ಈ ರಾಶಿಯ ಹುಡುಗಿಯರು ಹಣ ಉಳಿಸಿಯೇ ಸಂಪತ್ತು ಬೆಳೆಸ್ತಾರೆ! ಇಂಥಾಕೆ ಪತ್ನಿಯಾದ್ರೆ ಲಕ್
ಏನು ಹುಡ್ಗೀರು ಮತ್ತು ಹಣ ಉಳಿಸೋದಾ?! ಅವೆರ್ಡೂ ವಿರುದ್ಧ ಪದ ಅಲ್ವಾ ಅಂತ ನಿಮಗನಿಸ್ಬೋದು. ಆದ್ರೆ ಈ ರಾಶಿಯ ಹುಡುಗಿಯರು ನಿಜಕ್ಕೂ ಹಣ ಉಳಿಸ್ತಾರೆ. ಹಾಗಾಗಿ, ಅವರಿಗೆ ಜೀವನದಲ್ಲೆಂದೂ ಹಣದ ಕೊರತೆ ಎದುರಾಗದು. ಉತ್ತಮ ಜೀವನಕ್ಕೆ ಹಣದ ಅಗತ್ಯವಿದೆ. ಕೆಲವರು ದುಡ್ಡು ಸಂಪಾದಿಸಿದರೂ ಅವರ ಕೈಯಲ್ಲಿ ಹಣ ಉಳಿಯುವುದಿಲ್ಲ. ಅದೇ ಸಮಯದಲ್ಲಿ, ಕೆಲವರು ಹಣವನ್ನು ಉಳಿಸುವಲ್ಲಿ ಪ್ರವೀಣರಾಗಿರುತ್ತಾರೆ. ಅಲ್ಪ ಸಂಪಾದನೆಯಲ್ಲೂ ಸಂಪತ್ತನ್ನು ಕೂಡಿಡುತ್ತಾರೆ. ಮತ್ತೆ ಕೆಲವರಿಗೆ ಲಕ್ಷ ಲಕ್ಷ ಬಂದರೂ ನೀರಿನಂತೆ ಕರಗಿ ಹೋಗುತ್ತಿರುತ್ತದೆ. ಅದರಲ್ಲೂ ಹುಡುಗಿಯರ ವಿಷಯಕ್ಕೆ ಬಂದರೆ, ಹೆಚ್ಚಿನವರು ಕೇವಲ ತಮ್ಮ ಶಾಪಿಂಗ್‌ಗಾಗಿ, ಮನಸ್ಸಿಗೆ ಬಂದಂತೆ ಕೊಳ್ಳೋಕಾಗಿಯೇ ಕೆಲಸ ಮಾಡೋರಿದ್ದಾರೆ. ಅವರಿಗೆ ಮನೆಯ ಜವಾಬ್ದಾರಿ ಮತ್ತೊಂದು ಯಾವುದೂ ಇಲ್ಲ.. ಕೇವಲ ತಮ್ಮಿಷ್ಟದಂತೆ ಶಾಪಿಂಗ್ ಮಾಡೋಕ್ಕಾಗಿಯೇ ದುಡಿಯುತ್ತಾರೆ. ಅಂಥವರ ಬಳಿ ದುಡ್ಡು ಉಳಿತಾಯದ ಬಗ್ಗೆ ಮಾತನಾಡೋದೂ ಹಾಸ್ಯಾಸ್ಪದವೇ. ಆದರೂ, ಕೆಲ ಅಪರೂಪದ ಹುಡುಗಿಯರಿರ್ತಾರೆ. ಅವರು ಹಣ ಉಳಿಸೋದ್ರಲ್ಲಿ ನಿಸ್ಸೀಮರು. ಉಳಿತಾಯದ ಮಹತ್ವ, ಬೆಲೆ ಅವರಿಗೆ ತಿಳಿದಿರುತ್ತದೆ. ಯಾವುದಕ್ಕೆ ದುಡ್ಡು ಖರ್ಚು ಮಾಡಬೇಕು, ಯಾವುದು ಮಾಡಬಾರದು ಎಂಬ ತಿಳಿವಳಿಕೆ ಇರುತ್ತದೆ. ಹಾಗಾಗಿ, ಅವರಿಗೆ ತೀರಾ ಅಗತ್ಯವೆಂದಾಗ ಕಂಗಾಲಾಗುವ ಪರಿಸ್ಥಿತಿ ಇರುವುದಿಲ್ಲ. ಹಣದ ಕೊರತೆಯಾಗೋದಿಲ್ಲ. ಹೀಗೆ ಹಣ ಉಳಿತಾಯ ಮಾಡುವ ಹುಡುಗಿಯರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ.
