- Home
- Business
- ತಿಂಗಳಿಗೆ 20 ಸಾವಿರ ಸ್ಯಾಲರಿ ಇದ್ರೂ ನೀವು ಕೋಟ್ಯಧಿಪತಿ ಆಗಬಹುದು..Bull Run Strategy ನಿಮ್ಮದಾಗಿರಬೇಕಷ್ಟೇ!
ತಿಂಗಳಿಗೆ 20 ಸಾವಿರ ಸ್ಯಾಲರಿ ಇದ್ರೂ ನೀವು ಕೋಟ್ಯಧಿಪತಿ ಆಗಬಹುದು..Bull Run Strategy ನಿಮ್ಮದಾಗಿರಬೇಕಷ್ಟೇ!
ತಿಂಗಳ ಸಂಬಳ ಕೇವಲ ₹20,000 ಇದ್ದರೂ, 30 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಬಹುದು. ತಿಂಗಳಿಗೆ ₹3,000 SIP ಹೂಡಿಕೆ ಮತ್ತು ವಾರ್ಷಿಕ 12% ಬಡ್ಡಿಯೊಂದಿಗೆ, ಬುಲ್ ರನ್ ತಂತ್ರದ ಮೂಲಕ ₹1 ಕೋಟಿಗೂ ಹೆಚ್ಚು ಸಂಪಾದಿಸಬಹುದು.

ಕೋಟ್ಯಾಧಿಪತಿಯಾಗುವುದು ಹೇಗೆ
ನಿಮ್ಮ ಪ್ರತಿ ತಿಂಗಳ ಸ್ಯಾಲರಿ ಕೇವಲ 20 ಸಾವಿರ ರೂಪಾಯಿ ಆಗಿದ್ದರೂ, ನೀವು ಕೋಟ್ಯಧಿಪತಿಯಾಗಬಹುದು. 1 ಕೋಟಿ ರೂಪಾಯಿಗಳ ನಿಧಿಯನ್ನು ರಚಿಸಲು ನಿರ್ಧಾರ ಮಾಡಿದರೆ, ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ? ಇದಕ್ಕಾಗಿ ನೀವು ಅಳವಡಿಸಿಕೊಳ್ಳಬೇಕಾಗಿರುವ ಬುಲ್ ರನ್ ತಂತ್ರ. ಇದಕ್ಕಾಗಿ ನೀವು ದೀರ್ಘಾವಧಿಯ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಅದ್ಭುತ ಆದಾಯ ಕೂಡ ನಿಮಗೆ ಸಿಗುತ್ತದೆ. ಈ ಸಂಪೂರ್ಣ ಅವಧಿಯಲ್ಲಿ ನೀವು ಬಡ್ಡಿಯ ಮೇಲೆ ಬಡ್ಡಿಯನ್ನು ಪಡೆಯುತ್ತೀರಿ. ನೀವು ಎಷ್ಟು ಬೇಗ ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ಪ್ರಯೋಜನವನ್ನು ಪಡೆಯುತ್ತೀರಿ. 'ಕಂಪೌಂಡಿಂಗ್' ಲಾಭ ಪಡೆಯಲು, ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಮಾಡಬೇಕು.
ಎಷ್ಟು ಹಣ ಹೂಡಿಕೆ ಮಾಡಬೇಕು: ನಿಮ್ಮ ಪ್ರತಿ ತಿಂಗಳ ಸ್ಯಾಲರಿ 20 ಸಾವಿರವಾಗಿದ್ದರೆ, ಇದರಲ್ಲಿ ಶೇ. 15ರಷ್ಟು ಅಂದರೆ, 3 ಸಾವಿರ ರೂಪಾಯಿಯನ್ನು ನೀವು ಹೂಡಿಕೆ ಮಾಡುವ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು.
3 ಸಾವಿರ ಹಣವನ್ನು SIP ಮಾಡಬೇಕು: ನಿಮ್ಮ ಸ್ಯಾಲರಿಯಿಂದ ತೆಗೆದ ಈ 3 ಸಾವಿರ ರೂಪಾಯಿಯನ್ನು ಪ್ರತಿ ತಿಂಗಳು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಅಂದರೆ SIP ಮಾಡಬೇಕು. ಯಾವುದೇ ಕಷ್ಟ, ಏನೇ ಅಡೆತಡೆ ಇದ್ದರೂ ಇದನ್ನು ಬಿಡಬಾರದು.
ಹೂಡಿಕೆಯ ಅವಧಿ: ಕೇವಲ ಒಂದು-ಎರಡು ವರ್ಷಗಳ ಹೂಡಿಕೆಯಲ್ಲಿ, ಬರೋಬ್ಬರಿ 30 ವರ್ಷಗಳ ದೀರ್ಘಾವಧಿಯ ಕಾಲ ಹೂಡಿಕೆ ಮಾಡಬೇಕಾಗಿರುತ್ತದೆ.
ವಾರ್ಷಿಕ ಬಡ್ಡಿ: ನೀವು ಮಾಡುವ ಹೂಡಿಕೆಗೆ ವಾರ್ಷಿಕವಾಗಿ ಶೇ. 12ರಷ್ಟು ಬಡ್ಡಿ ಬರುತ್ತಿರಬೇಕು. ಸಾಮಾನ್ಯವಾಗಿ ಮ್ಯೂಚ್ಯುವಲ್ ಫಂಡ್‌ನ ಬ್ಲ್ಯೂಚಿಪ್ ಫಂಡ್‌ಗಳು ವಾರ್ಷಿಕ ಶೇ. 12ರಷ್ಟು ರಿಟರ್ನ್ಸ್ ನೀಡುತ್ತವೆ.
ನಿಮ್ಮ ಒಟ್ಟು ಹೂಡಿಕೆ ಮೊತ್ತ: 30 ವರ್ಷಗಳ ಅವಧಿಗೆ ನೀವು ಮಾಡುವ ಒಟ್ಟು ಹೂಡಿಕೆ ಮೊತ್ತ 10 ಲಕ್ಷದ 80 ಸಾವಿರ ರೂಪಾಯಿ ಆಗುತ್ತದೆ.
ಅಂದಾಜು ರಿಟರ್ನ್: ಪ್ರತಿ ತಿಂಗಳ ನಿಮ್ಮ ಹೂಡಿಕೆ ಮೊತ್ತ ಹಾಗೂ ವಾರ್ಷಿಕ ಶೇ. 12ರಷ್ಟು ರಿಟರ್ನ್ಸ್ ಎಂದರೆ, 30 ವರ್ಷಗಳ ಬಳಿಕ ನಿಮಗೆ ಬರುವ ರಿಟರ್ನ್ಸ್ ಮೊತ್ತ 95,09,741 ರೂಪಾಯಿ ಆಗಿರುತ್ತದೆ.
ನಿಮ್ಮ ಸಂಬಳದ ರೂ.20,000 ಅಂದರೆ ರೂ.3,000ದ ಶೇ.15ರಷ್ಟು ಹಣವನ್ನು ಹೂಡಿಕೆ ಮಾಡುವುದರಿಂದ 30 ವರ್ಷಗಳ ಅವಧಿಯಲ್ಲಿ ನೀವು SIP ಮೂಲಕ 1 ಕೋಟಿ 5 ಲಕ್ಷದ 89 ಸಾವಿರದ 741 ರೂಪಾಯಿ ಹಣ ಪಡೆಯುತ್ತೀರಿ. ಅದರ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.