ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಕಾಲಿಂದ ಮೆಟ್ಟಬೇಡಿ…. ಪಾಪ ಸುತ್ತಿಕೊಳ್ಳೋದು ಖಚಿತ
ಸನಾತನ ಧರ್ಮದಲ್ಲಿ ಪ್ರತಿಯೊಂದು ವಸ್ತುವಿನ ಮಹತ್ವವನ್ನು ಹೇಳಲಾಗಿದೆ. ಈ ಧರ್ಮದಲ್ಲಿ, ಪ್ರಕೃತಿಯಲ್ಲಿರುವ ಎಲ್ಲಾ ವಸ್ತುಗಳನ್ನು ಪೂಜಿಸಲಾಗುತ್ತದೆ. ಪದ್ಮ ಪುರಾಣದ ಪ್ರಕಾರ, ಯಾವ ವಸ್ತುಗಳನ್ನು ಕಾಲಿನಿಂದ ಮೆಟ್ಟಬಾರದು ಅನ್ನೋದನ್ನು ತಿಳಿಯೋಣ,
ಸನಾತನ ಧರ್ಮದಲ್ಲಿ (Sanathana Dharma), ಪಾಪ ಮತ್ತು ಸದ್ಗುಣದ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಯಾವ ವಸ್ತುಗಳನ್ನು ಕಾಲಿನಿಂದ ಮೆಟ್ಟಬಾರದು ಎನ್ನುವುದರ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ. ಕೆಲವು ವಸ್ತುಗಳನ್ನು ಮೆಟ್ಟುವುದು ಪಾಪ ಎಂದು ನಂಬಲಾಗಿದೆ. ಈ ವಿಷಯಗಳನ್ನು ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಯಾವ ವಸ್ತುಗಳನ್ನು ಮೆಟ್ಟಬಾರದು ತಿಳಿದು, ಅದರಂತೆ ನಡೆಯಿರಿ.
ಶಂಖ (Conch)
ದೇವತೆಗಳು ಪ್ರತಿಯೊಂದು ಕಣದಲ್ಲೂ ವಾಸಿಸುತ್ತಾರೆ. ನಾವು ಭೂಮಿಯ ಮೇಲೆ ನಡೆಯುತ್ತೇವೆ, ಭೂಮಿಗೆ ತಾಯಿ ಸ್ಥಾನಮಾನವನ್ನು ನೀಡಲಾಗಿದೆ. ಶಂಖ ಭೂಮಿ ಮೇಲಿನ ಒಂದು ಅಂಶ. ಹಾಗಾಗಿ ಶಂಖವನ್ನು ಎಂದಿಗೂ ಕಾಲಿನಿಂದ ಮೆಟ್ಟಬಾರದು. ಲಕ್ಷ್ಮೀ ದೇವಿಯು ಶಂಖದಲ್ಲಿ ವಾಸಿಸುತ್ತಾಳೆ. ನೀವು ಅದನ್ನ ಮೆಟ್ಟಿದರೆ ನೀವು ಹಣವನ್ನು ಕಳೆದುಕೊಳ್ಳಬಹುದು ಎನ್ನಲಾಗುತ್ತದೆ.
ಹಸು
ಸನಾತನ ಧರ್ಮದಲ್ಲಿ ಗೋವನ್ನು (Cow) ತಾಯಿಯಂತೆ ಪೂಜಿಸಲಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಸುವನ್ನು ಎಂದಿಗೂ ಕಾಲಿನಲ್ಲಿ ತುಳಿಯಬಾರದು. ಹಸುವಿನ ಮೇಲೆ ಪಾದಗಳನ್ನು ಇಡುವುದರಿಂದ ಬುದ್ಧಿಶಕ್ತಿ ನಾಶವಾಗುತ್ತದೆ.
ಪೊರಕೆ
ಪೊರಕೆಯನ್ನು ಎಂದಿಗೂ ಪಾದದಿಂದ ಮೆಟ್ಟಲೇಬಾರದು. ಪೊರಕೆ ಬಡತನವನ್ನು ತೆಗೆದುಹಾಕುತ್ತದೆ, ಮನೆಯನ್ನು ಸ್ವಚ್ಚವಾಗಿರಿಸಲು ಸಹಾಯ ಮಾಡುತ್ತದೆ, ಲಕ್ಷ್ಮಿ ದೇವಿಯು (Goddess Lakshmi) ಅದರಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ.
ಹಿತ್ತಾಳೆ ಪಾತ್ರೆಗಳು
ಹಿತ್ತಾಳೆ ಪಾತ್ರೆಗಳು ಸೂರ್ಯನನ್ನು ಪ್ರತಿನಿಧಿಸುತ್ತವೆ, ಆದ್ದರಿಂದ ಈ ಪಾತ್ರೆಗಳ ಮೇಲೆ ಎಂದಿಗೂ ಕಾಲಿಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಗ್ರಹಗಳನ್ನು ದುರ್ಬಲಗೊಳಿಸಬಹುದು ಎಂದು ಹೇಳಲಾಗುತ್ತದೆ.
ತುಳಸಿ ಎಲೆ (Basil leaves)
ತುಳಸಿ ಎಲೆಗಳು ಸನಾತನ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿವೆ ಮತ್ತು ಅವನ್ನು ಪೂಜಿಸಲಾಗುತ್ತದೆ. ತುಳಸಿ ಎಲೆಯನ್ನು ಎಂದಿಗೂ ಕಾಲಿನಿಂದ ಮೆಟ್ಟಬೇಡಿ. ತುಳಸಿ ಎಲೆಗಳನ್ನು ಕಾಲಿನಲ್ಲಿ ಮೆಟ್ಟಿದರೆ, ಅದರಿಂದ ಸಂಪತ್ತು ನಷ್ಟವಾಗುತ್ತದೆ.
ತಿನ್ನುವ, ಕುಡಿಯುವ ಆಹಾರ ಪದಾರ್ಥ
ಆಹಾರ ಮತ್ತು ಪಾನೀಯವನ್ನು ಕಾಲಿನಿಂದ ತಪ್ಪಿಯೂ ಮೆಟ್ಟಬಾರದು. ಯಾಕಂದರೆ ಆಹಾರವನ್ನು ದೇವರಿಗೆ ಹೋಲಿಸಲಾಗುತ್ತದೆ. ಇದಲ್ಲದೆ, ಪೂಜಾ ಅಥವಾ ಹವನದ ವಸ್ತುಗಳನ್ನು ಎಂದಿಗೂ ಪಾದದಿಂದ ಮೆಟ್ಟಬಾರದು.