Chanakya Niti : ಜೀವನದ ಅತಿದೊಡ್ಡ ಪಾಠ ತಿಳಿದ್ರೆ, ನೀವು ಸೋಲೋದಿಲ್ಲ
ಚಾಣಕ್ಯನ ನೀತಿಗಳು ಉತ್ತಮ ಜೀವನಕ್ಕೆ ಬಹಳ ಉಪಯುಕ್ತವೆಂದು ಪರಿಗಣಿಸಲಾಗಿದೆ. ಅವುಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ತೊಂದರೆಗೊಳಗಾಗೋದಿಲ್ಲ.ಅವನು ಕಷ್ಟದ ಸಮಯದಲ್ಲಿ ಸೋಲೋದಿಲ್ಲ, ಆದರೆ ಅದರಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳುತ್ತಾನೆ.
ನಿಜವಾದ ಯಶಸ್ಸು(Success) ಇತರರನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತೆ ಎಂದು ಚಾಣಕ್ಯ ನೀತಿ ಹೇಳುತ್ತೆ, ಸಂಪತ್ತಿನ ದೇವತೆಯಾದ ಲಕ್ಷ್ಮಿ ಕೂಡ ಅಂತಹ ಜನರೊಂದಿಗೆ ಸಂತೋಷವಾಗಿರುತ್ತಾಳೆ. ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುವ ವ್ಯಕ್ತಿಯು ಎಂದಿಗೂ ಸಂತೋಷವಾಗಿರಲು ಅಥವಾ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯನ ಕೆಲವು ಅಮೂಲ್ಯ ಪದಗಳನ್ನು ಇಲ್ಲಿ ತಿಳಿಯಿರಿ.
ಚಾಣಕ್ಯ ನೀತಿಯ (Chanakya niti) ಪ್ರಕಾರ, ಒಬ್ಬ ವ್ಯಕ್ತಿ ಇತರರ ತಪ್ಪುಗಳಿಂದ ಕಲಿತಾಗ, ಅವನು ಎಂದಿಗೂ ಸೋಲೋದಿಲ್ಲ. ನಿಮ್ಮ ಮೇಲೆ ಪ್ರಯೋಗ ಮಾಡುವ ಮೂಲಕ ನೀವು ಕಲಿತರೆ, ವಯಸ್ಸು ಸಹ ಕಡಿಮೆಯಾಗುತ್ತೆ ಮತ್ತು ಸಂಘರ್ಷ ಹೆಚ್ಚಾಗುತ್ತೆ. ನೀವು ಯಶಸ್ಸನ್ನು ಸಾಧಿಸಲು ಬಯಸೋದಾದ್ರೆ, ಇತರರ ಅನುಭವವನ್ನು ತಿಳಿದುಕೊಳ್ಳಲು ಹಿಂಜರಿಯಬೇಡಿ.
ಒಂದೇ ಸ್ಥಾನಮಾನವನ್ನು ಹೊಂದಿರುವ ವ್ಯಕ್ತಿಯೊಂದಿಗೆ ಯಾವಾಗಲೂ ಸ್ನೇಹವನ್ನು(Friendship) ಮಾಡಬೇಕು ಎಂದು ಚಾಣಕ್ಯ ಹೇಳುತ್ತಾನೆ. ಅಂದರೆ ನಿಮ್ಮದೇ ಸ್ಥಾನ ಮಾನ ಹೊಂದಿರುವ ವ್ಯಕ್ತಿ. ಕಡಿಮೆ ಅಥವಾ ಹೆಚ್ಚು ಪ್ರತಿಷ್ಠೆ ಹೊಂದಿರುವವರ ಸ್ನೇಹವು ಹೆಚ್ಚು ಕಾಲ ಉಳಿಯೋದಿಲ್ಲ.
