ಬಾಗಲಕೋಟೆ: ದಕ್ಷಿಣ ಕಾಶಿ ಮಹಾಕೂಟಕ್ಕೆ ಬಾಬಾ ರಾಮದೇವ್ ಭೇಟಿ, ಭಗವಂತನಿಗೆ ವಿಶೇಷ ಪೂಜೆ..!
ಬಾಗಲಕೋಟೆ(ಜು.12): ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ದಕ್ಷಿಣ ಕಾಶಿ, ಐತಿಹಾಸಿಕ ಮಹಾಕೂಟಕ್ಕೆ ಯೋಗಗುರು ಬಾಬಾ ರಾಮದೇವ್ ಭೇಟಿ ನೀಡಿದ್ದಾರೆ. ಎರಡು ದಿನಗಳ ಕಾಲ ಪೂಜಾ ಕೈಂಕರ್ಯಗಳಲ್ಲಿ ಬಾಬಾ ರಾಮದೇವ್ ಭಾಗಿಯಾಗಿದ್ದಾರೆ.
14

ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಮಹಾಕೂಟ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ಸುಕ್ಷೇತ್ರ ಮಹಾಕೂಟದಲ್ಲಿ ಕಳೆದ 6 ದಿನಗಳಿಂದ ಶಿವ ಕಲ್ಯಾಣೋತ್ಸವ ನಡೆಯುತ್ತಿದೆ.
24
ನಿನ್ನೆ(ಗುರುವಾರ) ಮಹಾಕೂಟೇಶ್ವರನಿಗೆ ಯೋಗಗುರು ಬಾಬಾ ರಾಮದೇವ್ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಮಹಾಕೂಟ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ.
34
ಸುಕ್ಷೇತ್ರ ಮಹಾಕೂಟದಲ್ಲಿ ನಡೆಯುತ್ತಿರುವ ಶಿವ ಕಲ್ಯಾಣೋತ್ಸವಕ್ಕೆ ಅಪಾರ ಭಕ್ತರು ಸಾಕ್ಷಿಯಾಗಿದ್ದಾರೆ. ಬಾಬಾ ರಾಮದೇವ್ ಬಂದಿರುವ ಸುದ್ದಿ ಕೇಳಿ ಮಹಾಕೂಟಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
44
ಇಂದು(ಶುಕ್ರವಾರ) ಶಿವ ಕಲ್ಯಾಣೋತ್ಸವ ನಡೆದ ಬಳಿಕ ಯೋಗಗುರು ಬಾಬಾ ರಾಮದೇವ್ ಅವರು ಹರಿದ್ವಾರಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
Latest Videos