MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Festivals
  • ಉತ್ತರ ಕರ್ನಾಟಕದಲ್ಲೂ ಟ್ರೆಂಡ್ ಆಯ್ತು ದಸರಾ ಗೊಂಬೆ ಸಂಪ್ರದಾಯ: ಜತ್ತಿ ಕುಟುಂಬದಿಂದ ವಿಭಿನ್ನ ಆಚರಣೆ

ಉತ್ತರ ಕರ್ನಾಟಕದಲ್ಲೂ ಟ್ರೆಂಡ್ ಆಯ್ತು ದಸರಾ ಗೊಂಬೆ ಸಂಪ್ರದಾಯ: ಜತ್ತಿ ಕುಟುಂಬದಿಂದ ವಿಭಿನ್ನ ಆಚರಣೆ

ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ವಿಜಯಪುರ (ಅ.23) : ಮೈಸೂರು ಭಾಗದಲ್ಲಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ನವರಾತ್ರಿ ಸಮಯದಲ್ಲಿ ಗೊಂಬೆಗಳನ್ನ ಕೂರಿಸೋದು ಕಾಮನ್. ಉತ್ತರ ಕರ್ನಾಟಕ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಗೊಂಬೆಗಳನ್ನ ಕೂರಿಸೋ ಸಂಪ್ರದಾಯವಿಲ್ಲ. ಆದ್ರೀಗ ಉತ್ತರ ಕರ್ನಾಟಕ ಭಾಗದಲ್ಲು ನವರಾತ್ರಿ ಸಂದರ್ಭದಲ್ಲಿ ಗೊಂಬೆ ಕೂರಿಸುವ ಟ್ರೆಂಡ್ ಶುರುವಾದಂತೆ ಕಾಣ್ತಿದೆ. ಗುಮ್ಮಟನಗರಿ ವಿಜಯಪುದಲ್ಲಿ ದಸರಾಗೊಂಬೆಗಳನ್ನ ಕೂರಿಸಿದ್ದು, ಪುಟಾಣಿಗೊಂಬೆಗಳು ಜನರನ್ನ ಆಕರ್ಷಿಸುತ್ತಿವೆ.

2 Min read
Author : Sathish Kumar KH
Published : Oct 23 2023, 07:20 PM IST
Share this Photo Gallery
  • FB
  • TW
  • Linkdin
  • Whatsapp
15

ನವರಾತ್ರಿ ಅಥವಾ ದಸರಾ ಹಬ್ಬದ ವೇಳೆ ಮನೆಯಲ್ಲಿ ಗೊಂಬೆ ಕೂರಿಸುವ ಪದ್ದತಿ ಇದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಈ ಸಂಪ್ರದಾಯ ಹೆಚ್ಚು ಜನಪ್ರಿಯ. ಅದ್ರೆ ಇಂತಹ ಆಚರಣೆ ಬಸವನಾಡು ವಿಜಯಪುರ ನಗರದಲ್ಲಿ ಆಚರಿಸಲಾಗುತ್ತಿದೆ.  ಮೈಸೂರಿನ ಚಾಮುಂಡಿ ಬೆಟ್ಟ, ಮಹಿಷಾಸುರ, ಜಂಬೂ ಸವಾರಿ ಸೇರಿದಂತೆ ಮೈಸೂರು ಅರಮನೆ, ರಾಮಾಯಣ, ದೇವಲೋಕ, ಸತ್ಪುರುಷರ ಕುರಿತು ಕಥೆ ಹೇಳುತ್ತಿವೆ. ಅಷ್ಟೇ ಅಲ್ಲದೇ ಆಧುನಿಕ ಲೋಕವನ್ನು ಬಿಂಬಿಸುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25

ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮಹಾಲಿಂಗಪ್ಪ ಜತ್ತಿಯವರ ಮನೆಯಲ್ಲಿ ನವರಾತ್ರಿ ಹಬ್ಬದ ನಿಮಿತ್ತವಾಗಿ 300 ಕ್ಕೂ ಹೆಚ್ಚು ಗೊಂಬೆಗಳನ್ನ ಕೂರಿಸಲಾಗಿದೆ. ನವರಾತ್ರಿ ಅಂಗವಾಗಿ  ಮೈಸೂರು ದಸರಾ ವೈಭವ, ರಾಮಾಯಣ, 5 ಸ್ಥರಗಳ ದೇವಲೋಕ, ಸತ್ಪುರುಷರ ಗೊಂಬೆ, ಹಳ್ಳಿ ಸೊಗಡು ಹೀಗೆ ಹಲವು ಆಯಾಮಗಳಲ್ಲಿ ಗೊಂಬೆಗಳನ್ನ ಕೂರಿಸಲಾಗಿದೆ. 

35

ಒಟ್ಟು 300 ಗೊಂಬೆಗಳ ಮೂಲಕ ಜತ್ತಿಯವರ ಮನೆಯಲ್ಲಿ ಗೊಂಬೆಗಳ ಲೋಕವೇ ಸೃಷ್ಟಿಯಾಗಿದೆ. ಅಷ್ಟಕ್ಕು ಈ ಗೊಂಬೆ ಐಡಿಯಾ ನಿವೃತ್ತಿ ಬ್ಯಾಂಕ್ ನೌಕರ  ಮಹಾಲಿಂಗಪ್ಪ ಅವರ ತಲೆಯಲ್ಲಿ ಹೇಗೆ ಬಂತು ಅಂತಾ ನೋಡಿದ್ರೆ, ಇದರ ಹಿಂದಿರೋದು ಅವರ ಪತ್ನಿ ವಿಜಯಾ.  ವಿಜಯಾ ಅವರಿಗೆ ಮೈಸೂರು ಭಾಗದ ಜನರು ಕೂರಿಸುವಂತೆ ನವರಾತ್ರಿಯಲ್ಲಿ ಗೊಂಬೆ ಕೂರಿಸುವ ಆಸೆ ಆಯ್ತಂತೆ. ಹೀಗಾಗಿ ಅವರು ಮೈಸೂರು, ಚನ್ನಪಟ್ಟಣ, ಬೆಂಗಳೂರು ಭಾಗಗಳಲ್ಲಿ ಅಡ್ಡಾಡೋವಾಗ ಗೊಂಬೆಗಳನ್ನ ಖರೀದಿ ಮಾಡಿ ತಂದಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲು ದಸರಾ ಗೊಂಬೆ ಟ್ರೆಂಡ್ ಆಗಿ ಮಾರ್ಪಟ್ಟಿವೆ.

