ಪಿತೃ ಪಕ್ಷದಲ್ಲಿ ತಪ್ಪಿಯೂ ಕೂಡ ಈ ವಸ್ತು ದಾನ ಮಾಡಲೇಬೇಡಿ!
ಪಿತೃಪಕ್ಷದಂದು ದಾನ ಮಾಡುವುದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಪಿತೃಪಕ್ಷದಂದು ದಾನ ಮಾಡುವ ಮೂಲಕ, ಒಬ್ಬ ವ್ಯಕ್ತಿಯು 100 ಪಟ್ಟು ಫಲ ಪಡೆಯುತ್ತಾನೆ ಎಂದು ನಂಬಲಾಗಿದೆ. ಆದರೆ ಈ ಸಮಯದಲ್ಲಿ ಕೆಲವು ವಸ್ತುಗಳನ್ನು ಮರೆತೂ ಕೂಡ ದಾನ ಮಾಡಬಾರದು.
ಪಿತೃಪಕ್ಷದಲ್ಲಿ (Pitru Paksha) ದಾನಕ್ಕೆ ವಿಶೇಷ ಮಹತ್ವವಿದೆ. ಪಿತೃಪಕ್ಷದಂದು ದಾನ ಇತ್ಯಾದಿಗಳನ್ನು ಮಾಡುವ ವ್ಯಕ್ತಿಯು ಅದರ ಫಲಿತಾಂಶವನ್ನು 100 ಪಟ್ಟು ಪಡೆಯುತ್ತಾನೆ ಎಂದು ನಂಬಲಾಗಿದೆ. ದಾನ ಮಾಡೊದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಸಹ ಹೇಳಲಾಗುತ್ತದೆ,. ಆದಾಗ್ಯೂ, ಪಿತೃಪಕ್ಷದಲ್ಲಿ ದಾನ ಇತ್ಯಾದಿಗಳನ್ನು ಮಾಡುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಯಾಕಂದ್ರೆ ಕೆಲವು ವಸ್ತುಗಳನ್ನು ಈ ಸಮಯದಲ್ಲಿ ದಾನ ಮಾಡಬಾರದು.
ಪಿತೃಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ (donate) ಮಾಡಬಾರದು ಎಂದು ತಿಳಿದುಕೊಳ್ಳೋಣ ಏಕೆಂದರೆ, ಈ ವಸ್ತುಗಳನ್ನು ದಾನ ಮಾಡುವುದರಿಂದ ಪಿತೃಗಳು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ, ಪಿತೃ ಪಕ್ಷದಂದು ಈ 5 ವಸ್ತುಗಳನ್ನು ತಪ್ಪಿಯೂ ದಾನ ಮಾಡಬೇಡಿ.
ಎಣ್ಣೆಯನ್ನು ದಾನ ಮಾಡಬೇಡಿ: ಪಿತೃ ಪಕ್ಷದ ಸಮಯದಲ್ಲಿ ಎಣ್ಣೆಯನ್ನು ದಾನ ಮಾಡಬೇಡಿ. ಪಿತೃಪಕ್ಷದಂದು ಎಣ್ಣೆಯನ್ನು ದಾನ ಮಾಡುವುದರಿಂದ ಪಿತೃಗಳಿಗೆ ನಿಮ್ಮ ಮೇಲೆ ಕೋಪ ಬರುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ಸಾಸಿವೆ ಎಣ್ಣೆಯ (mustard oil) ದಾನವನ್ನು ಮಾಡಲೇಬಾರದು..
