MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಥೇಟ್ ಅಮ್ಮನಂತೆಯೇ ಕಾಳಜಿ ವಹಿಸೋ ರಾಶಿಗಳಿವು!

ಥೇಟ್ ಅಮ್ಮನಂತೆಯೇ ಕಾಳಜಿ ವಹಿಸೋ ರಾಶಿಗಳಿವು!

ಬೂಟಾಟಿಕೆಯ ಕಾಳಜಿ ಎಲ್ಲರೂ ತೋರಿಸ್ತಾರೆ, ಆದ್ರೆ ನಿಜವಾಗಿ ಆರೈಕೆ ಮಾಡೋಕೆ ಯಾರು ರೆಡಿ ಇರೋದಿಲ್ಲ. ಅಂತದ್ರಲ್ಲಿ ಈ ಐದು ರಾಶಿಯ ಜನರು ಕಾಳಜಿ ವಹಿಸೋದ್ರಲ್ಲಿ ಸದಾ ಮುಂದಿರ್ತಾರೆ. ಆ ರಾಶಿ ಯಾವುದು ಅನ್ನೋದನ್ನ ತಿಳಿಯೋಣ.  

2 Min read
Author : Pavna Das
Published : Jul 19 2024, 05:08 PM IST
Share this Photo Gallery
  • FB
  • TW
  • Linkdin
  • Whatsapp
16

ಪ್ರತಿಯೊಬ್ಬ ವ್ಯಕ್ತಿಯ ಗುಣ ಸ್ವಭಾವ ಎಲ್ಲವೂ ಅವರು ಹುಟ್ಟಿದ ದಿನ, ರಾಶಿ ಮೇಲೆ  ಬದಲಾಗುತ್ತೆ. ರಾಶಿ ಬದಲಾದಂತೆ ವ್ಯಕ್ತಿಯಿಂದ ವ್ಯಕ್ತಿಗೆ ವ್ಯಕ್ತಿತ್ವ ಬದಲಾಗುತ್ತೆ. ಆದ್ರೆ ಈ 12 ರಾಶಿಗಳಲ್ಲಿ ಅತ್ಯಂತ ಕಾಳಜಿ ವಹಿಸುವ ರಾಶಿಗಳು ಐದು ಮಾತ್ರ. ಆ ರಾಶಿಯವರು (Zodiac sign) ನಿಮ್ ಜೀವನದಲ್ಲಿ ಸಿಕ್ರೆ ನೀವೇ ಭಾಗ್ಯವಂತರು. ಹಾಗಿದ್ರೆ ಆ ಐದು ರಾಶಿಗಳು ಯಾವುವು?

26

ಕರ್ಕಾಟಕ ರಾಶಿ (Cancer)
ಈ ರಾಶಿಯಲ್ಲಿ ಜನರನ್ನು ಹೆಚ್ಚಾಗಿ ಕಾಳಜಿ ಮತ್ತು ಕೇರಿಂಗ್ ಮಾಡೋ ಜನರಾಗಿರ್ತಾರೆ. ಚಂದ್ರನಿಂದ ಆಳಲ್ಪಡುವ ಈ ಜನರು ತುಂಬಾ ಬುದ್ದಿವಂತರು ಮತ್ತು ಇತರ ಜನರ ಅಗತ್ಯಗಳಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗ್ತಾರೆ. ಇತರರನ್ನು ಚೆನ್ನಾಗಿ ನೋಡಿಕೊಳ್ಳುವಲ್ಲಿ, ಸುರಕ್ಷಿತವಾಗಿರಿಸುವಲ್ಲಿ, ಪ್ರೀತಿಯಿಂದ ನೋಡಿಕೊಳ್ಳುವಲ್ಲಿ ಇವರು ಸದಾ ಮುಂದಿರುತ್ತಾರೆ.  ಇವರು ಎಲ್ಲಾದಕ್ಕಿಂತ ಮುಖ್ಯವಾಗಿ ತಮ್ಮವರು ಚೆನ್ನಾಗಿರಬೇಕೆಂದು ಬಯಸ್ತಾರೆ. 
 

36

ಮೀನಾ ರಾಶಿ (Pisces)
ಮೀನ ರಾಶಿಯವರು ತಮ್ಮ ಅನುಭೂತಿ ಮತ್ತು ಸಹಾನುಭೂತಿ ಸ್ವಭಾವಕ್ಕೆ ಹೆಸರುವಾಸಿ. ಈ ರಾಶಿಯವರಿಗೆ ಮಾನವ ಸ್ವಭಾವದ ಬಗ್ಗೆ ಆಳವಾದ ತಿಳುವಳಿಕೆ ಇರುತ್ತದೆ. ಅವರು ಇತರರ ಭಾವನೆಗಳಿಗೆ ಹೆಚ್ಚು ಬೇಗ ಸ್ಪಂದಿಸುತ್ತಾರೆ. ನೋವಲ್ಲಿರುವವರಿಗೆ ಸಾಂತ್ವಾನ ನೀಡುವಲ್ಲಿ ಮುಂದಿರುತ್ತಾರೆ.  ಮೀನ ರಾಶಿಯವರು ತಮ್ಮ ನಿಸ್ವಾರ್ಥತೆ, ದಯೆಯಿಂದಾಗಿ ಅಗತ್ಯವಿರುವವರಿಗೆ ಸಹಾಯ ಮತ್ತು ಬೆಂಬಲ ನೀಡುವ ಇವರ ಗುಣ ಎಲ್ಲೆಲ್ಲೂ ಜನಪ್ರಿಯ ಪಡೆದಿದೆ.

