Birth Date: ಈ ದಿನಾಂಕಗಳಲ್ಲಿ ಜನಿಸಿದವರನ್ನು ಯಾರೂ ಇಷ್ಟಪಡುವುದಿಲ್ಲ..!
ಕೆಲವರು ಏನ್ ಮಾಡಿದ್ರೂ ನಮಗೆ ಇಷ್ಟ ಆಗಲ್ಲ. ಅವ್ರು ಮಾಡೋ ಯಾವ ಪ್ರಯತ್ನನೂ ಚೆನ್ನಾಗಿ ಅನ್ಸಲ್ಲ. ಅವ್ರು ಎಷ್ಟೇ ಒಳ್ಳೆಯವರಾದ್ರೂ ಅರ್ಥ ಮಾಡ್ಕೊಳ್ಳೋಕೆ ಟ್ರೈ ಮಾಡಲ್ಲ.

ಜೀವನದಲ್ಲಿ ನಮಗೆ ತುಂಬ ಜನ ಸಿಗ್ತಾರೆ. ಅವ್ರಲ್ಲಿ ಕೆಲವರು ತುಂಬಾ ಕಡಿಮೆ ಸಮಯದಲ್ಲೇ ನಮ್ಮ ಮನಸ್ಸು ಗೆಲ್ತಾರೆ. ಮನಸ್ಸಿಗೆ ಇಷ್ಟ ಆದವ್ರು ಏನ್ ಮಾಡಿದ್ರೂ ನಮಗೆ ಓಕೆ ಅನ್ಸುತ್ತೆ. ಆದ್ರೆ, ಕೆಲವರು ಏನ್ ಮಾಡಿದ್ರೂ ನಮಗೆ ಇಷ್ಟ ಆಗಲ್ಲ. ಅವ್ರು ಮಾಡೋ ಯಾವ ಪ್ರಯತ್ನನೂ ಚೆನ್ನಾಗಿ ಅನ್ಸಲ್ಲ. ಅವ್ರು ಎಷ್ಟೇ ಒಳ್ಳೆಯವರಾದ್ರೂ ಅರ್ಥ ಮಾಡ್ಕೊಳ್ಳೋಕೆ ಟ್ರೈ ಮಾಡಲ್ಲ. ನ್ಯೂಮರಾಲಜಿ ಪ್ರಕಾರ ಕೆಲವು ದಿನಾಂಕದಲ್ಲಿ ಹುಟ್ಟಿದವ್ರನ್ನ ಜಾಸ್ತಿ ಜನ ಇಷ್ಟ ಪಡಲ್ಲ. ಅವ್ರು ಏನ್ ಮಾಡಿದ್ರೂ ಬೇಜಾರ್ ಮಾಡ್ಕೊಳ್ತಾರೆ.
4, 13, 22
ಈ ದಿನಾಂಕಗಳಲ್ಲಿ ಹುಟ್ಟಿದವರು ರಾಹುವಿನ ಪ್ರಭಾವದಲ್ಲಿ ಇರ್ತಾರೆ ಅಂತಾರೆ. ಇವ್ರಿಗೆ ಸ್ವತಂತ್ರವಾಗಿ ಯೋಚ್ನೆ ಮಾಡೋ ಶಕ್ತಿ ತುಂಬ ಜಾಸ್ತಿ ಇರುತ್ತೆ. ಯಾವುದಕ್ಕೂ ಹೆದರಲ್ಲ. ತುಂಬಾ ಸಾಹಸಿಗಳಾಗಿರುತ್ತಾರೆ. ತಾವು ಆಯ್ಕೆ ಮಾಡ್ಕೊಂಡ ದಾರಿಯಲ್ಲಿ ಮುಂದೆ ಹೋಗೋಕೆ ಯಾರ ಸಹಾಯವನ್ನೂ ಬಯಸಲ್ಲ. ಆದ್ರೆ ಇವ್ರ ಗೆಲುವುಗಳು ಕೆಲವರಲ್ಲಿ ಅಸೂಯೆ ಹುಟ್ಟು ಹಾಕಬಹುದು. ಇದು ಅವ್ರನ್ನ ಒಂಟಿ ಅನ್ಸೋ ಹಾಗೆ ಮಾಡುತ್ತೆ. ಇವ್ರ ಧೈರ್ಯ ನೋಡಿ ಎಲ್ಲರೂ ಬೇಜಾರ್ ಮಾಡ್ಕೊಳ್ತಾರೆ. ಅದಕ್ಕೆ, ಜಾಸ್ತಿ ಜನ ಇವ್ರನ್ನ ಇಷ್ಟ ಪಡಲ್ಲ.
