ಜನವರಿ 2025 ತಿಂಗಳಲ್ಲಿ ವಾಹನ ಖರೀದಿಗೆ ಇದೆ ಶುಭ ಮಹೂರ್ತ, ಈ ಘಳಿಗೆ ಹೆಚ್ಚಿಸಲಿದೆ ಸಂಪತ್ತು!
ಹೊಸ ವರ್ಷದಲ್ಲಿ ಹೊಸ ವಾಹನ ಖರೀದಿ ಹಲವರ ಕನಸು. ವಾಹನ ಖರೀದಿಸುವವರು, ಈಗಾಗಲೇ ಬುಕಿಂಗ್ ಮಾಡಿರುವವರು ಈ ತಿಂಗಳಲ್ಲಿ ಶುಭ ಮುಹೂರ್ತದಲ್ಲಿ ಕಾರು ಮನೆಗೆ ತನ್ನಿ. ಕಾರಣ ಈ ಶುಭಮುಹೂರ್ತ ನಿಮ್ಮ ಯಶಸ್ಸು, ಸಂಪತ್ತು, ಹೆಚ್ಚಿಸಲಿದೆ. ಈ ಶುಭ ಘಳಿಗೆ ಮಾಹಿತಿ ಇಲ್ಲಿದೆ.
ಹೊಸ ವರ್ಷದಲ್ಲಿ ಹಲವರು ಹೊಸ ವಾಹನ ಖರೀದಿಗೆ ಮನಸ್ಸು ಮಾಡಿದ್ದಾರೆ. ಕೆಲವರು ಈಗಾಗಲೇ ಬುಕಿಂಗ್ ಮಾಡಿಕೊಂಡಿದ್ದಾರೆ. ಒಂದಷ್ಟು ಮಂದಿ ಸೂಕ್ತ ವಾಹನ, ಹಣಕಾಸು ಸೇರಿದಂತೆ ಹಲವು ಚರ್ಚೆಯಲ್ಲಿ ನಿರತರಾಗಿದ್ದಾರೆ. ಹೊಸ ವರ್ಷದಲ್ಲೆ ಕೆಲ ಕಂಪನಿಗಳು ಆಫರ್ ನೀಡುತ್ತಿದೆ. ನೀವು ಕಾರು ಅಥವಾ ವಾಹನ ಖರೀದಿಸಲು ಈ ಜನವರಿ ತಿಂಗಳಲ್ಲಿ ಕೆಲ ಶುಭ ಘಳಿಗೆಗಳು ಇವೆ.
ಜನವರಿ ತಿಂಗಳಲ್ಲಿನ ಈ ಘಳಿಗೆಯಲ್ಲಿ ವಾಹನ ಖರೀದಿಸಿದರೆ, ಯಶಸ್ಸು ಹೆಚ್ಚಾಗಲಿದೆ. ಜೊತೆಗೆ ನಿಮ್ಮ ಖರೀದಿ ಶಕ್ತಿ ಸಾಮರ್ಥ್ಯವೂ ದುಪ್ಪಟ್ಟಾಗಲಿದೆ. ವಾಹನದಿಂದ ಯಶ್ಸು ನಿಮ್ಮದಾಗಲಿದೆ. ಹೀಗಾಗಿ ಕಾರು ಬುಕಿಂಗ್ ಮಾಡಿ ಡೆಲಿವರಿಗೆ ಸಿದ್ದವಾಗಿರುವ ಹಲವರು ಈ ಶುಭ ಮೂಹೂರ್ತದಲ್ಲೇ ಕಾರು ಮನೆಗೆ ತರಲು ಸಜ್ಜಾಗಿದ್ದಾರೆ.