ಕನ್ಯಾ ರಾಶಿ(Virgo)
ಕನ್ಯಾ ರಾಶಿಯ ಹುಡುಗಿಯರು ಹಣವನ್ನು ಇಟ್ಟುಕೊಳ್ಳುವುದರಲ್ಲಿ ಪರಿಣಿತರು. ಈ ರಾಶಿಚಕ್ರದ ಹುಡುಗಿಯರು ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಈ ಗುಣದಿಂದಾಗಿ, ಅನೇಕ ಬಾರಿ ಜನರು ಅವರನ್ನು ಜಿಪುಣರು ಎಂದು ಪರಿಗಣಿಸುತ್ತಾರೆ. ಆದರೆ, ಸಂಪತ್ತು ಕ್ರೋಢೀಕರಣದ ಬಗ್ಗೆ ಅವರಿಗೆ ಉತ್ತಮ ತಿಳುವಳಿಕೆ ಇದೆ. ಎಲ್ಲಿ, ಯಾವಾಗ, ಎಷ್ಟು ಹಣ ಖರ್ಚು ಮಾಡಬೇಕು, ಎಷ್ಟು ಉಳಿಸಬೇಕು ಎಂದು ಆಕೆಗೆ ಚೆನ್ನಾಗಿ ಗೊತ್ತು. ಈ ಗುಣದಿಂದಾಗಿ ಅವರು ಯಾರ ಮುಂದೆಯೂ ಕೈ ಚಾಚುವ ಅಗತ್ಯ ಬೀಳುವುದಿಲ್ಲ.
ವೃಷಭ ರಾಶಿ(Taurus)
ವೃಷಭ ರಾಶಿಯ ಹುಡುಗಿಯರು ತಮ್ಮ ಬಜೆಟ್ ಅನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರದ ಹುಡುಗಿಯರು ತುಂಬಾ ಲೆಕ್ಕಾಚಾರ ಮಾಡುತ್ತಾರೆ. ಹಣವನ್ನು ಹೇಗೆ ಸೇರಿಸಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವರ ಬ್ಯಾಂಕ್ ಬ್ಯಾಲೆನ್ಸ್ ಉತ್ತಮವಾಗಿ ಉಳಿಯುತ್ತದೆ. ಅವರು ಹಣವನ್ನು ಹೂಡಿಕೆ ಮಾಡುವ ಬಗ್ಗೆ ಉತ್ತಮ ಜ್ಞಾನವನ್ನು ಪಡೆಯುತ್ತಾರೆ. ಈ ಕಾರಣದಿಂದಾಗಿ ಅವರು ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಬೇಕಾಗಿಲ್ಲ.
ತುಲಾ ರಾಶಿ(Libra)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಲಾ ರಾಶಿಯ ಹುಡುಗಿಯರು ತಾಯಿ ಲಕ್ಷ್ಮಿಯಿಂದ ಆಶೀರ್ವದಿಸಲ್ಪಡುತ್ತಾರೆ. ಅವರಿಗೆ ಎಂದೂ ಹಣದ ಕೊರತೆಯಿಲ್ಲ. ಭವಿಷ್ಯದಲ್ಲಿ ಹಣದ ಕೊರತೆಯಾಗದಂತೆ ಅವರು ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡುತ್ತಾರೆ. ಹಣವನ್ನು ಹೇಗೆ ನಿರ್ವಹಿಸಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಹಣದ ಬೆಲೆ ಗೊತ್ತಾದ್ದರಿಂದ ತಾಯಿ ಲಕ್ಷ್ಮಿಯೂ ಅವರ ಮೇಲೆ ಪ್ರಸನ್ನಳಾಗಿರುತ್ತಾಳೆ.
ಮಕರ(Capricorn)
ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಪ್ರಾಮುಖ್ಯತೆಯನ್ನು ಮಕರ ರಾಶಿಯವರು ಅರ್ಥ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರು ತಮ್ಮ ಹಣವನ್ನು ವ್ಯರ್ಥ ಮಾಡುವುದಿಲ್ಲ. ಅವರು ವೃತ್ತಿ-ಆಧಾರಿತ ಮತ್ತು ತಮ್ಮ ಗುರಿಗಳ ಕಡೆಗೆ ಶ್ರಮಿಸುತ್ತಾರೆ, ಆದ್ದರಿಂದ ಅವರಿಗೆ ಹಣಕಾಸಿನ ಸ್ಥಿರತೆ ಮತ್ತು ಯಶಸ್ಸು ಖಂಡಿತವಾಗಿ ಸಂಭವಿಸುತ್ತದೆ. ಜೊತೆಗೆ, ಸಾಕಷ್ಟು ಪರಿಶ್ರಮ ಪಡುವವರು ಇವರಾದ್ಧರಿಂದ ಭವಿಷ್ಯಕ್ಕಾಗಿ ಹೇಗೆಲ್ಲ ಸೇವಿಂಗ್ಸ್ ಮಾಡಬಹುದೆಂದು ಯೋಚಿಸಿ ಹಣ ಹೂಡಿಕೆ ಮಾಡುತ್ತಾರೆ.