- Home
- Astrology
- Festivals
- Chanakya Niti: ಇಂತಹ ಜೀವನ ಸಂಗಾತಿ ಸಿಕ್ರೆ ನಿಮ್ಮ ದಾಂಪತ್ಯ ಜೀವನ ನರಕಕ್ಕಿಂತಲೂ ಕಡೆಯಾಗುತ್ತೆ
Chanakya Niti: ಇಂತಹ ಜೀವನ ಸಂಗಾತಿ ಸಿಕ್ರೆ ನಿಮ್ಮ ದಾಂಪತ್ಯ ಜೀವನ ನರಕಕ್ಕಿಂತಲೂ ಕಡೆಯಾಗುತ್ತೆ
ಜೀವನದ ಕೆಲವೊಂದು ಅಭ್ಯಾಸಗಳು ಗಂಡ ಹೆಂಡತಿಯ ನಡುವಿನ ಸಂಬಂಧ ಹಾಳಾಗಿ ಹೋಗುವಂತೆ ಮಾಡುತ್ತೆ, ಆ ಅಭ್ಯಾಸಗಳ ಬಗ್ಗೆ ಚಾಣಕ್ಯ ನೀತಿ ಏನು ಹೇಳಿದೆ ಇಲ್ಲಿದೆ ಮಾಹಿತಿ.

ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯನ ಜೀವನಕ್ಕೆ ಸಂಬಂಧಿಸಿದ ಅನುಭವಗಳ ಸಂಗ್ರಹವಾಗಿದೆ, ಇದರಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ. ಇದು ಜೀವನದ ಪ್ರತಿಯೊಂದು ತಿರುವಿನಲ್ಲಿಯೂ ಉಪಯುಕ್ತವಾಗಿದೆ. ಚಾಣಕ್ಯ ನೀತಿಯು (Chanakya Niti) ಪತಿ ಮತ್ತು ಪತ್ನಿಗಾಗಿ ಕೆಲವು ಸೂತ್ರಗಳನ್ನು ಹೊಂದಿದೆ, ಅದನ್ನು ಅನುಸರಿಸದಿರುವುದು ಜೀವನವನ್ನು ಹಾಳು ಮಾಡುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಜೀವನ ಸಂಗಾತಿಯ ಕೆಲವು ಅಭ್ಯಾಸಗಳು ಜೀವನವನ್ನು ಕೆಟ್ಟದಾಗಿ ಮಾಡುತ್ತವೆ.
ದುರಹಂಕಾರಿ ಸ್ವಭಾವ
ಜೀವನ ಸಂಗಾತಿಯು ದುರಹಂಕಾರಿಯಾಗಿದ್ದರೆ ಜೀವನದಲ್ಲಿ ದುಃಖ ಮತ್ತು ತೊಂದರೆಗಳು ಮಾತ್ರ ಇರುತ್ತವೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಒಬ್ಬ ವ್ಯಕ್ತಿಯು ದುರಹಂಕಾರಿಯಾಗಿದ್ದಾಗ (egoist),ಅವರು ತನ್ನ ಮುಂದೆ ಯಾರಿದ್ದಾರೆ ಅನ್ನೋದನ್ನೆ ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ಇದರಿಂದಾಗಿ ಸಂಬಂಧ ಹದಗೆಡುತ್ತದೆ.
ಜಗಳ ಸ್ವಭಾವ
ಚಾಣಕ್ಯ ನೀತಿಯ ಪ್ರಕಾರ, ಗಂಡ ಅಥವಾ ಹೆಂಡತಿ ಸ್ವಭಾವತಃ ಜಗಳವಾಡುವವರಾಗಿದ್ದರೆ, (fighting couple) ಸಂಗಾತಿಗಳು ಒಟ್ಟಿಗೆ ಜೀವನ ಕಳೆಯುವುದು ತುಂಬಾ ಕಷ್ಟಕರವಾಗುತ್ತದೆ. ಜಗಳ ಸ್ವಭಾವದಿಂದಾಗಿ, ಜೀವನದಲ್ಲಿ ಸಂತೋಷ ಮತ್ತು ಶಾಂತಿ ಕೊನೆಗೊಳ್ಳುತ್ತದೆ ಮತ್ತು ಪ್ರತಿದಿನ ಜಗಳ ನಡೆಯುತ್ತೆ.
chankya niti
ದುಂದು ವೆಚ್ಚದ ಸ್ವಭಾವ
ನಿಮ್ಮ ಜೀವನ ಸಂಗಾತಿ ದುಂದು ವೆಚ್ಚ ಮಾಡುವವರಾಗಿದ್ದರೆ, ಇದು ಕೂಡ ತಪ್ಪು ಏಕೆಂದರೆ ಹಣವನ್ನು ಯಾವಾಗಲೂ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಯಾವುದೇ ಕಾರಣವಿಲ್ಲದೆ ಹಣವನ್ನು ಖರ್ಚು ಮಾಡುವುದು (wasting money) ಅಗತ್ಯದ ಸಮಯದಲ್ಲಿ ಇತರರ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ಕಾರಣವಾಗುತ್ತದೆ.
chankya niti
ಅನುಮಾನದ ಅಭ್ಯಾಸ
ಚಾಣಕ್ಯ ನೀತಿಯ ಪ್ರಕಾರ, ಅನುಮಾನಿಸುವ (doubting) ಅಭ್ಯಾಸವು ಉತ್ತಮ ಜೀವನವನ್ನು ನರಕವನ್ನಾಗಿ ಮಾಡುತ್ತದೆ. ಅನುಮಾನಾಸ್ಪದ ಸ್ವಭಾವದಿಂದಾಗಿ, ಜನರು ತಮ್ಮ ನೆಮ್ಮದಿಯ ಮನೆಯನ್ನು ಹಾಳುಮಾಡುತ್ತಾರೆ. ಗಂಡ ಅಥವಾ ಹೆಂಡತಿಯಲ್ಲಿ ಯಾರಿಗಾದರೂ ಅನುಮಾನಿಸುವ ಅಭ್ಯಾಸವಿದ್ದರೆ, ಮನೆಯ ಸಂತೋಷವು ನಾಶವಾಗುತ್ತದೆ.