ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಅಳಬಾರದಂತೆ, ಯಾಕೆ ಗೊತ್ತಾ?
ಕನಸಿನಲ್ಲಿ ಮೃತ ವ್ಯಕ್ತಿಗಳು ಅಳುತ್ತಿರುವುದು ಕೆಟ್ಟ ಶಕುನ. ಇದು ಈಡೇರದ ಆಸೆಗಳು ಅಥವಾ ಮುಂಬರುವ ಸಮಸ್ಯೆಗಳನ್ನು ಸೂಚಿಸುತ್ತದೆ. ಜ್ಯೋತಿಷಿಗಳ ಪ್ರಕಾರ, ಪದೇ ಪದೇ ಇಂತಹ ಕನಸುಗಳು ಬಿದ್ದರೆ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಬಹಳ ಹಚ್ಚಿಕೊಂಡ ಆಪ್ತರು ಸಾವು ಕಂಡಾಗ ಅವರು ಕನಸಿನಲ್ಲಿ ಬರಬಹುದು. ಆದರೆ, ಕನಸಿನಲ್ಲಿ ಇಂಥ ವ್ಯಕ್ತಿಗಳು ಬಂದಾಗ ಅವರು ಅಳಬಾರದು ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಅತ್ತರೆ ಏನರ್ಥ ಅನ್ನೋದರ ವಿವರ ಇಲ್ಲಿದೆ.
ಸಾಮಾನ್ಯವಾಗಿ ಸತ್ತವರು ಕನಸಿನಲ್ಲಿ ಬಂದು ನಗುವಿನಲ್ಲಿದ್ದರೆ ಒಂದು ಅರ್ಥ, ಬೇಸರದಲ್ಲಿದ್ದರೆ ಒಂದು ಅರ್ಥ. ಅನಾರೋಗ್ಯಕ್ಕೀಡಾಗಿರುವಂತೆ ಕಂಡರೆ ಒಂದೊಂದು ಅರ್ಥವಿದೆ. ಆದರೆ, ಯಾವುದೇ ಕಾರಣಕ್ಕೂ ಅವರು ಅಳುತ್ತಿರುವಂತೆ ಕನಸು ಬೀಳಬಾರದು ಎನ್ನುತ್ತಾರೆ.
ಮೃತ ವ್ಯಕ್ತಿಗಳು ಕನಸಿನಲ್ಲಿ ಬಂದು ಬೇಸರದಲ್ಲಿದ್ದರೆ ಅಥವಾ ಅವರು ಅಳುತ್ತಿರುವಂತೆ ಕಂಡು ಬಂದರೆ, ನಿಮ್ಮ ಕಡೆಯಿಂದಲೇ ಏನೂ ತಪ್ಪಾಗಿದೆ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಅವರ ಯಾವುದೋ ಒಂದು ಆಸೆಯನ್ನು ನೀವು ಈಡೇರಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಅರ್ಥವೂ ಇದಕ್ಕಿದೆ. ಈ ಆಸೆ ಈಡೇರುವವವರೆಗೂ ಅವರು ಕಾಲ ಕಾಲಕ್ಕೆ ಕನಸಿನಲ್ಲಿ ಬಂದು ಅಳುತ್ತಿರುತ್ತಾರಂತೆ. ಈ ಹಂತದಲ್ಲಿ ನಿಮ್ಮ ನಂಬಿಕೆಯ ಜ್ಯೋತಿಷಿಯಲ್ಲಿ ಇದರ ಬಗ್ಗೆ ವಿಚಾರಿಸಿ ಸೂಕ್ತ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು.
ಪದೇ ಪದೇ ಅವರು ಕನಸಿನಲ್ಲಿ ಬಂದು ಅಳುತ್ತಿದ್ದರೆ, ಅದು ನಿಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಅಗಲಿದ ವ್ಯಕ್ತಿಗಳು ಕನಸಿನಲ್ಲಿ ದುಃಖದಲ್ಲಿರುವ ರೀತಿಯಲ್ಲಿ ಕಂಡುಬಂದರೆ ಅವರಿಗೆ ಏನೂ ಅಸಂತೃಪ್ತಿಯಲ್ಲಿ ಇದ್ದಾರೆ ಎಂದರ್ಥ. ಪದೇ ಪದೇ ಅವರು ಅಳುತ್ತಿರುವಂತೆ ಕನಸು ಬೀಳುತ್ತಿದ್ದರೆ, ನಿಮ್ಮ ಜೀವನದಲ್ಲಿ ಮುಂದೆ ಕೆಲವು ಬಿಕ್ಕಟ್ಟುಗಳು ಎದುರಾಗುವ ಸೂಚನೆ ಎಂದೂ ಹೇಳಲಾಗುತ್ತದೆ.
ಹಾಗಾಗಿ ಇಂಥ ಕನಸುಗಳು ಬಿದ್ದಾಗ, ಅದಕ್ಕೆ ಕಾರಣವೇನೂ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿರುವ ಇತರ ಸದಸ್ಯರೊಂದಿಗೆ ಇಂಥ ಕನಸುಗಳನ್ನು ಹಂಚಿಕೊಳ್ಳಬೇಕು. ಹಾಗೇನಾದರೂ ಅವರಿಗೆ ಈಡೇರದ ಆಸೆಯನ್ನು ಯಾರಲ್ಲಾದರೂ ಹೇಳಿಕೊಂಡಿದ್ದಲ್ಲಿ, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಇಲ್ಲದೇ ಇದ್ದಲ್ಲಿ ಅದು ನಿಮ್ಮ ಜೀವನದಲ್ಲಿ ಸಮಸ್ಯೆಗೆ ಕಾರಣವಾಗಬಹುದು ಎನ್ನಲಾಗುತ್ತದೆ.
ಇದನ್ನೂ ಓದಿ: 100 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಟ್ರೇನ್‌ನ ಎಮರ್ಜೆನ್ಸಿ ಕಿಟಕಿಯಿಂದ ಹೊರಬಿದ್ದ ಮಗು, ಪ್ರಾಣಾಪಾಯದಿಂದ ಪಾರು!
ಅಳುವುದು ಆಯ್ತು, ಹಾಗೇನಾದರೂ ನಿಮ್ಮ ಆಪ್ತರು ಕನಸಿನಲ್ಲಿ ನಗುತ್ತಿದ್ದರೆ ಅಥವಾ ಸಂತೋಷವಾಗಿ ಇರುವುದು ಕಂಡರೆ ಅವರು ನೆಮ್ಮದಿಯಾಗಿದ್ದಾರೆ ಎಂದರ್ಥ. ಅವರಿಗೆ ನೀವು ಮಾಡಿದ ಎಲ್ಲಾ ಕಾರ್ಯಗಳಲ್ಲೂ ತೃಪ್ತಿಯಿದೆ ಎನ್ನುವ ಅರ್ಥ ನೀಡುತ್ತದೆ.
ಇದನ್ನೂ ಓದಿ: ತಿಂಗಳಿಗೆ 20 ಸಾವಿರ ಸ್ಯಾಲರಿ ಇದ್ರೂ ನೀವು ಕೋಟ್ಯಧಿಪತಿ ಆಗಬಹುದು..Bull Run Strategy ನಿಮ್ಮದಾಗಿರಬೇಕಷ್ಟೇ!