನೆ. ನಮ್ಮ ಸನಾತನ ಧರ್ಮದ ನಂಬಿಕೆಗಳ ಪ್ರಕಾರ, ನಮ್ಮ ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುವ ಹಲವಾರು ಪರಿಹಾರಗಳಿವೆ. ನೀವು ಮಿಲಿಯನೇರ್ ಆಗಲು ಬಯಸಿದರೆ, ನಿಮ್ಮ ಹೆಂಡತಿಗೆ ಬಿಳಿ ರಸಗುಲ್ಲಾಗಳನ್ನು (white rasagulla) ತಿನ್ನಿಸಲು ಪ್ರಾರಂಭಿಸಿ. ಏನು ಹೇಳ್ತಿದ್ದಾರಪ್ಪಾ ಮಿಲಿನಿಯರ್ ಆಗೋದಕ್ಕೂ ರಸಗುಲ್ಲಾಕೂ ಏನು ಸಂಬಂಧ ಎಂದು ನೀವು ಯೋಚಿಸಬಹುದು.
ಮೊದಲಿಗೆ ನಾವು ಹೇಳ್ತಿರೋ ವಿಧಾನ ಕೇಳಿ, ಆಮೇಲೆ ಹೆಂಡತಿಗೆ ರಸಗುಲ್ಲಾ ತಿನ್ನಿಸೋದರಿಂದ ಹೇಗೆ ಶ್ರೀಮಂತಿಕೆ ಬರುತ್ತೆ ಅನ್ನೋದು ಗೊತ್ತಾಗುತ್ತೆ. ಸತತ ಏಳು ಶುಕ್ರವಾರಗಳವರೆಗೆ ನೀವು ಪತ್ನಿಗೆ ರಸಗುಲ್ಲಾ ತಿನ್ನಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡಿದ್ರೆ ಖಚಿತವಾಗಿ ಮೂರನೇ ಶುಕ್ರವಾರದ ನಂತರ, ಯಾವುದಾದರು ರೂಪದಲ್ಲಿ ನಿಮಗೆ ಹಣ ಬರೋದಕ್ಕೆ ಶುರುವಾಗುತ್ತೆ.
ರಸಗುಲ್ಲಾ ಹೇಗೆ ತಿನ್ನಿಸುವುದು:
ಮೊದಲಿಗೆ, ನೀವು ಮಾರುಕಟ್ಟೆಯಿಂದ ಬಿಳಿ ರಸಗುಲ್ಲಾ ತರಬೇಕು. ನಂತರ, ನೀವು ನಿಮ್ಮ ಹೆಂಡತಿಯ ಎರಡೂ ಅಂಗೈಗಳನ್ನು ಚುಂಬಿಸಬೇಕು. ಏಕೆಂದರೆ ಮಹಿಳೆಯ ಅಂಗೈಗಳಲ್ಲಿ ಲಕ್ಷ್ಮಿ ದೇವಿ (Lakshmi Devi) ವಾಸಿಸುತ್ತಾಳೆ ಎನ್ನುವ ನಂಬಿಕೆ ಇದೆ. ನಂತರ, ಶುಕ್ರವಾರ ರಾತ್ರಿ ನಿಮ್ಮ ಹೆಂಡತಿಗೆ ರಸಗುಲ್ಲಾವನ್ನು ನಿಮ್ಮ ಕೈಗಳಿಂದ ತಿನ್ನಿಸಿ.
ಭಗವಾನ್ ನಾರಾಯಣನು ಸ್ವತಃ ಲಕ್ಷ್ಮಿ ದೇವಿಗೆ ರಸಗುಲ್ಲಾ ತಿನ್ನಿಸುತ್ತಾನೆ:
ಭಗವಾನ್ ಜಗನ್ನಾಥನು ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಅವಳಿಗೆ ರಸಗುಲ್ಲಾವನ್ನು ನೀಡಿದ್ದನಂತೆ. ಜಗನ್ನಾಥ ದೇವಾಲಯದಲ್ಲಿ (Puri Jagannath Temple) ತನ್ನ ಮಾನವ ಲೀಲೆಗಳ ಮೂಲಕ ಭಗವಂತ ತಾನೋಬ್ಬ ಸರಳ ಪತಿ ಅನ್ನೋದನ್ನು ನಿರೂಪಿಸಿದ್ದಾನೆ.
