ಮದುವೆಯಾದ ಮಹಿಳೆಯರ ಕಪ್ಪು ದಾರ ಕಟ್ಟಿಕೊಂಡರೆ ಏನಾಗುತ್ತೆ ಗೊತ್ತಾ?
ಗಂಡಸರು, ಹೆಂಗಸರು, ಚಿಕ್ಕವರು, ದೊಡ್ಡವರು ಅಂತಾ ಬೇಧ ಇಲ್ಲದೆ ಎಲ್ಲರೂ ಕಾಲಿಗೋ ಅಥವಾ ಕೈಗೋ ಕಪ್ಪು ದಾರ ಕಟ್ಟಿಕೊಳ್ಳೋದನ್ನ ನಾವು ನೋಡ್ತಾನೆ ಇದ್ದೀವಿ. ಸಾಮಾನ್ಯವಾಗಿ ಈ ಕಪ್ಪು ದಾರ ಕೆಟ್ಟ ದೃಷ್ಟಿ ಬೀಳದ ಹಾಗೆ ಕಾಪಾಡುತ್ತೆ ಅಂತಾ ನಂಬಿಕೆ. ಆದ್ರೆ ಮದುವೆಯಾದ ಹೆಂಗಸರು ಕಪ್ಪು ದಾರ ಕಟ್ಟಿಕೊಂಡ್ರೆ ಏನಾಗುತ್ತೆ ನಿಮಗೆ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಬಣ್ಣಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ. ಕೆಟ್ಟ ದೃಷ್ಟಿಯಿಂದ ನಿಮ್ಮನ್ನ ನೀವು ರಕ್ಷಣೆ ಮಾಡಿಕೊಳ್ಳಬೇಕು ಅಂದ್ರು ಅಥವಾ ನೆಗೆಟಿವ್ ಎನರ್ಜಿಯಿಂದ ದೂರ ಇರಬೇಕು ಅಂದ್ರು ಕಪ್ಪು ದಾರ ಕಟ್ಟಿಕೊಳ್ಳಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದ್ರೆ ಕಪ್ಪು ದಾರ ಎಲ್ಲರೂ ಕಟ್ಟಿಕೊಳ್ಳಬಹುದಾ? ಮುಖ್ಯವಾಗಿ ಮದುವೆಯಾದ ಹೆಂಗಸರು. ಅವರು ಕಟ್ಟಿಕೊಂಡ್ರೆ ಏನಾದ್ರೂ ಸಮಸ್ಯೆಗಳು ಬರುತ್ತಾ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಅಂತಾ ಇಲ್ಲಿ ನೋಡೋಣ.
ಕಪ್ಪು ದಾರ ಯಾರು ಕಟ್ಟಿಕೊಳ್ಳಬಾರದು?
ಕೆಲವರು ಕಪ್ಪು ದಾರ ಕಟ್ಟಿಕೊಳ್ಳಬಾರದು, ಕಪ್ಪು ದಾರ ಅವರಿಗೆ ಅಶುಭ ಅಂತಾ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಮದುವೆಯಾದ ಹೆಂಗಸರು ಕಪ್ಪು ದಾರ ಕಟ್ಟಿಕೊಳ್ಳಬಹುದಾ ಅಥವಾ ಬೇಡವಾ ಅನ್ನೋ ಪ್ರಶ್ನೆ ತುಂಬಾ ಜನರಲ್ಲಿ ಇರುತ್ತೆ. ಯಾಕಂದ್ರೆ ಮದುವೆಯಾದ ಹೆಂಗಸರಿಗೆ ಕಪ್ಪು ಬಣ್ಣ ಅಶುಭ ಅಂತಾ ಭಾವಿಸುತ್ತಾರೆ.
ಕೆಲವು ಕಡೆಗಳಲ್ಲಿ ಮದುವೆಯಾದ ಹೆಂಗಸರು ಕಪ್ಪು ಬಣ್ಣದ ಬಟ್ಟೆ ಕೂಡ ಹಾಕಿಕೊಳ್ಳಬಾರದು.. ಅದರಿಂದ ಕೆಟ್ಟದ್ದು ಆಗುತ್ತೆ ಅಂತಾ ನಂಬುತ್ತಾರೆ. ಹಾಗಾಗಿ ಅಂತಾ ಪರಿಸ್ಥಿತಿಯಲ್ಲಿ ಮದುವೆಯಾದ ಹೆಂಗಸರು ಕಪ್ಪು ದಾರ ಕಟ್ಟಿಕೊಳ್ಳಬಹುದಾ ಅಥವಾ ಬೇಡವಾ ಅನ್ನೋ ವಿಷಯ ಇಲ್ಲಿ ತಿಳ್ಕೊಳ್ಳೋಣ.
ಮದುವೆಯಾದ ಹೆಂಗಸರು ಕಪ್ಪು ದಾರ ಕಟ್ಟಿಕೊಳ್ಳಬಹುದಾ?
ನಿಜವಾಗಿ ಕಪ್ಪು ಬಣ್ಣ ಶನಿ ದೇವರಿಗೆ ತುಂಬಾ ಇಷ್ಟವಾದದ್ದು ಅಂತಾ ಹೇಳ್ತಾರೆ. ಕಪ್ಪು ದಾರ ಕಟ್ಟಿಕೊಂಡ್ರೆ, ಶನಿ ದೇವರ ಆಶೀರ್ವಾದ ಹಾಗೇ ಇರುತ್ತದೆಯಂತೆ. ಅಷ್ಟೇ ಅಲ್ಲದೆ ಸಾಡೇ ಸಾತಿ, ಬೇರೆ ಕೆಟ್ಟ ಪರಿಸ್ಥಿತಿಗಳಿಂದ ರಿಲೀಫ್ ಸಿಗುತ್ತದೆಯಂತೆ. ಹಾಗಾಗಿ ಕೆಲವು ನಿಯಮಗಳೊಂದಿಗೆ ಮದುವೆಯಾದ ಹೆಂಗಸರು ಖಂಡಿತ ಕಪ್ಪು ದಾರ ಕಟ್ಟಿಕೊಳ್ಳಬಹುದು. ಇದರಿಂದ ಅವರ ಜಾತಕದಲ್ಲಿ ಶನಿ ದೋಷ ಇರೋದಿಲ್ಲ.
ಈ ನಿಯಮಗಳನ್ನು ಪಾಲಿಸಬೇಕು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಿಯಮಗಳೊಂದಿಗೆ ಮಾತ್ರ ಅವರು ಕಪ್ಪು ದಾರವನ್ನು ಹಾಕಿಕೊಳ್ಳಬೇಕು. ಕಪ್ಪು ದಾರವನ್ನು ಕಾಲಿಗೆ ಕಟ್ಟೋದಕ್ಕೆ ಬದಲಾಗಿ, ಕೈಗೆ ಕಟ್ಟಿಕೊಳ್ಳುವುದು ಒಳ್ಳೆಯದು ಅಂತಾ ಜ್ಯೋತಿಷ್ಯ ಹೇಳುತ್ತೆ. ಮದುವೆಯಾದ ಹೆಂಗಸರ ಕೈಯಲ್ಲಿ ಗುರು ಇರುತ್ತಾರಂತೆ. ಗುರು ಜೊತೆ ಶನಿ ಬರುವುದು ಶುಭ ಅಂತಾ ಪರಿಗಣಿಸಲಾಗುತ್ತದೆಯಂತೆ.