ಹಾವು, ಆಡು ಮತ್ತು ಹುಲಿಗಳು ಎಂದಿಗೂ ಪರಸ್ಪರ ಸ್ನೇಹಿತರಾಗಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ, ಒಬ್ಬರು ಎಂದಿಗೂ ವಿರುದ್ಧ ಸ್ವಭಾವದ ಜನರೊಂದಿಗೆ ಸ್ನೇಹಿತರಾಗಬಾರದು ಎಂದು ಚಾಣಕ್ಯ ನೀತಿ ಹೇಳುತ್ತೆ. ಇದರಿಂದ ಸಮಸ್ಯೆ(Problem) ಉಂಟಾಗುವ ಸಾಧ್ಯತೆ ಇದೆ ಆದುದರಿಂದ ಎಚ್ಚರವಹಿಸಿ.
ಜ್ಞಾನವನ್ನು(Wisdom) ಗಳಿಸೋದು ಪ್ರತಿ ಋತುವಿನಲ್ಲಿ ಮನುಷ್ಯನಿಗೆ ಅಮೃತವನ್ನು ಒದಗಿಸುವ ಕಾಮಧೇನು ಹಸುವಿನಂತೆ ಎಂದು ಚಾಣಕ್ಯನು ಹೇಳುತ್ತಾನೆ, ಆದ್ದರಿಂದ ಜ್ಞಾನವು ಲಭ್ಯವಾದಾಗಲೆಲ್ಲಾಅದನ್ನು ತುಂಬಾ ಉತ್ಸುಕರಾಗಿ ಕಲಿಯಿರಿ. ಯಾಕಂದ್ರೆ ಜ್ಞಾನವು ಎಂದಿಗೂ ವ್ಯರ್ಥವಾಗೋದಿಲ್ಲ.
ರಾಜನನ್ನು(King) ಎಲ್ಲೆಡೆ ಪೂಜಿಸಲಾಗುತ್ತೆ. ಅಂದರೆ, ರಾಜನ ವಿಚಾರಣೆಯನ್ನು ಅವನ ರಾಜ್ಯದಲ್ಲಿ ಮಾತ್ರ ಮಾಡಲಾಗುತ್ತೆ, ಆದರೆ ವಿದ್ವಾಂಸರನ್ನು ಎಲ್ಲಾ ಕ್ಷೇತ್ರಗಳಲ್ಲಿ ಪೂಜಿಸಲಾಗುತ್ತೆ. ಜ್ಞಾನವು ಅಂತಹ ಶಕ್ತಿಯಾಗಿದ್ದು, ಅದು ಬಿಕ್ಕಟ್ಟಿನಲ್ಲಿ ವ್ಯಕ್ತಿಯ ಅತಿದೊಡ್ಡ ಶಕ್ತಿಯಾಗುತ್ತೆ. ಜ್ಞಾನದಿಂದ ಯಾವುದೇ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತೆ.
ಚಾಣಕ್ಯನ ಪ್ರಕಾರ, ಧರ್ಮವನ್ನು ತ್ಯಾಗ ಮಾಡಬೇಕಾಗಿ ಬರುವ ಸ್ಥಿತಿಯಿಂದ ಬಂದಂತಹ ಹಣದಿಂದ (Money) ಯಾವುದೇ ಪ್ರಯೋಜನವಿಲ್ಲ, ಏಕೆಂದರೆ ಧರ್ಮವನ್ನು ಯಾವಾಗಲೂ ಹಣಕ್ಕಿಂತ ಹೆಚ್ಚಾಗಿ ಇಡಬೇಕು. ಹಾಗೆಯೇ, ದೊಡ್ಡ ಮೂರ್ಖತನವೆಂದರೆ ಹಣವನ್ನು ಗಳಿಸೋದಕ್ಕಾಗಿ ಶತ್ರುಗಳೊಂದಿಗೆ ರಾಜಿ ಮಾಡಿಕೊಳ್ಳೋದು ಸಹ ಒಳ್ಳೆಯದಲ್ಲ.