ಗುರುವಾರ ಮಹಿಳೆಯರು ತಲೆ ಸ್ನಾನ ಮಾಡಬಾರದು ಅಂತ ಧರ್ಮಗ್ರಂಥಗಳು ಹೇಳಿದ್ದೇಕೆ?
ಧರ್ಮಗ್ರಂಥಗಳಲ್ಲಿ ಬರೆಯಲಾದ ಅನೇಕ ವಿಷಯಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ನಮ್ಮ ದೈನಂದಿನ ದಿನಚರಿಗೆ ಸಂಬಂಧಿಸಿದ ಅಂತಹ ಅನೇಕ ನಿಯಮಗಳನ್ನು ಮಾಡಲಾಗಿದೆ, ಅವುಗಳನ್ನು ಅನುಸರಿಸಲು ಸೂಚಿಸಲಾಗಿದೆ. ಅಂತಹ ನಿಯಮಗಳ ಬಗ್ಗೆ ನೋಡೋಣ.
ಧರ್ಮಗ್ರಂಥಗಳಲ್ಲಿ ಕೆಲವೊಂದು ವಿಷ್ಯಗಳನ್ನು ಉಲ್ಲೇಖಿಸಲಾಗಿದೆ. ಅದು ನಿಮ್ಮ ಜೀವನದಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ. ಅವುಗಳಲ್ಲಿ ಕೂದಲನ್ನು ತೊಳೆಯುವುದು ಸಹ ಒಂದು. ಕೂದಲನ್ನು ತೊಳೆಯಲು (hair wash) ಕೆಲವು ನಿಯಮಗಳನ್ನು ಅನುಸರಿಸುವಂತೆ ಮನೆಯ ಹಿರಿಯರಿಂದ ನೀವು ಅನೇಕ ಬಾರಿ ಕೇಳಿರಬಹುದು ಅಲ್ವಾ? ಅಂಥಹ ನಂಬಿಕೆಗಳ ಬಗ್ಗೆ ಶಾಸ್ತ್ರ ಏನು ಹೇಳುತ್ತೆ ನೋಡೋಣ.
ವಾರದ ಕೆಲವು ದಿನಗಳಲ್ಲಿ ನೀವು ಕೂದಲನ್ನು ತೊಳೆಯಬಾರದು ಎಂದು ಹೇಳಲಾಗುತ್ತೆ, ಆ ದಿನ ಕೂದಲು ತೊಳೆದರೆ ಹಣದ ನಷ್ಟವಾಗಬಹುದು.ಈ ದಿನಗಳಲ್ಲಿ ಒಂದು ಗುರುವಾರ. ಈ ದಿನ ನೀವು ನಿಮ್ಮ ಕೂದಲನ್ನು ತೊಳೆದರೆ, ಹಣ ಕಳೆದುಕೊಳ್ಳಬಹುದು (losing money) ಮತ್ತು ಅನೇಕ ರೀತಿಯ ನಷ್ಟ ಉಂಟಾಗಬಹುದು. ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ, ಕೂದಲು ತೊಳೆಯುವ ಬಗ್ಗೆ ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ. ಅವುಗಳನ್ನು ಅನುಸರಿಸೋದು ಸಹ ಮುಖ್ಯ ಎನ್ನಲಾಗಿದೆ.
ಧರ್ಮಗ್ರಂಥಗಳ ಪ್ರಕಾರ ಕೂದಲನ್ನು ತೊಳೆಯುವ ನಿಯಮಗಳು
ನೀವು ವಾರದ ಕೆಲವು ದಿನಗಳಲ್ಲಿ ಮಾತ್ರ ಕೂದಲನ್ನು ತೊಳೆಯಬೇಕು ಮತ್ತು ಕೆಲವು ದಿನಗಳಲ್ಲಿ ಕೂದಲನ್ನು ತೊಳೆಯುವುದನ್ನು ತಪ್ಪಿಸಬೇಕು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇವುಗಳಲ್ಲಿ ಗುರುವಾರವೂ (Thursday) ವಿಶೇಷ. ಈ ದಿನ ಕೂದಲನ್ನು ತೊಳೆಯುವುದು ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳಿಗೆ (Difference of Opinion) ಕಾರಣವಾಗಬಹುದು ಎಂದು ನಂಬಲಾಗಿದೆ.
ಏಕೆ ನಿಷೇಧ?
