ಮಂಗಳವಾರ ಈ ಕೆಲಸ ಮಾಡೋದ್ರಿಂದ ನಿಮ್ಮ ಎಲ್ಲಾ ಬಯಕೆಗಳು ಈಡೇರುತ್ತೆ!
ಸನಾತನ ಧರ್ಮದಲ್ಲಿ, ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ, ಹನುಮಂತನ ಪೂಜೆ ಮಾಡಲು ಕೆಲವು ಕ್ರಮಗಳನ್ನು ಸಹ ನೀಡಲಾಗಿದೆ. ಇದನ್ನು ಮಾಡುವುದರಿಂದ, ವ್ಯಕ್ತಿಯ ಎಲ್ಲಾ ಕೆಟ್ಟ ಫಲಗಳು ನಿವಾರಣೆಯಾಗಿ, ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ, ಮಂಗಳವಾರ ವಿಶೇಷ ಕ್ರಮ ಬಗ್ಗೆ ನೀಡಲಾಗಿದೆ ಅವುಗಳ ಬಗ್ಗೆ ತಿಳಿಯೋಣ.
ಸನಾತನ ಧರ್ಮದಲ್ಲಿ ಮಂಗಳವಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನವನ್ನು ಭಗವಾನ್ ಹನುಮಾನ್ (Lord Hanuman) ಗೆ ಅರ್ಪಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ, ಹನುಮಂತನನ್ನು ವಿಶೇಷವಾಗಿ ಪೂಜಿಸಲು ಸಹ ಕ್ರಮಗಳಿವೆ. ಇದನ್ನು ಮಾಡುವುದರಿಂದ, ವ್ಯಕ್ತಿಯ ಎಲ್ಲಾ ಕೆಟ್ಟ ಫಲಗಳು ದೂರಾಗಿ, ವ್ಯಕ್ತಿಯು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಅಲ್ಲದೇ ಜ್ಯೋತಿಷ್ಯದಲ್ಲಿ ಮಂಗಳವಾರ (Tuesday) ಕೆಲವೊಂದು ಕೆಲಸಗಳನ್ನು ಮಾಡಲು ಸಹ ಹೇಳಲಾಗಿದೆ. ಅವುಗಳನ್ನು ಮಾಡುವುದರಿಂದ, ವ್ಯಕ್ತಿಯು ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತೆ ಎಂದು ನಂಬಲಾಗಿದೆ. ನೀವು ಸಹ ನಿಮ್ಮ ಜೀವನದ ಬಿಕ್ಕಟ್ಟನ್ನು ನಿವಾರಿಸಲು ಬಯಸಿದರೆ, ಮಂಗಳವಾರ ಈ ಕ್ರಮಗಳನ್ನು ಮಾಡಿ. ಮಂಗಳವಾರದ ಕ್ರಮಗಳನ್ನು ತಿಳಿದುಕೊಳ್ಳೋಣ.
ಮಂಗಳವಾರದ ಕ್ರಮಗಳು
ಮಂಗಳವಾರ ಮನೆಯಲ್ಲಿ ಹನುಮಂತನ ಐದು ಮುಖದ ಚಿತ್ರವನ್ನು ಇರಿಸಿ. ಇದನ್ನು ಮಾಡುವುದರಿಂದ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Lkshmi) ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. ಅಷ್ಟೇ ಯಾಕೆ ಹನುಮಂತನ ಅನುಗ್ರಹದಿಂದ, ಬುದ್ಧಿವಂತಿಕೆ, ಜ್ಞಾನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ನೀವು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದು ಹಾಕಲು ಬಯಸಿದರೆ, ಮಂಗಳವಾರ ಹನುಮಂತನ ಪೂಜೆಯ ಸಮಯದಲ್ಲಿ ರಾಮ ರಕ್ಷಾ ಸೂತ್ರವನ್ನು (Rama Raksha Sutra) ಪಠಿಸಿ. ಇದನ್ನು ಮಾಡುವುದರಿಂದ ವ್ಯಕ್ತಿಯು ಹನುಮಂತನ ಆಶೀರ್ವಾದವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ನಿಮ್ಮ ಬಯಕೆಗಳನ್ನು ಪೂರೈಸಲು ನೀವು ಬಯಸಿದರೆ, ಮಂಗಳವಾರ ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಇದರ ನಂತರ, ಹನುಮಂತನನ್ನು ಪೂಜಿಸಿ. ಅಲ್ಲದೆ, ಹನುಮಂತನಿಗೆ ಹೂವಿನ ಹಾರಗಳು ಮತ್ತು ಕುಂಕುಮವನ್ನು ಅರ್ಪಿಸಿ. ಇದರ ನಂತರ, ಆರತಿ ಮತ್ತು ನೈವೇದ್ಯ ಮಾಡಿ. ಹೀಗೆ ಮಾಡೋದರಿಂದ ನಿಮ್ಮ ಬಯಕೆಗಳು ಈಡೇರುತ್ತವೆ.
ದೈಹಿಕ ನೋವನ್ನು (Physical Pain) ನಿವಾರಿಸಲು, ಮಂಗಳವಾರ, ಹನುಮಂತನ ಮುಂದೆ ಲೋಟದಲ್ಲಿ ನೀರನ್ನು ತುಂಬಿಟ್ಟು ಹನುಮಾನ್ ಬಹುಕ್ ಪಠಿಸಿ. ಈ ವಿಧಾನವನ್ನು ಸತತ 21 ದಿನಗಳ ಕಾಲ ಮಾಡಿ. ಪಾಠ ಮುಗಿದ ನಂತರ, ನೀರನ್ನು ಕುಡಿಯಿರಿ. ಹಾಗೆ ಮಾಡುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ನೋವುಗಳು (physical and mental pain) ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.