ಆಗಸ್ಟ್ ತಿಂಗಳಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟವೇ ಬದಲಾಗಲಿದೆ!
ಇನ್ನೇನು ಆಗಸ್ಟ್ ತಿಂಗಳು ಆರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಈ ತಿಂಗಳು ಗೃಹ ನಕ್ಷತ್ರದ ಅನುಸಾರ ಈ ನಾಲ್ಕು ರಾಶಿಗಳಿಗೆ ಶುಭ ಪರಿಣಾಮ ಉಂಟಾಗಲಿದೆ.
ಜುಲೈ ಮುಗಿದಿದೆ. ಇನ್ನು ಆಗಸ್ಟ್ (August) ಆರಂಭವಾಗಲಿದೆ. ಮುಂದಿನ ತಿಂಗಳು ನಮ್ಮ ಗ್ರಹ ಗತಿ ಹೇಗಿರದೆ ಎಂದು ಯೋಚನೆ ಮಾಡ್ತಿರೋರಿಗೆ ಇಲ್ಲಿದೆ ಸಿಹಿ ಸುದ್ದಿ. ಯಾಕಂದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳಲ್ಲಿ ನಾಲ್ಕು ರಾಶಿಯ ಜನರಿಗೆ ಶುಭ ಪರಿಣಾಮ ಉಂಟಾಗಲಿದೆ.
ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ಆಗಸ್ಟ್ ತಿಂಗಳಲ್ಲಿ, ನಾಲ್ಕು ರಾಶಿಯ ಜನರಿಗೆ ಧನ, ಸಂಪತ್ತು, ಕರಿಯರ್ , ಆರೋಗ್ಯದ ವಿಷಯದಲ್ಲಿ ತುಂಬಾನೆ ಲಾಭ ಉಂಟಾಗಲಿದೆ. ಯಾವ ರಾಶಿಯ ಜನರಿಗೆ ಆಗಸ್ಟ್ ತಿಂಗಳು ಲಾಭ ಉಂಟಾಗಲಿದೆ ಅನ್ನೋದನ್ನ ನೋಡೋಣ.
ಮೇಷ (Aries) : ಮೇಷ ರಾಶಿಯ ಜನರಿಗೆ ಆಗಸ್ಟ್ ತಿಂಗಳಲ್ಲಿ ಉಡುಗೊರೆ, ಸನ್ಮಾನ, ಗೌರವ ಸಿಗುತ್ತದೆ. ತಡೆಯಾಗಿದ್ದ ಹಣವೂ ಬರುತ್ತದೆ. ಆರೋಗ್ಯದಲ್ಲೂ ಸುಧಾರಣೆ ಕಾಣುತ್ತದೆ. ಫ್ಯಾಮಿಲಿ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಕನ್ಯಾ (Virgo) : ನಿಮ್ಮ ಕರಿಯರ್ ಈ ತಿಂಗಳು ಉನ್ನತಮಟ್ಟದಲ್ಲಿರುತ್ತೆ. ಸಂಪತ್ತಿನ ಸಮಸ್ಯೆ ನಿವಾರಣೆಯಾಗುತ್ತದೆ. ಫ್ಯಾಮಿಲಿ ಸಮಸ್ಯೆಯೂ ನಿವಾರಣೆಯಾಗಲಿದೆ. ಸಂತಾನ ಭಾಗ್ಯ ಸಿಗಲಿದೆ. ಅನಾರೋಗ್ಯ ಸಮಸ್ಯೆಯಿಂದ ದೂರವಿರುವಿರಿ.
ವೃಶ್ಚಿಕ (Scorpio) : ಕರಿಯರ್, ವ್ಯಾಪಾರ ಮೊದಲಾದವುಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದು ನಿವಾರಣೆಯಾಗುತ್ತೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತೆ. ಮಾನಸಿಕ ಶಾಂತಿ ಸಿಗಲಿದೆ. ಮನೆಯಲ್ಲಿ ಸಂತೋಷ ಮತ್ತು ಸಕಾರಾತ್ಮಕತೆ ಸದಾ ಇರುತ್ತೆ.
ಕುಂಭ (Aquarius) : ಕುಂಭ ರಾಶಿಯ ಜನರಿಗೆ ವ್ಯಾಪಾರದಲ್ಲಿ ವೃದ್ಧಿ ಉಂಟಾಗಲಿದೆ. ಕೆಲಸ ಸ್ಥಳದಲ್ಲಿ ಗೌರವ, ಸನ್ಮಾನ ಸಿಗಲಿದೆ. ಸಂಬಳ ಹೆಚ್ಚಬಹುದು ಮತ್ತು ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಿಹಿ ಸದಾ ಇರುತ್ತೆ.
ಈ ಮೂರು ರಾಶಿಯ ಜನರು ಹುಷಾರಾಗಿರಬೇಕು
ಆಗಸ್ಟ್ ತಿಂಗಳಲ್ಲಿ ವೃಷಭ, ಕರ್ಕಾಟಕ ಮತ್ತು ಧನು ರಾಶಿಯ ಜನರಿಗೆ ಆರ್ಥಿಕ, ಕರಿಯರ್ ಮತ್ತು ಆರೋಗ್ಯದ ವಿಷಯದಲ್ಲಿ ಸಮಸ್ಯೆಗಳು ಉಂಟಾಗಲಿವೆ. ನಷ್ಟ ಕೂಡ ಉಂಟಾಗಲಿದೆ ಜಾಗೃತೆ ವಹಿಸಿ.
ಆಗಸ್ಟ್ ತಿಂಗಳಲ್ಲಿ ನಿಮಗೆ ಯಾವುದೇ ಸಮಸ್ಯೆ ಬರಬಾರದು ಮತ್ತು ಸಮಸ್ಯೆಗಳಿಂದ ಮುಕ್ತರಾಗಬೇಕು ಅಂದ್ರೆ, ಶಿವನಿಗೆ (Lord Shiva) ಜಲಾಭಿಷೇಕ ಮಾಡಿ, ಜೊತೆಗೆ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ದಾನ ಮಾಡಿ. ಇದರಿಂದ ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗುತ್ತೆ.