ಹಳೆಯ ಬಟ್ಟೆಗಳನ್ನು ದಾನ ಮಾಡಬೇಡಿ: ಈ ಸಮಯದಲ್ಲಿ ಬಟ್ಟೆಗಳನ್ನು (Old cloths) ದಾನ ಮಾಡಲು ಬಯಸಿದರೆ, ದಾನದಲ್ಲಿ ಹೊಸ ಬಟ್ಟೆಗಳನ್ನು ಮಾತ್ರ ನೀಡಬೇಕು ಎಂಬುದನ್ನು ನೆನಪಿಡಿ. ಹಳೆಯ ಮತ್ತು ನಿಷ್ಪ್ರಯೋಜಕ ಬಟ್ಟೆಗಳನ್ನು ಯಾರಿಗೂ ದಾನ ಮಾಡಬೇಡಿ. ಅಲ್ಲದೆ, ಶೂಗಳು ಮತ್ತು ಚಪ್ಪಲಿಗಳನ್ನು ದಾನ ಮಾಡಬೇಡಿ. ಏಕೆಂದರೆ, ಅಂತಹ ದಾನ ಮಾಡೋದ್ರಿಂದ, ವ್ಯಕ್ತಿಯ ಮೇಲೆ ರಾಹು ದೋಷ ಮತ್ತು ಪಿತೃ ದೋಷ ಉಂಟಾಗುತ್ತೆ ಅದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.
ನಿಷ್ಪ್ರಯೋಜಕ ಮತ್ತು ತಂಗಳು ಆಹಾರವನ್ನು ದಾನ ಮಾಡಬೇಡಿ: ಪಿತೃಪಕ್ಷದಂದು ಆಹಾರವನ್ನು ದಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಅನ್ನದಾನವು ಒಂದು ದೊಡ್ಡ ದಾನವಾಗಿದೆ ಎಂದು ಧರ್ಮಗ್ರಂಥಗಳಲ್ಲಿಯೂ ಹೇಳಲಾಗಿದೆ. ನೀವು ಪಿತೃಪಕ್ಷದ ಸಮಯದಲ್ಲಿ ಆಹಾರವನ್ನು ದಾನ ಮಾಡಲು ಬಯಸಿದರೆ, ಉತ್ತಮ ಆಹಾರವನ್ನು ದಾನ ಮಾಡಿ, ಆದರೆ ಹಳಸಿದ ಆಹಾರವನ್ನು ಯಾರಿಗೂ ನೀಡಬೇಡಿ. ಉತ್ತಮ ಆಹಾರ ನೀಡಿದರೆ ಮಾತ್ರ ಪಿತೃಗಳಿಗೆ ಸಂತೋಷವಾಗುತ್ತೆ.
ಪಿತೃಪಕ್ಷದಂದು ಕಬ್ಬಿಣದ ಪಾತ್ರೆಗಳನ್ನು ದಾನ ಮಾಡಬೇಡಿ: ಪಿತೃಪಕ್ಷದಂದು ಅನೇಕ ಜನರು ಪಾತ್ರೆಗಳನ್ನು ದಾನ ಮಾಡುತ್ತಾರೆ ಆದರೆ, ನೀವು ಕಬ್ಬಿಣದ ಪಾತ್ರೆಗಳನ್ನು ದಾನ ಮಾಡದಂತೆ ನೋಡಿಕೊಳ್ಳಿ. ಕಬ್ಬಿಣದ ಪಾತ್ರೆಯನ್ನು ದಾನ ಮಾಡುವುದರಿಂದ ಪಿತೃಗಳಿಗೆ ನಿಮ್ಮ ಮೇಲೆ ಕೋಪ ಬರಬಹುದು ಮತ್ತು ಪಿತೃ ದೋಷವೂ ಬರಬಹುದು. ಆದ್ದರಿಂದ, ಸ್ಟೀಲ್ ಪಾತ್ರೆಗಳನ್ನು ಮಾತ್ರ ದಾನ ಮಾಡಿ.
ಕಪ್ಪು ಬಟ್ಟೆಗಳನ್ನು ದಾನ ಮಾಡಬೇಡಿ: ಪಿತೃಪಕ್ಷದ ಸಮಯದಲ್ಲಿ, ವ್ಯಕ್ತಿಯು ಕಪ್ಪು ಬಣ್ಣದ ಬಟ್ಟೆಗಳನ್ನು ಯಾರಿಗೂ ದಾನ ಮಾಡಬಾರದು. ಪಿತೃಪಕ್ಷದಂದು ಬಿಳಿ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು. ಬಿಳಿ ಬಟ್ಟೆಗಳನ್ನು ದಾನ ಮಾಡುವುದರಿಂದ ನಮ್ಮ ಪೂರ್ವಜರು ಸಂತೋಷಪಡುತ್ತಾರೆ.