 

46

ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರನ್ನು ಚಿನ್ನದ ಹೃದಯವರು ಅಂತಾರೆ. ಇವರು ಎಷ್ಟೊಂದು ಮೃದು ಎಂದರೆ, ಪ್ರತಿಯೊಂದು ಜೀವಿಗಾಗಿಯೂ ಇವರ ಹೃದಯ ಮಿಡಿಯುತ್ತದೆ. ಕಷ್ಟದಲ್ಲಿರೋರಿಗೆ ಸಹಾಯ ಮಾಡಲು ಇವರು ಯಾವಾಗಲೂ ಮುಂದೆ.. ಇನ್ನೊಬ್ಬರ ಕಷ್ಟಕ್ಕೆ ತಾವು ಕಣ್ಣೀರು ಮಿಡಿಯುವ ಈ ರಾಶಿಯವರು ಅವರ ಸಹಾಯಕ್ಕೂ ಜೊತೆಯಾಗಿ ನಿಲ್ಲುತ್ತಾರೆ. 

 

56

ತುಲಾ ರಾಶಿ (Libra)
ತುಲಾ ರಾಶಿಯವರು ತಮ್ಮ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು (Balance and Harmony) ಇಷ್ಟಪಡುತ್ತಾರೆ - ಅದು ವೃತ್ತಿಪರವಾಗಿರಲಿ ಅಥವಾ ವೈಯಕ್ತಿಕ ಜೀವನವಾಗಿರಲ್ಲಿ ಎಲ್ಲಾ ಕಡೆಯೂ ಸಾಮರಸ್ಯ ಇರಬೇಕು ಎಂದು ಬಯಸುವವರು ಇವರು. ಅವರ ಈ ಗುಣವೇ ಅವರಿಗೆ ಇತರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುವಂತೆ ಮಾಡುತ್ತದೆ. ಇತರರನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಈ ಜನರು ಯಾವಾಗಲೂ ಸಾಮರಸ್ಯಕ್ಕೆ ಹೆಚ್ಚು ಬೆಂಬಲ ನೀಡುತ್ತಾರೆ. 

66

ವೃಷಭ ರಾಶಿ (Taurus)
ಈ ರಾಶಿಯಲ್ಲಿ ಜನಿಸಿದ ಜನರು ಹಠಮಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರೂ, ಅವರು ಇಷ್ಟಪಡುವ ಮತ್ತು ಗೌರವಿಸುವ ಜನರ ಬಗ್ಗೆ ತುಂಬಾ ಕಾಳಜಿ ಮತ್ತು ಪ್ರೀತಿಯನ್ನು ಹೊಂದಿರುತ್ತಾರೆ. ಪ್ರೀತಿ ಮತ್ತು ಸಂತೋಷದ ಗ್ರಹವಾದ ಶುಕ್ರ ಗ್ರಹ ವೃಷಭರಾಶಿಯನ್ನು ಆಳೋದರಿಂದ ಈ ರಾಶಿಯವರು ಯಾವಾಗ್ಲೂ ಎಲ್ಲರಲ್ಲೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವೃಷಭ ರಾಶಿ
ತುಲಾ ರಾಶಿ
ಕನ್ಯಾ ರಾಶಿ
ಕ್ಯಾನ್ಸರ್

Latest Videos
Recommended Stories
Recommended image1
ಮನೆಯಲ್ಲಿ ಶಾಂತಿ ಇಲ್ವಾ? ಈ ಗಿಡವನ್ನಿಟ್ಟು ನೋಡಿ
Recommended image2
ವಸಂತ ಪಂಚಮಿಯಿಂದ 4 ರಾಶಿಗೆ ಹೊಸ ಮನೆ, ಬುಧನ ಸಂಚಾರದಿಂದ ಅದೃಷ್ಟ
Recommended image3
ಸೂರ್ಯನ ಉತ್ತರಾಯಣದಲ್ಲಿ ಅದೃಷ್ಟ ಮರಳಲಿದೆ, ಬುಧವಾರದಿಂದ ಮುಂದಿನ 6 ತಿಂಗಳಲ್ಲಿ 5 ರಾಶಿಗೆ ದೊಡ್ಡ ಲಾಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved