ದೀಪಾವಳಿ: ಲಕ್ಷ್ಮಿ ಕೋಪ ತರಿಸುವಂಥ ಈ ತಪ್ಪನ್ನು ಮಾಡಲೇ ಬೇಡಿ!
ದೀಪಾವಳಿಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ವಿಶೇಷ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ ಮತ್ತು ಇದು ನಿಮ್ಮ ಆಸೆಗಳನ್ನು ಸಹ ಪೂರೈಸುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ದೀಪಾವಳಿ ಹಬ್ಬವನ್ನು (Deepavali festival) ದೇಶಾದ್ಯಂತ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಈ ದಿನ ಮನೆಯನ್ನು ದೀಪಗಳಿಂದ ಅಲಂಕರಿಸುತ್ತಾರೆ. ಲಕ್ಷ್ಮೀ ದೇವಿಯನ್ನು ಸ್ವಾಗತಿಸಲು ಹೀಗೆ ಮಾಡಲಾಗುತ್ತೆ. ಈ ವರ್ಷ ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ. ಈ ದಿನ, ಜನರು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಮತ್ತು ದೇವಿಗೆ ಇಷ್ಟದ ವಸ್ತುಗಳನ್ನು ಅರ್ಪಿಸುತ್ತಾರೆ.
ದೀಪಾವಳಿಯಂದು ಲಕ್ಷ್ಮಿಯನ್ನು (Goddess Lakshmi) ಪೂಜಿಸಿದರೆ, ವರ್ಷಪೂರ್ತಿ ಮನೆಯಲ್ಲಿ ಸಮೃದ್ಧಿ ಉಳಿಯುತ್ತದೆ ಮತ್ತು ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ದೀಪಾವಳಿಯ ದಿನದಂದು ಅನೇಕ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸುವುದು ಒಳ್ಳೆಯದು. ಯಾಕಂದ್ರೆ ಈ ಸಲಹೆಗಳನ್ನು ಪಾಲಿಸಿದ್ರೆ ಹಣ ಹೆಚ್ಚಾಗುತ್ತೆ ಎನ್ನಲಾಗುತ್ತದೆ. ಆದರೆ ಕೆಲವೊಂದು ತಪ್ಪುಗಳನ್ನು ಮಾಡೋದನ್ನು ತಪ್ಪಿಸಬೇಕು ಎಂದು ಸಹ ಹೇಳಲಾಗುತ್ತೆ, ಆ ತಪ್ಪುಗಳ ಬಗ್ಗೆ ತಿಳಿಯೋಣ.
ರಂಗೋಲಿ ಹಾಕದೇ ಇರೋದು ತಪ್ಪು
ದೀಪಾವಳಿಯ ದಿನದಂದು, ಮನೆಯಲ್ಲಿ ರಂಗೋಲಿ (Rangoli) ಹಾಕಬೇಕು. ಇದು ಮನೆಯಲ್ಲಿ ಲಕ್ಷ್ಮಿ ದೇವಿಯ ಆಗಮನಕ್ಕೆ ಕಾರಣವಾಗುತ್ತದೆ. ನೀವು ಮನೆಯಲ್ಲಿ ಯಾವುದೇ ರೀತಿಯ ರಂಗೋಲಿ ಹಾಕದಿದ್ದರೆ, ಲಕ್ಷ್ಮಿ ಪೂಜೆಯ ಪೂರ್ಣ ಫಲಿತಾಂಶವನ್ನು ನೀವು ಪಡೆಯುವುದಿಲ್ಲ.
ನೀವು ಸಣ್ಣ ರಂಗೋಲಿಯನ್ನು ಹಾಕಿದರೂ ಸರಿ, ರಂಗೋಲಿ ಬೇಕೇ ಬೇಕು. ಮನೆಯನ್ನು ರಂಗೋಲಿಯಿಂದ ಅಲಂಕರಿಸುವುದು ಅಗತ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಸುಂದರವಾದ ರಂಗೋಲಿ ಮಾಡುವುದು ಮತ್ತು ಮನೆಗಳನ್ನು ದೀಪಗಳಿಂದ ಬೆಳಗಿಸುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಲಕ್ಷ್ಮೀ ದೇವಿಯನ್ನು ಸ್ವಾಗತಿಸುವ ಮಾರ್ಗ ಎಂದು ನಂಬಲಾಗಿದೆ.
ಗಣೇಶನ ವಿಗ್ರಹ ತಪ್ಪು ದಿಕ್ಕಿನಲ್ಲಿಡಬೇಡಿ
ದೀಪಾವಳಿ ಪೂಜಾ ಸಮಯದಲ್ಲಿ ಮಾತಾ ಲಕ್ಷ್ಮಿ ಮತ್ತು ಗಣಪತಿ ವಿಗ್ರಹಗಳನ್ನು ತಪ್ಪು ದಿಕ್ಕಿನಲ್ಲಿಟ್ಟರೆ, ಅದು ಶುಭವಲ್ಲ. ಗಣಪತಿ ಬಲಭಾಗದಲ್ಲಿ ಮಾತಾ ಲಕ್ಷ್ಮಿಯ ವಿಗ್ರಹವನ್ನು ಸ್ಥಾಪಿಸಬೇಕು ಮತ್ತು ಕಮಲದ ಮೇಲೆ ಕುಳಿತು ಆಶೀರ್ವಾದ ನೀಡುತ್ತಿರುವ ಲಕ್ಷ್ಮಿಯ ವಿಗ್ರಹವನ್ನೇ ಸ್ಥಾಪಿಸಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.