ಇದು ಸಾವಿರ ವರ್ಷಗಳ ಸಂಪ್ರದಾಯ
ಈ ಸಂಪ್ರದಾಯವನ್ನು ಪುರಿ ಜಗನ್ನಾಥ ದೇವಾಲಯದಲ್ಲಿ ಸುಮಾರು 1000 ವರ್ಷಗಳಿಂದ ಆಚರಿಸಲಾಗುತ್ತಿದೆ. ಪುರಿಯಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತೆ, ಈ ಸಮಯದಲ್ಲಿ ಜಗನ್ನಾಥನು ಏಳು ದಿನಗಳ ಕಾಲ ಗುಂಡಿಚಾ ದೇವಸ್ಥಾನಕ್ಕೆ ತೆರಳುತ್ತಾನೆ. ಅಂದರೆ ಜಗನ್ನಾಥ ಲಕ್ಷ್ಮೀ ದೇವಿಯನ್ನು ಬಿಟ್ಟು ಸುಭದ್ರೆಯನ್ನು ಕಾಣಲು ಹೋಗಿರುತ್ತಾನೆ. ಭಗವಾನ್ ಜಗನ್ನಾಥನು ಗುಂಡಿಚಾ ದೇವಸ್ಥಾನದಿಂದ ಜಗನ್ನಾಥ ದೇವಾಲಯಕ್ಕೆ ಹಿಂದಿರುಗಿದಾಗ, ಅವನ ಪತ್ನಿ ಲಕ್ಷ್ಮಿ ದೇವಿ ಜಗನ್ನಾಥನ ಮೇಲೆ ಕೋಪಗೊಂಡಿರುತ್ತಾರೆ. ಲಕ್ಷ್ಮೀ ದೇವಿಯ ಕೋಪವನ್ನು ಕಡಿಮೆ ಮಾಡಲು, ಹಾಗೂ ಆಕೆಯನ್ನು ಮೆಚ್ಚಿಸಲು, ಭಗವಾನ್ ಜಗನ್ನಾಥನು ಲಕ್ಷ್ಮೀ ದೇವಿಗೆ ರಸಗುಲ್ಲಾವನ್ನು ತಿನ್ನಿಸಿ ಸಮಾಧಾನಪಡಿಸುತ್ತಾರೆ.
ಹೆಂಡತಿಗೆ ರಸಗುಲ್ಲಾ ನೀಡೋದ್ರಿಂದ ಏನಾಗುತ್ತೆ?
ಈ ಪರಿಹಾರವನ್ನು ಮಾಡುವುದರಿಂದ, ಗಂಡ ಮತ್ತು ಹೆಂಡತಿಯ ನಡುವಿನ ಕಲಹವನ್ನು ಸಹ ನಿವಾರಣೆ ಮಾಡಬಹುದು. ಅವರ ನಡುವೆ ಪ್ರೀತಿ ಹೆಚ್ಚಾಗುತ್ತೆ ಮತ್ತು ಸಂಬಂಧವು ಸಿಹಿಯಾಗುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಯ ದಿನವಾಗಿರುವುದರಿಂದ, ಈ ದಿನದಂದು ನಿಮ್ಮ ಪ್ರೀತಿಯ ಹೆಂಡತಿಗೆ ರಸಗುಲ್ಲಾ ತಿನ್ನಿಸೋದ್ರಿಂದ ಲಕ್ಷ್ಮಿ ದೇವಿಯ (Goddess Lakshmi) ಆಶೀರ್ವಾದ ನಿಮ್ಮ ಜೀವನದಲ್ಲಿ ಸದಾ ಇರುತ್ತೆ. ಅಷ್ಟೇ ಅಲ್ಲ, ಇದರಿಂದ ನಿಮ್ಮ ಸಂಪತ್ತು ಮತ್ತು ಆಸ್ತಿಯೂ ಹೆಚ್ಚಾಗುತ್ತದೆ.
ಆಭರಣಗಳನ್ನು ಉಡುಗೊರೆಯಾಗಿ ನೀಡಿ:
ಶುಕ್ರವಾರದಂದು ನಿಮ್ಮ ಹೆಂಡತಿಗೆ ಆಭರಣಗಳು, ಬಟ್ಟೆಗಳು ಮತ್ತು ಸೌಂದರ್ಯಕ್ಕೆ ಸಂಬಂಧಿತ ವಸ್ತುಗಳನ್ನು ನೀಡೋದ್ರಿಂದ ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವನ್ನು ಬಲಪಡಿಸುತ್ತದೆ. ಇದು ನಿಮಗೆ ಅಪಾರ ಸಂಪತ್ತನ್ನು ತರುತ್ತದೆ.