ಜನವರಿ 5ರಂದು ಶುಭ ಘಳಿಗೆ ಇದೆ. ಆದರೆ ಜನವರಿ 5ರ ರಾತ್ರಿ 8.18ರಿಂದ ಜನವರಿ 6ರ ಸಂಜೆ 6.25ರ ವರೆಗೆ ಶುಭ ಘಳಿಗೆ ಇದೆ. ಈ ಶುಭ ಮೂಹೂರ್ತ ಕಾರು ಸೇರಿದಂತೆ ಯಾವುದೇ ವಾಹನ ಖರೀದಿಸಲು ಉತ್ತಮ ಸಮಯವಾಗಿದೆ. ಈ ಶುಭ ಘಳಿಗೆಯ ನಕ್ಷತ್ರ ಉತ್ರ ಭಾದ್ರಪದ. ವಾಹನ ಖರೀದಿಸುವವರು ನಕ್ಷತ್ರ ಗಮನಿಸಿ ನಿಮಗೆ ಹೊಂದಿಕೆಯಾಗುವ ಶುಭ ಘಳಿಗೆಯಲ್ಲಿ ಕಾರು ಖರೀದಿ ಉತ್ತಮವಾಗಿದೆ.
ಜನವರಿ ತಿಂಗಳ 8ನೇ ದಿನಾಂಕದಂದೂ ಉತ್ತಮ ಮುಹೂರ್ತವಿದೆ. ಜನವರಿ 8ರ ಮಧ್ಯಾಹ್ನ 2.26ರಿಂದ ಸಂಜೆ 4.29ರ ವರೆಗೆ ಶುಭ ಘಳಿಗೆ ಲಭ್ಯವಿದೆ. ಅಶ್ವಿನಿ ನಕ್ಷತ್ರವಾಗಿದೆ. ಜನವರಿ 8 ಬುಧವಾರವಾಗಿದೆ. ಹೀಗಾಗಿ ಮತ್ತಷ್ಟು ಉತ್ತಮ ಫಲ ನಿಮ್ಮದಾಗಲಿದೆ. ಹಲವರಿಗೆ ಬುಧವಾರ ಮಾಡಿದ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿದೆ.
ಜನವರಿ 10 ರಂದು ವಾಹನ ಖರೀದಿಸುವವರಿಗೆ ಶುಭ ಘಳಿಗೆ ಲಭ್ಯವಿದೆ. ಶುಕ್ರವಾರ ಮಧ್ಯಾಹ್ನ 1.35ರಿಂದ ಶುಭ ಮುಹೂರ್ತ ಆರಂಭಗೊಳ್ಳಲಿದೆ. ಜನವರಿ 11ರ ಬೆಳಗ್ಗೆ 6.38ರ ವರೆಗೆ ಇರಲಿದೆ. ಇದರ ನಡುವೆ ನಿಮ್ಮ ಸಮಯಕ್ಕೆ ಹೊಂದಿಸಿಕೊಂಡು ವಾಹನ ಡೆಲಿವರಿ ಪಡೆಯಬಹುದು. ಶುಕ್ರವಾರ ಹಾಗೂ ಶನಿವಾರದ ಈ ಶುಭಘಳಿಗೆ ರೋಹಣಿ ನಕ್ಷತ್ರವಾಗಿದೆ.
ಜನವರಿಯಲ್ಲಿನ ಮತ್ತೊಂದು ಅತ್ಯುತ್ತಮ ಶುಭಘಳಿಗೆ 14. ಇದು ಮಹಾ ಸಂಕ್ರಾತಿ ದಿನವಾಗಿದೆ. ಬೆಳಗ್ಗೆ 3.56ರಿಂದ 6.38ರ ವರೆಗೆ ವಾಹನ ಖರೀದಿಗೆ ಶುಭ ಘಳಿಗೆಯಾಗಿದೆ. ಈ ಶುಭಘಳಿಗೆ ನಕ್ಷತ್ರ ಪುನರ್ವಸು. ಇದರ ಜೊತೆಗೆ ಮಹಾ ಸಂಕ್ರಾಂತಿ ಶುಭಫಲಗಳು ನಿಮ್ಮದಾಗಲಿದೆ. ಈ ಶುಭ ದಿನ ನಿಮ್ಮ ಸಾಧನೆಗೆ ಸಿಕ್ಕ ಯಶಸ್ಸು ಮಾತ್ರವಲ್ಲ, ದೇವರ ಕೃಪೆ ಪಾತ್ರರಾಗಲು ಸದವಕಾಶವಿದೆ.