45

ವಿಜಯಾ ಅವರು ರಾಮಾಯಣ, ಮಹಾಭಾರತ, ಪುರಾಣ-ಪುಣ್ಯ ಕಥೆಗಳನ್ನ ಹೇಳುವ ಗೊಂಬೆಗಳನ್ನ ತಂದು ಪೌರಾಣಿಕ ಕಥೆಗಳ ಸಿಕ್ವೆನ್ಸ್‌ಗೆ ತಕ್ಕಂತೆ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ಮನೆಗೆ ಹಬ್ಬದಂದು ಗೊಂಬೆ ನೋಡಲು ಬರುವವರಿಗೆ ಈ ಗೊಂಬೆಗಳು ಪೌರಾಣಿಕ ಕಥೆಯನ್ನ ಸಾರಿಸಾರಿ ಹೇಳುವಂತಿವೆ. ಅದ್ರಲ್ಲು ದಸರಾ ಗೊಂಬೆ ಕೂರಿಸಿರುವ ವಿಷಯ ತಿಳಿದು ನೋಡಲು ಜತ್ತಿ ಅವರ ಮನೆಗೆ ಬರ್ತಿರೋರಿಗೆ, ಗೊಂಬೆ ಪ್ರೀಯರಿಗೆ ಗೊಂಬೆಗಳೇ ಸ್ವತಃ ಮನ ಮುಟ್ಟುವಂತೆ ಕಥೆ ಹೇಳ್ತಿವೆ ಏನೋ ಎಂದೆನಿಸುತ್ತಿದೆಯಂತೆ.  ಸೀತಾರಾಮರ ಕಲ್ಯಾಣ, ಬಿಂಬಿಸುವ ಥೀಮ್, ಲವಕುಶರ ತೊಟ್ಟಿಲು ಶಾಸ್ತ್ರ, ರಾವಣ, ಕುಂಭಕರ್ಣ  ಕಥೆಯನ್ನು ಗೊಂಬೆಗಳ ಮೂಲಕ ಹೊರತಂದಿದ್ದಾರೆ. 

55

ನವರಾತ್ರಿಯ 9 ದಿನಗಳ ಕಾಲ ಗೊಂಬೆಗಳ ಅಲಂಕಾರವಲ್ಲದೇ ಘಟಸ್ಥಾಪನೆಯಿಂದ ವಿಜಯದಶಮಿಯ ವರೆಗೆ ದೇವಿಯ ಪಾರಾಯಣ ನಡೆಯುತ್ತದೆ. ಇನ್ನೂ ಗೊಂಬೆಗಳ ಅಲಂಕಾರ ವೀಕ್ಷಿಸಲು ಅಗಮಿಸುವ ಮಹಿಳೆಯರು ವಿಜಯಾ ಇವರು ಸಂಯೋಜಿಸಿ ರುವ ಗೊಂಬೆಗಳನ್ನು ಕಣ್ತುಂಬಿ ಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.  ಇನ್ನು ಈ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗೊಂಬೆ ಕೂರಿಸೋದು ಅಪರೂಪ. ಹೀಗಾಗಿ ವಿಜಯಪುರ ನಗರದ ಹಲವು ಕಡೆಗಳಿಂದ ಜನರು ಗೊಂಬೆ ನೋಡಲು ಜತ್ತಿಯವರ ಮನೆಗೆ ಹೋಗ್ತಿದ್ದಾರೆ‌. ಮುಂದಿನ ವರ್ಷ ದಸರಾ ಹಬ್ಬಕ್ಕೆ ತಮ್ಮ ಮನೆಗಳಲ್ಲು ಗೊಂಬೆ ಕೂರಿಸುವುದಾಗಿ ಹೇಳ್ತಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಸರಾ
ವಿಜಯಪುರ

Latest Videos
Recommended Stories
Recommended image1
'ಭೀಕರ ಬರಗಾಲದಲ್ಲಿ ಒಂದೇ ಪೂಜೆಗೆ 5 ಗಂಟೆ ಸುರಿದಿತ್ತು ಮಳೆ!': ರಂಗನಾಥನ ಪವಾಡ ಬಿಚ್ಚಿಟ್ಟ ದೇವೇಗೌಡರು!
Recommended image2
ಧೃತಿ+ಸುಕರ್ಮ+ಶೂಲ ಯೋಗ; ಶನಿ ಕೃಪೆಯಿಂದ 5 ರಾಶಿಗಳಿಗೆ ಅನಿರೀಕ್ಷಿತ ಪ್ರಗತಿ, ಯಶಸ್ಸು
Recommended image3
ರಕ್ಷಾ ಬಂಧನಕ್ಕೆ ಉದ್ಯಮಿ ಅಣ್ಣನಿಂದ ತಂಗಿಗೆ 5 ಕೋಟಿ ರೂ. ಭರ್ಜರಿ ಕಾರು ಗಿಫ್ಟ್​: ಜಾಲತಾಣದಲ್ಲಿ ಇವರದ್ದೇ ಹವಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved