ಹಬ್ಬದ ಡಿಸ್ಕೌಂಟ್ ಆಫರ್ ಜೊತೆ ವಾಹನ ಖರೀದಿಸುತ್ತಿದ್ದಿರಾ? ಇಲ್ಲಿದೆ ಸೆಪ್ಟೆಂಬರ್ ಶುಭ ಮುಹೂರ್ತ!
ಹಲವರು ವಾಹನ ಖರೀದಿ, ಹೊಸ ವಸ್ತುಗಳ ಖರೀದಿ ಸೇರಿದಂತೆ ಪ್ರಮುಖ ಘಟ್ಟಗಳಲ್ಲಿ ಶುಭ ಮುಹೂರ್ತ ನೋಡಿ ಮುಂದುವರಿಯುತ್ತಾರೆ. ಸೆಪ್ಟೆಂಬರ್ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಜೊತೆ ಮನೆಗೆ ವಾಹನ ಖರೀದಿಸಲು ಬಯಸಿದರೆ ಇಲ್ಲಿದೆ ಶುಭ ಮುಹೂರ್ತ.
ಗಣೇಶ ಹಬ್ಬ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಇದರ ಜೊತೆಗೆ ಸಾಲು ಸಾಲು ಹಬ್ಬಗಳು ಆಗಮಿಸಿದೆ. ಮಾರುತಿ ಸುಜುಕಿ ತನ್ನ ಆಯ್ದ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಇತರ ಕಾರು ಕಂಪನಿಗಳು ಆಕರ್ಷಕ ಬೆಲೆಯಲ್ಲಿ ಕಾರು ಮಾರಾಟ ಮಾಡುತ್ತಿದೆ. ಜೊತೆಗೆ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಕಾರು ಖರೀದಿಸಲು ಬಯಸಿದವರಿಗೆ ಹಲವು ಶುಭ ಮುಹೂರ್ತಗಳಿವೆ. ಜ್ಯೋತಿಷ್ಯದ ಪ್ರಕಾರ ಶುಭ ಮುಹೂರ್ತದಲ್ಲಿ ಕಾರು ಖರೀದಿಸುವುದು ಉತ್ತಮ. ಶುಭ ಘಳಿಕೆಯಿಂದ ಎಲ್ಲೆಡೆ ಪಾಸಿಟಿವಿಟಿ ತುಂಬಿರಲಿದೆ. ಜೊತೆಗೆ ವಾಹನ ಪ್ರಯಾಣ ಸುರಕ್ಷಿತವಾಗಿರಲಿದೆ. ಪ್ರಯಾಣದಲ್ಲಿ ವಾಹನದಿಂದ ಸಮಸ್ಯೆಗಳು ಪ್ರಮಾಣ ಕಡಿಮೆ. ಹೀಗೆ ಹಲವು ಕಾರಣಗಳಿಂದ ಶುಭ ಘಳಿಗೆ ಕಾರು ಡೆಲಿವರಿ ಪಡೆದುಕೊಳ್ಳಲು ಅತ್ಯವಶ್ಯತ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಸೆಪ್ಟೆಂಬರ್ ತಿಂಗಳಲ್ಲಿ ಹಲವು ಶುಭ ಮುಹೂರ್ತಗಳಿವೆ. ಈ ಪೈಕಿ ಸೆಪ್ಟೆಂಬರ್ 9 ರಂದು ಸಂಜೆ 6.4 ರಿಂದ ರಾತ್ರಿ 9.53ರ ವರೆಗೆ ಉತ್ತಮ ಘಳಿಗೆ ಇದೆ. ಅನುರಾಧ ನಕ್ಷತ್ರವಾಗಿದೆ. ಈ ಶುಭ ಮುಹೂರ್ತದಲ್ಲಿ ವಾಹನ ಡೆಲಿವರಿ ಪಡೆಯುವುದು, ವಾಹನ ಬುಕಿಂಗ್ ಮಾಡಿಕೊಳ್ಳುವುದು, ಬುಕಿಂಗ್ ಮಾಡಿದ ವಾಹನಕ್ಕೆ ಹಣ ಪಾವತಿ ಸೇರಿದಂತೆ ಇತರ ಕಾರ್ಯಳಿಗೆ ಉತ್ತಮ ಸಮಯವಾಗಿದೆ.
ಸೆಪ್ಟೆಂಬರ್ 9ರ ಬಳಿಕ ಶುಭ ದಿನ ಹಾಗೂ ಘಳಿಕೆ ಸೆಪ್ಟೆಂಬರ್ 15ಕ್ಕೆ ಲಭ್ಯವಿದೆ. ಭಾನುವಾರ ಸಂಜೆ 6.12ರಿಂದ ಮರುದಿನ ಬೆಳಗ್ಗೆ 6.7ರ ವರೆಗೆ ಉತ್ತಮ ಮುಹೂರ್ತವಿದೆ. ಸಾಮಾನ್ಯವಾಗಿ ಶೋ ರೂಂ ಸಂಜೆ 8 ರಿಂದ 9 ಗಂಟೆ ವರೆಗೆ ತೆರೆದಿರುತ್ತದೆ. ಇನ್ನು ಶುಭಮೂಹೂರ್ತದ ಸಮಯ ದಿನಾಂಕ ಮೊದಲೇ ತಿಳಿಸಿದ್ದರೆ ಅದೇ ಸಮಯದಲ್ಲಿ ವಾಹನ ಡೆಲಿವರಿಗೆ ಶೋ ರೂಂ ಸಿಬ್ಬಂದಿಗಳು ವ್ಯವಸ್ಥೆ ಮಾಡುತ್ತಾರೆ. ನಕ್ಷತ್ರ ಧನಷ್ಠ.
ಸೆಪ್ಟೆಂಬರ್ 16ರ ಸೋಮವಾರ ಬೆಳಗ್ಗೆ 6.07ರಿಂದ ಮಧ್ಯಾಹ್ನ 3.10ರ ವರೆಗೆ ಶುಭ ಘಳಿಗೆ ಇದೆ. ಈ ಶುಭ ಘಳಿಗೆಯ ನಕ್ಷತ್ರ ಧನಿಷ್ಠ. ಸೆಪ್ಟೆಂಬರ್ ತಿಂಗಳಲ್ಲಿ ಸದ್ಯ ಈ ಮೂರು ದಿನ ಹಾಗೂ ಸಮಯ ವಾಹನ ಖರೀದಿ ಸೇರಿದಂತೆ ವಾಹನ ಕುರಿತ ಕಾರ್ಯಗಳಿಗೆ ಉತ್ತಮವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.
ಶುಭ ಮುಹೂರ್ತದಲ್ಲಿ ವಾಹನ ಖರೀದಿ ಮಾಲೀಕರ ಪ್ರಗತಿಯಲ್ಲೂ ಕೊಡುಗೆ ನೀಡಲಿದೆ. ಒಂದು ವಾಹನ ಖರೀದಿ ಮಾಲೀಕರ ಎಲ್ಲಾ ರೀತಿಯ ಅಭಿವೃದ್ಧಿಗೂ ಕಾರಣವಾಗಬೇಕು. ಇದಕ್ಕಾಗಿ ಪಾಸಿಟಿವಿಟಿ ತುಂಬಿದ ಶುಭ ಘಳಿಗೆ ಮಹತ್ವವಾಗಿದೆ ಎಂದು ಜ್ಯೋತಿಷಿಷ್ಯ ಶಾಸ್ತ್ರ ಹೇಳುತ್ತಿದೆ.