ಗುರುವಾರ ಯಾವುದೇ ಮಹಿಳೆ ಅಥವಾ ಪುರುಷನು ಕೂದಲನ್ನು ತೊಳೆಯುವುದರಿಂದ ಅವರ ಮದುವೆಯಲ್ಲಿ ಸಮಸ್ಯೆಗಳು (problem in marriage), ಗಂಡನೊಂದಿಗೆ ಭಿನ್ನಾಭಿಪ್ರಾಯ ಮತ್ತು ಹಣದ ನಷ್ಟಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ ಮಹಿಳೆಯ ಜಾತಕದಲ್ಲಿ ಗುರು ಗ್ರಹ ಗಂಡ ಮತ್ತು ಮಗುವಿನ ಅಂಶ.. ಹಾಗಾಗಿ ಈ ದಿನ ಕೂದಲನ್ನು ತೊಳೆದರೆ, ಅದು ಗಂಡನೊಂದಿಗಿನ ವಿವಾದದ ಜೊತೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನೆಯಲ್ಲಿ ಯಾವಾಗಲೂ ಆರ್ಥಿಕ ಬಿಕ್ಕಟ್ಟು ಇರುತ್ತದೆ. ಅದೇ ಸಮಯದಲ್ಲಿ, ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಗುರುವಾರ ಉಪವಾಸ ಮಾಡಿದರೆ, ಈ ದಿನ ಮರೆತು ಕೂಡ ಕೂದಲು ತೊಳೆಯಬಾರದು, ಇದರಿಂದ ಮನೆಯಲ್ಲಿ ಸಮಸ್ಯೆ ಹೆಚ್ಚಬಹುದು.
ಗ್ರಹಗಳ ಅಸಮಾಧಾನ ಹೆಚ್ಚಿಸುತ್ತದೆ
ವಾರದ ಪ್ರತಿಯೊಂದು ದಿನವನ್ನು ಒಂದು ನಿರ್ದಿಷ್ಟ ಗ್ರಹ ಎಂದು ಪರಿಗಣಿಸಲಾಗುತ್ತದೆ. ಗುರುವಾರ ಗುರು ಗ್ರಹಕ್ಕೆ ಸಂಬಂಧಿಸಿದೆ. ಕೂದಲನ್ನು ತೊಳೆಯುವುದು ಗುರುಗ್ರಹದ ಅಸಮಾಧಾನಕ್ಕೆ ಕಾರಣವಾಗಬಹುದು, ಜೊತೆಗೆ ಗುರುವು ತರುವ ಸಕಾರಾತ್ಮಕ ಶಕ್ತಿಯನ್ನು (positive energy) ತೆಗೆದುಹಾಕಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ.
ವಿಜ್ಞಾನ ಏನು ಹೇಳುತ್ತದೆ
ವಿಜ್ಞಾನದ ಬಗ್ಗೆ ಮಾತನಾಡುವುದಾದರೆ, ಗುರುವಾರ ಕೂದಲನ್ನು ತೊಳೆಯಬೇಕೆ ಅಥವಾ ಬೇಡವೇ ಎಂಬುದು ನಿಮ್ಮ ಆಯ್ಕೆಯನ್ನು ಅವಲಂಬಿಸಿರುತ್ತದೆ ಮತ್ತು ಅದು ವೈಯಕ್ತಿಕ ಆಲೋಚನೆಯನ್ನು ಆಧರಿಸಿದೆ ಎಂದು ವಿಜ್ಞಾನ ಹೇಳುತ್ತೆ. ವಿಜ್ಞಾನದ ಪ್ರಕಾರ, ಈ ದಿನ ಕೂದಲನ್ನು ತೊಳೆಯುವುದರಿಂದ ಯಾವುದೇ ಹಾನಿ ಇಲ್ಲ ಮತ್ತು ಅದಕ್ಕೆ ಯಾವುದೇ ದೃಢವಾದ ಕಾರಣವಿಲ್ಲ.
ಗುರುವಾರ ಕೂದಲನ್ನು ತೊಳೆಯದಿರುವ ಸಂಪ್ರದಾಯವು ಶತಮಾನಗಳಿಂದ ನಡೆಯುತ್ತಿದೆ. ಆಧುನಿಕ ಕಾಲದಲ್ಲಿ ಗುರುವಾರ ಕೂದಲನ್ನು ತೊಳೆಯುವುದು ನಿಮ್ಮ ವೈಯಕ್ತಿಕ ಆಯ್ಕೆಯಾಗಿದ್ದರೂ, ಈ ಸಂಪ್ರದಾಯವು ಶತಮಾನಗಳಿಂದ ನಡೆಯುತ್ತಿದೆ ಮತ್ತು ಇದನ್ನು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ವಿಜ್ಞಾನವೋ, ಜ್ಯೋತಿಷ್ಯವೋ ಆಯ್ಕೆ ನಿಮಗೆ ಬಿಟ್ಟದ್ದು.