ನವರಾತ್ರಿ ಸಮಯದಲ್ಲಿ ಮದುವೆ ಯಾಕೆ ನಡೆಯೋದಿಲ್ಲ? ಇಲ್ಲಿದೆ ಸಂಪೂರ್ಣ ವಿವರ
ಪಿತೃಪಕ್ಷದ ಅಂತ್ಯದ ನಂತರ, ನವರಾತ್ರಿ ಹಬ್ಬವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ದುರ್ಗಾ ಮಾತೆಯನ್ನು ಪೂಜಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಆದರೆ ಈ ಶುಭ ಸಮಯದಲ್ಲಿ ಯಾರೂ ಸಹ ಮದುವೆ ಆಗೋದಿಲ್ಲ. ಯಾಕೆ ಗೊತ್ತಾ?
ಹಿಂದೂ ಕ್ಯಾಲೆಂಡರ್ (Hindu Calender) ಪ್ರಕಾರ, ನವರಾತ್ರಿ ಹಬ್ಬವು ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿದೆ. ನವರಾತ್ರಿಯ ಈ ಶುಭ ದಿನಗಳಲ್ಲಿ, ದುರ್ಗಾ ಮಾತೆಯ ಒಂಬತ್ತು ರೂಪಗಳನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಪಿತೃಪಕ್ಷದಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ, ಆದರೆ ಎಲ್ಲಾ ಶುಭ ಕಾರ್ಯಗಳು ನವರಾತ್ರಿಯಿಂದಲೇ ಪ್ರಾರಂಭವಾಗುತ್ತವೆ. ಈ ಸಮಯದಲ್ಲಿ, ಭೂಮಿ ಪೂಜೆ, ಗೃಹ ಪ್ರವೇಶ, ಮುಂಡನ್, ಪೂಜಾ ಆಚರಣೆಗಳನ್ನು ಆಯೋಜಿಸಲಾಗುತ್ತದೆ. ಅಂದಹಾಗೆ, ನವರಾತ್ರಿಯಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ, ಆದರೆ ಈ ದಿನಗಳಲ್ಲಿ ಮದುವೆಗಳು ನಡೆಯುವುದಿಲ್ಲ. ಅಷ್ಟಕ್ಕೂ, ನವರಾತ್ರಿಯಂತಹ (Navratri) ಪವಿತ್ರ ಹಬ್ಬದಂದು ಮದುವೆ ಏಕೆ ನಡೆಯುವುದಿಲ್ಲ?
ಈ ಲೇಖನದಲ್ಲಿ, ನವರಾತ್ರಿಯಲ್ಲಿ ಮದುವೆಯನ್ನು (marriage) ಏಕೆ ಮಾಡಬಾರದು ಮತ್ತು ಈ ಸಮಯದಲ್ಲಿ ಯಾವ ಕೆಲಸಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಹಿರಿಯ ಜ್ಯೋತಿಷ್ಯರು ತಿಳಿಸಿದ್ದಾರೆ. ಅವರು ಈ ಬಗ್ಗೆ ಏನು ಹೇಳುತ್ತಾರೆ ಅನ್ನೋದನ್ನು ನೋಡೋಣ.
ನವರಾತ್ರಿಯ ಮದುವೆ ಅಶುಭ.
ಧಾರ್ಮಿಕ ಗ್ರಂಥಗಳ ಪ್ರಕಾರ, ನವರಾತ್ರಿಯ ಸಮಯದಲ್ಲಿ ದುರ್ಗಾ ಮಾತೆಯು ತನ್ನ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾಳೆ. ಈ ಸಮಯದಲ್ಲಿ, ಜನರು ದೈಹಿಕ ಮತ್ತು ಮಾನಸಿಕ ಶುದ್ಧ ಮನಸಿನಿಂದ ಪೂಜೆ ಮಾಡುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ನವರಾತ್ರಿಯ ಸಮಯದಲ್ಲಿ ಮದುವೆಯಾಗೋದು ಅಶುಭ ಎನ್ನಲಾಗತ್ತೆ. ಯಾಕೆಂದ್ರೆ ಈ ಸಮಯದಲ್ಲಿ ಸತಿ -ಪತಿ ಜೊತೆಯಾಗಿರೋದು, ದೈಹಿಕ ಸಂಬಂಧ (physical relationship) ಬೆಳೆಸುವುದು ತಪ್ಪೆಂದು ಹೇಳಲಾಗುತ್ತೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಬ್ರಹ್ಮಚರ್ಯವನ್ನು ಅನುಸರಿಸಬೇಕು.
ಆಲ್ಕೋಹಾಲ್ ಸೇವಿಸಲೇಬೇಡಿ
ನವರಾತ್ರಿಯ ಒಂಬತ್ತು ದಿನಗಳನ್ನು ಬಹಳ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಇದರಲ್ಲಿ, ಜನರು ಇಡೀ 9 ದಿನಗಳವರೆಗೆ ಉಪವಾಸ ಮಾಡುತ್ತಾರೆ, ಆದರೆ ನಿಮಗೆ ಉಪವಾಸ ಮಾಡಲು ಸಾಧ್ಯವಾಗದಿದ್ದರೆ, ಈ ಸಮಯದಲ್ಲಿ ಆಲ್ಕೋಹಾಲ್ (alcohol), ತಂಬಾಕು ಮುಂತಾದ ಮಾದಕವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ, ದುರ್ಗಾ ಮಾತೆ ಕೋಪಗೊಳ್ಳಬಹುದು.
ಸಾತ್ವಿಕ ಆಹಾರ ಸೇವಿಸಿ
ನವರಾತ್ರಿಯಲ್ಲಿ, ತಮಸಿಕ್ ಆಹಾರವನ್ನು ಸೇವಿಸಲೇಬಾರದು. ಇದು ದುರ್ಗಾ ಮಾತೆಗೆ ಕೋಪ ತರಬಹುದು. ಈರುಳ್ಳಿ (Onion) ಮತ್ತು ಬೆಳ್ಳುಳ್ಳಿಯನ್ನು (Garlic) ಸಹ ಈ ಸಮಯದಲ್ಲಿ ಸೇವಿಸಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಸುಳ್ಳು ತಪ್ಪಿಸಿ
ನವರಾತ್ರಿಯ ಶುಭ ದಿನದಂದು ಸುಳ್ಳು ಹೇಳುವುದನ್ನು ತಪ್ಪಿಸಬೇಕು. ನಿಮ್ಮ ಮಾತಿನ ಮೇಲೆ ಸಂಯಮವಿರಲಿ. ಯಾರಿಗೂ ಸುಳ್ಳು ಹೇಳಬೇಡಿ. ಇದು ವ್ಯಕ್ತಿಗೆ ನೋವುಂಟು ಮಾಡುತ್ತದೆ.
ಹಗಲಲ್ಲಿ ಮಲಗಬೇಡಿ
ಮದುವೆಯ ಹೊರತಾಗಿ, ನವರಾತ್ರಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ವಿಷ್ಣು ಪುರಾಣದ ಪ್ರಕಾರ, ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಉಪವಾಸ ಮಾಡುವ ಜನರು ಹಗಲಿನಲ್ಲಿ ಮಲಗುವುದನ್ನು ತಪ್ಪಿಸಬೇಕು. ನಿದ್ರೆಯು ಉಪವಾಸದ ಪೂರ್ಣ ಫಲವನ್ನು ನೀಡುವುದಿಲ್ಲ ಎಂದು ನಂಬಲಾಗಿದೆ.