ದೀಪಾವಳಿ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ವಿಗ್ರಹವನ್ನು ಸ್ಥಾಪಿಸುವ ಸಮಯದಲ್ಲಿ ದಿಕ್ಕಿನ ಬಗ್ಗೆ ಅನೇಕ ಜನರು ಗಮನ ಹರಿಸುವುದಿಲ್ಲ, ಆದರೆ ತಪ್ಪು ದಿಕ್ಕಿನಲ್ಲಿ ಇರಿಸಲಾದ ವಿಗ್ರಹಗಳ ಪೂಜೆಯು ಪೂರ್ಣ ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ.
ತಪ್ಪು ಪೂಜಾ ಸಾಮಗ್ರಿಗಳ ಬಳಕೆ
ದೀಪಾವಳಿ ಪೂಜೆಯ ಸಮಯದಲ್ಲಿ, ಯಾವುದೇ ತಪ್ಪು ಪೂಜಾ ಸಾಮಗ್ರಿಗಳನ್ನು ಬಳಸದಂತೆ ನೀವು ಕಾಳಜಿ ವಹಿಸಬೇಕು. ಹಾಗೆ ಮಾಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತು ಪೂಜೆಯನ್ನು ಯಶಸ್ವಿ ಎಂದು ಪರಿಗಣಿಸಲಾಗುವುದಿಲ್ಲ.
ದೀಪಾವಳಿ ಪೂಜೆಯಲ್ಲಿ ಮುರಿದ ಪಾತ್ರೆಗಳು ಅಥವಾ ಮುರಿದ ವಿಗ್ರಹಗಳಂತಹ ಯಾವುದೇ ಮುರಿದ ವಸ್ತುವನ್ನು ಎಂದಿಗೂ ಬಳಸಬೇಡಿ. ಪೂಜೆಯ ಸಮಯದಲ್ಲಿ ನೀವು ಒಂದು ಕಲಶವನ್ನು ಸಹ ಇಡಬಹುದು. ಮಾವಿನ ಎಲೆಗಳನ್ನು ಕಲಶದಲ್ಲಿ ಇರಿಸಿ ಮತ್ತು ಅದರಲ್ಲಿ ದಾರ ಸುತ್ತಲು ಮರೆಯಬೇಡಿ. ನೀವು ಕಲಶವನ್ನು ಇಟ್ಟುಕೊಂಡಿದ್ದರೆ, ತೆಂಗಿನ ಬಾಯಿ ಮುಂಭಾಗದಲ್ಲಿರಬೇಕು. ಪಾತ್ರೆಯಲ್ಲಿ ಒಂದು ನಾಣ್ಯ ಇರಿಸಬೇಕು ಅನ್ನೋದನ್ನು ಮರೆಯಬೇಡಿ.
ತಕ್ಷಣವೇ ವಿಗ್ರಹ ತೆಗೆದುಹಾಕಬೇಡಿ
ದೀಪಾವಳಿ ಪೂಜೆ ಮುಗಿದ ತಕ್ಷಣ ಲಕ್ಷ್ಮೀ ವಿಗ್ರಹವನ್ನು ತೆಗೆಯಬೇಡಿ. ದೀಪಾವಳಿಯ ಎಲ್ಲಾ ಆಚರಣೆಗಳನ್ನು ಪೂರ್ಣಗೊಳಿಸಿದ ತಕ್ಷಣ ದೇವಾಲಯ ಅಥವಾ ಪೂಜಾ ಪ್ರದೇಶವನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಅನೇಕ ಜನರು ಹೊಂದಿದ್ದಾರೆ, ಆದರೆ ಪೂಜೆಯ ನಂತರ ತಕ್ಷಣ ಆ ಸ್ಥಳವನ್ನು ಎಂದಿಗೂ ಸ್ವಚ್ಛಗೊಳಿಸಬಾರದು ಎಂಬುದನ್ನು ನೆನಪಿನಲ್ಲಿಡಬೇಕು.
ಪೂಜೆಯ ಸಮಯದಲ್ಲಿ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬಂದು ಆಶೀರ್ವಾದ ನೀಡುತ್ತಾಳೆ ಎಂದು ನಂಬಲಾಗಿದೆ. ನೀವು ತಕ್ಷಣ ಸ್ಥಳವನ್ನು ಸ್ವಚ್ಛಗೊಳಿಸಿದರೆ, ಅದು ನಕಾರಾತ್ಮಕ ಪರಿಣಾಮಗಳನ್ನು (negative effect) ಉಂಟುಮಾಡಬಹುದು. ಹಾಗಾಗಿ ಅದನ್ನು ಮಾಡಲು ಹೋಗಬೇಡಿ, ಸ್ವಲ್ಪ ಸಮಯ ಬಿಟ್ಟು ಅಥವಾ ಮರುದಿನ ಅದನ್ನು ತೆಗೆಯಿರಿ.