8, 17, 26
ಶನಿ ಗ್ರಹದ ಪ್ರಭಾವ ಇರೋ ಈ ದಿನಾಂಕದವರು ನಿಜಾಯಿತಿ ಪರುಗಳು, ಸುಮ್ನೆ ಎಲ್ಲವನ್ನೂ ಸಹಿಸ್ಕೊಳ್ಳೋರು. ಚಿಕ್ಕ ಚಿಕ್ಕ ಗೆಲುವಿಗೂ ತುಂಬ ಕಷ್ಟ ಪಡಬೇಕಾಗುತ್ತೆ. ಅವ್ರು ಯಾವಾಗ್ಲೂ ನ್ಯಾಯದ ಪರ ಇರ್ತಾರೆ ಆದ್ರೆ ಪ್ರಪಂಚ ಅವ್ರು ಬಯಸಿದ ಹಾಗೆ ಸ್ಪಂದಿಸಲ್ಲ. ಇದು ಅವ್ರನ್ನ ಒಳಗಡೆ ಬಾಧಿಸ್ಬಹುದು.
9, 18, 27
ಈ ದಿನಾಂಕದವರು ಮಂಗಳನ ಪ್ರಭಾವದಲ್ಲಿ ಇರ್ತಾರೆ. ಧೈರ್ಯ, ಸ್ಪಷ್ಟತೆ ಇವ್ರ ಗುಣಗಳು. ಸತ್ಯಕ್ಕಾಗಿ ಯಾವಾಗ್ಲೂ ನಿಲ್ತಾರೆ. ಆದ್ರೆ ಇವ್ರ ನೇರ ಸ್ವಭಾವವು
ಕೆಲವರ ಜೊತೆ ಸಂಬಂಧ ಬೆಳೆಸಿಕೊಳ್ಳದ ಹಾಗೆ ಮಾಡುತ್ತೆ. ಶತ್ರುತ್ವ ಬಂದ್ರೂ ಹಿಂದೆ ಸರಿಯಲ್ಲ.
ಕೊನೆಯದಾಗಿ...
ಹುಟ್ಟಿದ ದಿನಾಂಕದ ಆಧಾರದ ಮೇಲೆ ನಮ್ಮ ಸ್ವಭಾವ ಅಂದಾಜು ಮಾಡಬಹುದು. ಆದ್ರೆ ಇದು ನಮಗೆ ದಾರಿ ತೋರಿಸಿದ್ರೆ ಒಳ್ಳೇದು ಆದ್ರೆ, ಪೂರ್ತಿ ಅದನ್ನೇ ನಂಬೋದು ಒಳ್ಳೇದಲ್ಲ. ನಮ್ಮ ಜೀವನ ತುಂಬ ಅನುಭವಗಳಿಂದ ರೂಪಿತವಾಗುತ್ತೆ. ಈ ಸಂಖ್ಯಾಶಾಸ್ತ್ರದ ವಿಷಯಗಳು ಆ ದಾರಿಯಲ್ಲಿ ಸ್ವಲ್ಪ ಬೆಳಕು ನೀಡಬಲ್ಲವು.
ಗಮನಿಸಿ.. ಇದು ಸಂಖ್ಯಾಶಾಸ್ತ್ರ ಆಧರಿಸಿ ಮಾಡಿದ ಮಾಹಿತಿ ಮಾತ್ರ. ದಯವಿಟ್ಟು ವೈಯಕ್ತಿಕ ನಿರ್ಧಾರಗಳಿಗೆ ತಜ್ಞರ ಸಲಹೆ ಪಡೆಯೋದು ಒಳ್ಳೇದು.