ಪರೀಕ್ಷೆ, ಸಂದರ್ಶನಕ್ಕೆ ಹೋಗುವಾಗ ಹೀಗೆ ಮಾಡಿದ್ರೆ ಗೆಲುವು ನಿಮ್ದೇ
ನಿಮಗೆ ಇಷ್ಟವಾದ ಕೆಲಸ ಅಥವಾ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಬರ್ತಿಲ್ವಾ? ಎಲ್ಲ ರೀತಿಯಿಂದ ಟ್ರೈ ಮಾಡಿ ಸುಸ್ತಾಗಿದ್ದೀರಾ? ಹಾಗಾದ್ರೆ ನಿಮಗೋಸ್ಕರವೇ ಈ ಟಿಪ್ಸ್. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಟ್ರಿಕ್ಸ್ ಫಾಲೋ ಮಾಡೋದ್ರಿಂದ ಈ ಅಡೆತಡೆಗಳನ್ನ ದಾಟಿ ಗೆಲುವು ನಿಮ್ಮದಾಗಿಸಿಕೊಳ್ಳಬಹುದು.

ತುಂಬಾ ಸಲ ಎಷ್ಟೇ ಪ್ರಯತ್ನ ಪಟ್ಟರೂ ಇಷ್ಟವಾದ ಕೆಲಸ ಸಿಗೋದಿಲ್ಲ. ಒಂದು ವೇಳೆ ಕೆಲಸ ಸಿಕ್ಕರೂ ಸಂಬಳ ಸರಿ ಇರೋದಿಲ್ಲ. ಕೆಲವರು ಪರೀಕ್ಷೆಗಳಿಗೆ ಎಷ್ಟು ಪ್ರಿಪೇರ್ ಆದರೂ ರಿಸಲ್ಟ್ ಮಾತ್ರ ಇರೋದಿಲ್ಲ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಟ್ರಿಕ್ಸ್ ಫಾಲೋ ಮಾಡೋದ್ರಿಂದ ಈ ತರಹದ ಸಮಸ್ಯೆಗಳಿಂದ ಹೊರಗೆ ಬರಬಹುದಂತೆ. ಅವು ಯಾವವು ಅಂತ ಇಲ್ಲಿ ತಿಳ್ಕೊಳ್ಳೋಣ.
ದೊಡ್ಡವರ ಆಶೀರ್ವಾದ
ಸಾಮಾನ್ಯವಾಗಿ ನಾವು ಪರೀಕ್ಷೆಗಳಿಗೆ, ಇಂಟರ್ವ್ಯೂಗಳಿಗೆ, ಅಥವಾ ಯಾವುದಾದರೂ ಮುಖ್ಯವಾದ ಕೆಲಸದ ಮೇಲೆ ಹೊರಗಡೆ ಹೋಗುವಾಗ ಅವಸರವಾಗಿ ಹೋಗ್ತಾ ಇರ್ತೀವಿ. ಆದ್ರೆ ಜ್ಯೋತಿಷ್ಯದ ಪ್ರಕಾರ ಹೊರಗಡೆ ಹೋಗೋ ಮುಂಚೆ ಮನೆಯಲ್ಲಿ ದೇವರಿಗೆ ನಮಸ್ಕಾರ ಮಾಡಿಕೊಳ್ಳಬೇಕು. ದೊಡ್ಡವರ ಆಶೀರ್ವಾದ ತೆಗೆದುಕೊಳ್ಳಬೇಕು. ಆವಾಗ ಹೋದ ಕೆಲಸ ಸಕ್ಸಸ್ ಫುಲ್ ಆಗಿ ಪೂರ್ತಿಯಾಗುತ್ತೆ ಅನ್ನೋ ನಂಬಿಕೆ.
ಮನೆ ಬಾಗಿಲಿಗೆ...
ಗೆಲುವು ನಿಮ್ಮ ಬೆನ್ನ ಹಿಂದೆ ಬರಬೇಕಂದ್ರೆ ಯಾವುದಾದರೂ ಕೆಲಸದ ಮೇಲೆ ಹೊರಗಡೆ ಹೋಗೋ ಮುಂಚೆ ಮನೆ ಬಾಗಿಲ ಹತ್ರ ಕೆಲವು ಕಾಳುಮೆಣಸು ಹಾಕಿ. ಅದರ ಮೇಲೆ ನಡ್ಕೊಂಡು ಹೋಗಿ. ಹಿಂದಕ್ಕೆ ತಿರುಗಿ ನೋಡಬೇಡಿ.
ಸಿಹಿ ತಿನ್ನಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದಾದರೂ ಕೆಲಸದ ಮೇಲೆ ಹೊರಗಡೆ ಹೋಗೋ ಮುಂಚೆ ಸಿಹಿ ತಿಂದು ಹೋಗಿ. ಇದು ಗೆಲುವು ಕೊಡುತ್ತೆ. ನಿಮ್ಮ ಜೀವನವನ್ನ ಇನ್ನಷ್ಟು ಸಿಹಿಯಾಗಿಸುತ್ತೆ.
ನಿಂಬೆಹಣ್ಣಿನಲ್ಲಿ..
ಕೆಲಸದ ಮೇಲೆ ಹೊರಗಡೆ ಹೋಗೋ ಮುಂಚೆ ಒಂದು ನಿಂಬೆಹಣ್ಣಿನಲ್ಲಿ ನಾಲ್ಕು ಲವಂಗ ಚುಚ್ಚಿ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಹೋಗಿ.
ತುಳಸಿ ಎಲೆಗಳು
ಜ್ಯೋತಿಷ್ಯದ ಪ್ರಕಾರ ಗೆಲುವಿಗಾಗಿ ಹೊರಗಡೆ ಹೋಗೋ ಮುಂಚೆ 5 ತುಳಸಿ ಎಲೆ ತಿಂದು ನೀರು ಕುಡಿಯಿರಿ. ಅಥವಾ ಒಂದು ಸ್ಪೂನ್ ತುಪ್ಪದಲ್ಲಿ ಸ್ವಲ್ಪ ಸಕ್ಕರೆ ಮಿಕ್ಸ್ ಮಾಡಿ ತಿಂದು ಹೋಗಿ. ಇದು ಗೆಲುವು ಕೊಡುತ್ತೆ. ಹಸುವಿಗೆ ಹಸಿರು ಹುಲ್ಲು ತಿನ್ನಿಸಿ. ಇದು ಕೂಡ ನಿಮ್ಮ ವಿಜಯಕ್ಕೆ ಸಹಾಯ ಮಾಡುತ್ತೆ.